ರಾಜಕಾರಣಿಗಳ ಮಾತಿಗೆ ನಾನು ರಿಯಾಕ್ಟ್ ಮಾಡಲ್ಲ : ಮೈಸೂರು ಡೀಸಿ ರೋಹಿಣಿ

By Suvarna NewsFirst Published Apr 10, 2021, 3:43 PM IST
Highlights

ಎಲ್ಲದಕ್ಕೂ ಪ್ರತಿಕ್ರಿಯೆ ನೀಡಿದರೆ ಕೆಲಸ ಮಾಡಲು ಆಗುವುದಿಲ್ಲ. ವಿವಾದ ಹಾಗೂ ರಾಜಕಾರಣಿಗಳ ಮಾತಿಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪ್ರತಿಕ್ರಿಯೆ ನೀಡದಿದ್ದರೆ ಅದು ನೋ ಕಮೆಂಟ್ ಎಂದು ಅರ್ಥಮಾಡಿಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ಸಿಂಧೂರಿ ಹೇಳಿದರು. 

ಮೈಸೂರು (ಏ.10):   ನಾನು ಯಾವುದೇ ರೀತಿಯ ವಿವಾದಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. 

ಮೈಸೂರಿನಲ್ಲಿಂದು ಮಾತನಾಡಿದ ರೋಹಿಣಿ ಸಿಂಧೂರಿ  ಜಿಲ್ಲೆಯ ಹಲವು ಪತ್ರಕರ್ತರು ನನಗೆ ಕರೆ ಹಾಗೂ ಮೆಸೇಜ್ ಮಾಡುತ್ತಾರೆ. ಆದರೆ ನಾನು ಎಲ್ಲಾ ವಿಚಾರಕ್ಕೂ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. 

ಎಲ್ಲದಕ್ಕೂ ಪ್ರತಿಕ್ರಿಯೆ ನೀಡಿದರೆ ಕೆಲಸ ಮಾಡಲು ಆಗುವುದಿಲ್ಲ. ವಿವಾದ ಹಾಗೂ ರಾಜಕಾರಣಿಗಳ ಮಾತಿಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪ್ರತಿಕ್ರಿಯೆ ನೀಡದಿದ್ದರೆ ಅದು ನೋ ಕಮೆಂಟ್ ಎಂದು ಅರ್ಥಮಾಡಿಕೊಳ್ಳಿ ಎಂದು ಸಿಂಧೂರಿ ಹೇಳಿದರು. 

ತಮ್ಮ ಆದೇಶ ಹಿಂಪಡೆದ ಮೈಸೂರು ಜಿಲ್ಲಾಧಿಕಾರಿ!

ಕೋವಿಡ್ ಇಲ್ಲದಿದ್ದರೆ ಆದಿ ಮಹೋತ್ಸವ ಆಚರಣೆ ಮಾಡುತ್ತಿದ್ದೆವು. ಅದೊಂದು ಅದ್ಭುತವಾದ ಕಾರ್ಯಕ್ರಮ ಆಗ್ತಿತ್ತು. ಆದರೆ ಕೋವಿಡ್ ಹೆಚ್ಚಾದ ಹಿನ್ನೆಲೆ ಮಾಡಲು ಸಾಧ್ಯವಿಲ್ಲ ಎಂದರು.

ನಾವು ಮೈಸೂರಿನಲ್ಲಿ ಹಲವು ಕಾರ್ಯಕ್ರಮ ರೂಪಿಸಬಹುದು. ಪ್ರವಾಸೋದ್ಯಮಕ್ಕಾಗಿ ಪಾರಂಪರಿಕ ಕಟ್ಟಡಗಳನ್ನು ಬಳಸಿಕೊಳ್ಳಬಹುದು. ಮಾಹಿತಿ ಬೋರ್ಡ್‌ಗಳನ್ನು ಹಾಕಲು 2 ಕೋಟಿ ರು. ಕೇಳಿದ್ದೇವೆ. ಸರ್ಕಾರ ಬಜೆಟ್‌ನಲ್ಲಿ ಹಣ ನೀಡಿಲ್ಲ. ಇದೆ ಕಾರಣಕ್ಕಾಗಿ ನಾವು ಹೊಸ ಡಿಸಿ ಕಚೇರಿಗೂ ಸ್ಥಳಾಂತರ ಆಗಿಲ್ಲ. ಸ್ಥಳಾಂತರ ಆಗಬೇಕಾದರೆ ಅಲ್ಲಿ ಟೆಬಲ್ ಕುರ್ಚಿ ಬೇಕಾಗಿದೆ. ಬರಿ ಕಟ್ಟಡ ಮಾತ್ರ ಕಟ್ಟಲಾಗಿದೆ. ಆದರೆ ಅಗತ್ಯ ವಸ್ತುಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. 

click me!