ನಾನು ಎಂದಿಗೂ ಒಕ್ಕಲಿಗ ವಿರೋಧಿಯಲ್ಲ ಶಾಸಕ ಎಚ್‌.ಪಿ. ಮಂಜುನಾಥ್‌

Published : Feb 12, 2023, 06:19 AM IST
 ನಾನು ಎಂದಿಗೂ ಒಕ್ಕಲಿಗ ವಿರೋಧಿಯಲ್ಲ  ಶಾಸಕ ಎಚ್‌.ಪಿ. ಮಂಜುನಾಥ್‌

ಸಾರಾಂಶ

ಕಳೆದ 15 ವರ್ಷಗಳಿಂದ ನಾನು ಒಕ್ಕಲಿಗ ವಿರೋಧಿ ಎಂಬ ಹಣೆ ಪಟ್ಟೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಟ್ಟಿದ್ದಾರೆ. ಆದರೆ ನಾನು ಒಕ್ಕಲಿಗ ವಿರೋಧಿಯಲ್ಲ, ಎಲ್ಲರನ್ನು ಒಂದುಗೂಡಿಸಿ ಅಬಿವೃದ್ಧಿ ಕಾರ್ಯ ನಡೆಸಿದವನು ನಾನು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ರಾಜಕೀಯ ವಿರೋಧಿಗಳಿಗೆ ಟಾಂಗ್‌ ನೀಡಿದರು.

 ಹುಣಸೂರು : ಕಳೆದ 15 ವರ್ಷಗಳಿಂದ ನಾನು ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಟ್ಟಿದ್ದಾರೆ. ಆದರೆ ನಾನು ಒಕ್ಕಲಿಗ ವಿರೋಧಿಯಲ್ಲ, ಎಲ್ಲರನ್ನು ಒಂದುಗೂಡಿಸಿ ಅಬಿವೃದ್ಧಿ ಕಾರ್ಯ ನಡೆಸಿದವನು ನಾನು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ರಾಜಕೀಯ ವಿರೋಧಿಗಳಿಗೆ ಟಾಂಗ್‌ ನೀಡಿದರು.

ಫೆ. 15ರಂದು ತಾಲೂಕಿನಲ್ಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದ ಪ್ರಜಾಧ್ವನಿ ಯಾತ್ರೆ ಆಗಮಿಸುತ್ತಿರುವ ಹಿನ್ನೆಲೆ ಪಟ್ಟಣದ ಅಯ್ಯಪ್ಪಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಒಕ್ಕಲಿಗ ಕಾಂಗ್ರೆಸ್‌ ಅಭಿಮಾನಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಆಡಳಿತಾವಧಿಯಲ್ಲಿ ಒಕ್ಕಲಿಗರ ವಿರುದ್ಧ ನಾನು ನಡೆದುಕೊಂಡಿದ್ದೇನೆಂದು ಒಬ್ಬನೇ ಒಬ್ಬ ಒಕ್ಕಲಿಗ ತಿಳಿಸಲಿ. ಅಂತಹ ವ್ಯಕ್ತಿತ್ವ ನನ್ನದಲ್ಲ. ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗಿದ್ದರಿಂದಲೇ ನಾನು ಇಷ್ಟು ದೀರ್ಘ ಕಾಲ ಶಾಸಕನಾಗಿದ್ದೇನೆ. ಇನ್ನು ಮುಂದೆ ಇಂತಹವರ ಆಟ ನಡೆಯಲು ಬಿಡುವುದಿಲ್ಲ. ಇಂದಿನ ಸಭೆಯಲ್ಲಿ ಈ ಪ್ರಮಾಣದಲ್ಲಿ ಒಕ್ಕಲಿಗ ಸಮುದಾಯದವರು ಸೇರಿರುವುದು ಮುಂಬರುವ ಚುನಾವಣೆಯಲ್ಲಿ ನನ್ನ ಗೆಲುವನ್ನು ಖಚಿತಪಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಫೆ. 15ರಂದು ಆಯೋಜನೆಗೊಂಡಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಕನಿಷ್ಟ25 ಸಾವಿರ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸುವ ಮೂಲಕ ಮುಂಬರುವ ಚುನಾವಣೆಯ ದಿಕ್ಸೂಚಿಯಾಗಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 5 ವರ್ಷಗಳ ಅಧಿಕಾರಾವಧಿಯಲ್ಲಿ ಜನರಿಂದ ಪಡೆದ ಚಿನ್ನ, ಬೆಳ್ಳಿ ಮುಂತಾದವುಗಳು ಸುಮಾರು 700 ಕೆಜಿಯಷ್ಟನ್ನು ಮಲೈ ಮಹದೇಶ್ವರನಿಗೆ ಯಾವುದೇ ಪ್ರಚಾರವಿಲ್ಲದೇ ಅರ್ಪಿಸಿದ್ದಾರೆ. ಇಂತಹ ನೇತಾರರೇ ನಮ್ಮ ಶಕ್ತಿ. ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯರ ನೇತೃತ್ವದಲ್ಲಿ ಈ ಬಾರಿ ಸರ್ಕಾರ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಮಾವಿನಹಳ್ಳಿ ಸಿದ್ದೇಗೌಡ, ತಾಲೂಕಿನ ಮುಖಂಡರಾದ ದೇವರಾಜ್‌, ರಾಜು ಶಿವರಾಜೇಗೌಡ, ಹರೀಶ್‌ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ದೇವರಾಜ್‌, ನಾರಾಯಣ, ರಮೇಶ್‌, ಕಾರ್ಯಾಧ್ಯಕ್ಷರಾದ ಬಸವರಾಜಪ್ಪ, ಪುಟ್ಟರಾಜು, ಪ್ರತಾಪ್‌, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್‌ ಇದ್ದರು.

5 ವರ್ಷದಿಂದ ಜನತ ಒಡನಾಡಿಯಾಗಿ ಕೆಲಸ ಮಾಡಿರುವೆ

 ಕೊರಟಗೆರೆ :  ಕರ್ನಾಟಕದ ಡಿಸಿಎಂ ಮತ್ತು ಕೊರಟಗೆರೆಯ ಶಾಸಕನಾಗಿ 5 ವರ್ಷ ಜನರ ಒಡನಾಡಿಯಾಗಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ಧಿಯ ಕೆಲಸ ಮಾಡಿದ್ದೇನೆ. ಆದರೇ ನಾನು ಜನರ ಕೈಗೆ ಸೀಗೋದೇ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ನಾಯಕರು ಆರೋಪ ಮಾಡ್ತಾರೇ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಯಾದವ ಸಮುದಾಯದ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಕೊರಟಗೆರೆ ಕ್ಷೇತ್ರದ ಜನತೆಯ ಆರ್ಶೀವಾದದಿಂದ ನನಗೇ ಕೆಪಿಸಿಸಿ ಅಧ್ಯಕ್ಷ, ಹೃಹ ಸಚಿವ, ಡಿಸಿಎಂ ಹುದ್ದೆ ದೊರೆತಿದೆ. ಭಾರತದ ಯಾವುದೇ ರಾಜ್ಯಕ್ಕೆ ಹೋದ್ರು ಅಲ್ಲಿ ಕೊರಟಗೆರೆ ಅಂದ್ರೇ ಡಾ.ಜಿ.ಪರಮೇಶ್ವರ್‌ ಅಂತಾರೇ. ಕೊರಟಗೆರೆ ಕ್ಷೇತ್ರಕ್ಕೆ ಕಳೆದ 5 ವರ್ಷದಲ್ಲಿ 2500 ಕೋಟಿ ಅನುದಾನ ತಂದು ಮತದಾರರ ಋುಣ ತೀರಿಸುವ ಕೆಲಸ ಮಾಡಿದ್ದೇನೆ. ಅಂಕಿ ಅಂಶದ ದಾಖಲೆಯ ಪುಸ್ತಕ ನೀಡಿ 2023ರ ಚುನಾವಣೆಗೆ ಹೋಗ್ತಿದ್ದೇನೆ ಎಂದು ತಿಳಿಸಿದರು.

ತುಮಕೂರು ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ, 2023ಕ್ಕೆ ಕೊರಟಗೆರೆ ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ್‌ ಮತ್ತೇ ಶಾಸಕರಾದ್ರೇ ಕರ್ನಾಟಕ ರಾಜ್ಯದ ಸಿಎಂ ಆಗ್ತಾರೇ ಎಂದರು

PREV
Read more Articles on
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?