
ಯಲಹಂಕ [ಮಾ.15]: ಸಮಯಕ್ಕೆ ಸರಿಯಾಗಿ ಊಟ ಕೊಡಲ್ಲ, ಯಾವಾಗಲೂ ಬೈಯುತ್ತಾಳೆ, ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಹೆಂಡತಿಯನ್ನು ಕೊಲೆಗೈದು ಗಂಡ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.
ಯಲಹಂಕ ತಾಲೂಕು ರಾಜಾನುಕುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಶೀತಕೆಂಪನಹಳ್ಳಿ ಸಮೀಪದ ಹಾರೋಹಳ್ಳಿಪಾಳ್ಯದ ಹೆಂಡತಿ ಗಂಗಬೈರಮ್ಮ (45) ಕೊಲೆಯಾದ ಗೃಹಿಣಿ. ಇವರ ಪತಿ ನಾರಾಯಣಪ್ಪ (49) ಶರಣಾಗಿದ್ದಾನೆ ಎಂದು ರಾಜಾನುಕುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ತವರಿಗೆ ಬಂದವಳನ್ನು ಸ್ನಾನದ ಮನೆಯಲ್ಲಿ ಪ್ರಾಣವನ್ನೇ ತೆಗೆದ ಗೀಸರ್...
ನಾರಾಯಣಪ್ಪ ಗಾರೆ ಕೆಲಸ ಮಾಡುತ್ತಿದ್ದು ಗಂಗಬೈರಮ್ಮಳೊಂದಿಗೆ 30 ವರ್ಷದ ಹಿಂದೆ ಮದುವೆ ಆಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಾರಾಯಣಪ್ಪ ದಿನಪೂರ್ತಿ ಕುಡಿದು, ಪತ್ನಿಯೊಂದಿಗೆ ಜಗಳ ವಾಡುತ್ತಿದ್ದ.
ಮನೆಗೆ ಬಂದ ನಾರಾಯಣಪ್ಪ, ಊಟ ನೀಡುವಂತೆ ಪತ್ನಿಗೆ ಹೇಳಿದ್ದಾನೆ. ಮನೆ ಒಳಗೆ ಬಂದ ಪತ್ನಿಯೊಂದಿಗೆ ಕೂಗಾಡಿ ಜಗಳವಾಡಿದ್ದಾನೆ. ಈ ವೇಳೆ ಪತ್ನಿಯನ್ನು ಚಾಕುನಿಂದ ಹೊಟ್ಟೆಗೆ ಇರಿದು ಕತ್ತನ್ನೂ ಸೀಳಿ ಕೊಲೆ ಮಾಡಿದ್ದಾನೆ.