ಉತ್ತರಕನ್ನಡ ಜಿಲ್ಲೆ ಇಬ್ಭಾಗದ ನಿರ್ಧಾರಕ್ಕೆ ನಾನು ಉಸ್ತುವಾರಿಯಲ್ಲ: ಸಚಿವ ಹೆಬ್ಬಾರ

By Gowthami KFirst Published Dec 10, 2022, 10:26 PM IST
Highlights

ಉತ್ತರ ಕನ್ನಡ ಜಿಲ್ಲೆಯ ಇಬ್ಭಾಗದ ನಿರ್ಧಾರ ಮಾಡಲು ತಾವು ಉಸ್ತುವಾರಿ ಸಚಿವರಲ್ಲ. ಜವಾಬ್ದಾರಿ ತಮ್ಮದಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಉತ್ತರ ಕನ್ನಡ(ಡಿ.10): ಪ್ರತ್ಯೇಕ ಶಿರಸಿ ಜಿಲ್ಲೆ ಬೇಡಿಕೆ ವಿಚಾರದ ಕುರಿತು ಉತ್ತರಕನ್ನಡ‌ ಜಿಲ್ಲೆಯ ಅಂಕೋಲಾದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. ಉತ್ತರಕನ್ನಡ ಜಿಲ್ಲೆ ಇಬ್ಭಾಗ ಮಾಡುವ ಕುರಿತು ನಾನು ಯಾವತ್ತೂ ಪ್ರಸ್ತಾಪ ಮಾಡಿಲ್ಲ, ಇವತ್ತೂ ನಾನು ಹೇಳುವುದಿಲ್ಲ. ಈ ಬಗ್ಗೆ ಮಾತ್ನಾಡೋಕೆ ನಾನು ಉಸ್ತುವಾರಿ ಸಚಿವನಲ್ಲ, ಜವಾಬ್ದಾರಿ ನನ್ನದಲ್ಲ. ಜಿಲ್ಲೆಯ ಶಾಸಕನಾಗಿ ನಾನು ಮಾತನಾಡುವುದು ಅವಶ್ಯಕತೆ ಇದೆ. ಜಿಲ್ಲೆ ಇಬ್ಭಾಗದ ಕುರಿತು ಬುದ್ಧಿ ಜೀವಿಗಳ ಜತೆಗೆ, ನಮ್ಮೆಲ್ಲ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಮತ ಮುಖ್ಯ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು, ಆದರೆ, ಎಲ್ಲರ ಅಭಿಪ್ರಾಯದೊಂದಿಗೆ ಆಗಬೇಕು. ಶಿರಸಿ ಪ್ರತ್ಯೇಕ ಜಿಲ್ಲೆ ಬಗ್ಗೆ ಸ್ಪೀಕರ್ ಕಾಗೇರಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೆಬ್ಬಾರ್ ಹೇಳಿದರು. ಇನ್ನು ವಿಶ್ವನಾಥ ಅವರು ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಿರುವ ವಿಚಾರ ಸಂಬಂಧಿಸಿ ಪ್ರತಿಕ್ರಯಿಸಿದ ಅವರು, ಈ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ, ಪತ್ರಿಕೆಯಲ್ಲಿ ಓದಿದ್ದೇನೆ. ಅವರು ನನ್ನ ಸ್ನೇಹಿತರು, ಅವರೊಂದಿಗೆ ಈ ವಿಚಾರದ ಕುರಿತು ನಾನು ಮಾತನಾಡಿಲ್ಲ. ಅವರ ಮನವೊಲಿಸಲು ನಾನು ಯಾವುದೇ ಮುಂದಾಳತ್ವನ್ನು ವಹಿಸಿಕೊಳ್ಳಲ್ಲ. ಅವರು ಹಿರಿಯರು, ನಿಶ್ಚಿತವಾಗಿ ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದ ಸಚಿವ ಹೆಬ್ಬಾರ್ ಹೇಳಿದರು. ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಟಿಕೆಟ್ ಕೊಡುವ ಸಾಧ್ಯತೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ನುಣುಚಿಕೊಂಡರು. 

‘ಶಿರಸಿ ಜಿಲ್ಲೆ’ ಚುನಾವಣಾ ಗಿಮಿಕ್‌, ಸರ್ಕಾರ ನೈಜವಾಗಿ ಪ್ರಯತ್ನಿಸಿದರೆ ಕಾಂಗ್ರೆಸ್‌ ಕೈಜೋಡಿಸಲಿದೆ:
ಶಿರಸಿ ಜಿಲ್ಲೆ ಘೋಷಣೆಯನ್ನು ಬಿಜೆಪಿ ಚುನಾವಣಾ ಗಿಮಿಕ್‌ ಆಗಿ ಬಳಸಿಕೊಳ್ಳಬಾರದು. ಪ್ರತ್ಯೇಕ ಜಿಲ್ಲೆ ಸ್ಥಾಪನೆಗೆ ನೈಜ ಪ್ರಯತ್ನ ಮಾಡಿದರೆ ವಿರೋಧ ಪಕ್ಷವಾದ ನಾವೂ ಕೈ ಜೋಡಿಸುತ್ತೇವೆ ಎಂದು ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರತ್ಯೇಕ ಜಿಲ್ಲೆ ಕುರಿತು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಮಾತನಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಬರೇ ಹೇಳಿಕೆಯಿಂದ ಪ್ರತ್ಯೇಕ ಜಿಲ್ಲೆ ರಚನೆ ಆಗುವುದಿಲ್ಲ. ಈ ಕುರಿತಂತೆ ಪ್ರಸ್ತಾವನೆಯನ್ನು ಸರ್ಕಾರ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.

Uttarakannada: ಬೈಕ್ ಮಿಸ್ಸಿಂಗ್ ಪ್ರಕರಣ, ದೆವ್ವದ ಕಾಟದ ಆರೋಪಕ್ಕೆ ಪೊಲೀಸರಿಂದ‌ ತೆರೆ

ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಪ್ರಬಲವಾದಂತೆ ಜಿಲ್ಲೆಯಲ್ಲಿಯೂ ಸಂಘಟನೆ ಆಗುತ್ತಿದೆ. ಭಾರತ ಜೋಡೊ ಕಾರ್ಯಕ್ರಮದಿಂದ ಹೆಚ್ಚಿನ ಶಕ್ತಿ ಬಂದಿದೆ. ಅಲ್ಲದೇ ಚುನಾವಣೆ ಎದುರಿಸಲು ಸರ್ವ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಪಕ್ಷ ಅತ್ಯಂತ ಸದೃಢವಾಗಿದೆ.

ಬಿಜೆಪಿ ಸರ್ಕಾರದ ವಿರುದ್ಧ ಜನ ಜಾಗೃತವಾಗಿದ್ದಾರೆ. ಸೈಲೆಂಟ್‌ ಸುನೀಲ ಪ್ರಕರಣ ಬಿಜೆಪಿಗೆ ಮುಳುವಾಗಿದೆ. ಕಾಂಗ್ರೆಸ್‌ ಸಾಮೂಹಿಕ ನಾಯಕತ್ವದಲ್ಲಿ ಬಲವಾಗಿದೆ ಎಂದರು.

ಶಿರಸಿ ಜಿಲ್ಲೆಗೆ ಆಗ್ರಹಿಸಿ ಬಂದ್‌ : ಎರಡು ದಶಕದ ಬೇಡಿಕೆ

ಜಿಲ್ಲೆಯಲ್ಲಿ ಬೆಳೆ ಹಾನಿ ತೀವ್ರವಾಗಿದ್ದರೂ ಬೆಳೆ ವಿಮೆ ನೀಡುವಲ್ಲಿ ಅನ್ಯಾಯ ಆಗಿದೆ. ಶಿರಸಿ ಕುಮಟಾ ರಸ್ತೆ ಸ್ಥಿತಿ ಬೇಸರ ಮೂಡಿಸುವಂತಿದೆ. ಬಿಜೆಪಿ ಬರೇ ಘೋಷಣೆಗೆ ಸೀಮಿತವಾಗಿದೆ ಎಂದು ಆರೋಪಿಸಿದರು.

click me!