ನಾನು ನನ್ನ ಪೌರತ್ವವನ್ನು ಯಾಕೆ ಸಾಬೀತು ಪಡಿಸಬೇಕು. ನನ್ನ ಬಳಿ ಯಾರೇ ಬಂದು ದಾಖಲೆ ಕೇಳಿದರೂ ಕೊಡುವುದಿಲ್ಲ. ನನ್ನನ್ನು ಕೇಳುವ ಅಧಿಕಾರ ನಿಮಗಿಲ್ಲ ಅಂತ ಹೇಳಿ ಕಳುಹಿಸುತ್ತೇನೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಪೌರತ್ವ ತಿದ್ದುಪಡಿ ಕಾಯಿದೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು(ಜ.12): ನಾನು ನನ್ನ ಪೌರತ್ವವನ್ನು ಯಾಕೆ ಸಾಬೀತು ಪಡಿಸಬೇಕು. ನನ್ನ ಬಳಿ ಯಾರೇ ಬಂದು ದಾಖಲೆ ಕೇಳಿದರೂ ಕೊಡುವುದಿಲ್ಲ. ನನ್ನನ್ನು ಕೇಳುವ ಅಧಿಕಾರ ನಿಮಗಿಲ್ಲ ಅಂತ ಹೇಳಿ ಕಳುಹಿಸುತ್ತೇನೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಪೌರತ್ವ ತಿದ್ದುಪಡಿ ಕಾಯಿದೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬೇಕಿರುವುದು ಇಇಇ (ಶಿಕ್ಷಣ, ಉದ್ಯೋಗ, ಆರ್ಥಿಕತೆ)’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
undefined
ಮಡಿಕೇರಿಯಲ್ಲಿ ಮಿಗ್ ಯುದ್ಧ ವಿಮಾನ..!
ಹಿಂದುಳಿದ ವರ್ಗಗಳಿಂದ ಬಂದ ನಾನು ಸಾಕಷ್ಟುಅನ್ಯಾಯ ಅನುಭವಿಸಿದ್ದೇನೆ. ಆದರೂ ನನಗೆ ಈ ದೇಶದ ಬಗ್ಗೆ ಹೆಮ್ಮೆಯಿದೆ. ನನಗೀಗ 64 ವರ್ಷ. ಗೆದ್ದು ಶಾಸಕನೂ ಆಗಿದ್ದೇನೆ. 64 ವರ್ಷದಿಂದಲೂ ಈ ದೇಶದ ಪೌರನಾಗಿದ್ದೇನೆ. ನಾನು ನನ್ನ ಪೌರತ್ವವನ್ನು ಯಾಕೆ ಸಾಬೀತುಪಡಿಸಬೇಕು. ಯಾರೇ ಬಂದು ಏನೇ ದಾಖಲೆ ಕೇಳಿದರೂ ಎಲ್ಲಾ ದಾಖಲೆಯನ್ನೂ ಕೊಟ್ಟಿದ್ದೇನೆ, ಇನ್ನು ಏನು ಬೇಕು ಅಂದ ಪ್ರಶ್ನಿಸುವೆ. ಯಾವುದೇ ದಾಖಲೆಯನ್ನು ನಾನು ಕೊಡಲ್ಲ. ನನ್ನನ್ನು ಕೇಳುವ ಅಧಿಕಾರ ನಿಮಗಿಲ್ಲ ಅಂತ ಪ್ರಶ್ನೆ ಹಾಕಿ ವಾಪಸ್ ಕಳುಹಿಸುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನೇ ನೀವು ಹೇಳಬೇಕೆಂದಿಲ್ಲ, ಆದರೆ ಸಿಎಎ ವಿರುದ್ಧ ಮಹಾತ್ಮ ಗಾಂಧಿ ತರಹ ಅಸಹಕಾರ ಚಳವಳಿ ಆರಂಭಿಸಬೇಕು ಎಂದಿದ್ದಾರೆ.
ಮಂಗಳೂರು ಗಲಭೆ ಬಗ್ಗೆ ಸಮಗ್ರ ದಾಖಲೆ: ಪೊಲೀಸ್ ಕಮಿಷನರ್ ಡಾ.ಹರ್ಷ
ಜನವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ