ವೈರಸ್‌ಗಿಂತ ವದಂತಿಗಳೇ ಹೆಚ್ಚು ವೈರಲ್| ಕೊರೋನಾ ಬಗ್ಗೆ ಚರ್ಚೆಗಳೇ ಹೆಚ್ಚು| ಮಾಂಸ ಮಾರಾಟ ಬಹುತೇಕ ಬಂದ್| ಜನರು ದೃಶ್ಯ ಮಾಧ್ಯಮಗಳ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹುಡುಕವಲ್ಲಿ ತಲ್ಲೀನ|
ಯಾದಗಿರಿ(ಮಾ.15): ಶನಿವಾರ ಜಿಲ್ಲೆಯಲ್ಲಿ ಕೊರೋನಾ ವೈರಸ್‌ಗಿಂತ ಹೆಚ್ಚಾಗಿ ವದಂತಿಗಳೇ ಹೆಚ್ಚು ವೈರಲ್ ಆಗಿದ್ದು ವಿಶೇಷ. ಜನಜಾಗೃತಿ ಬಗ್ಗೆ ಅರಿವು ಮೂಡಿಸುವುದಕ್ಕಿಂತ ಹೆಚ್ಚಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗೆಗಿನ ಚರ್ಚೆಗಳು ಹಾಗೂ ಸಂದೇಶಗಳ ಹಂಚುವಿಕೆ ಜನರ ಭೀತಿಗೆ ಕಾರಣವಾಗಿತ್ತಲ್ಲದೆ, ಅನೇಕ ಕಡೆಗಳಲ್ಲಿ ಜನರ ಬೆಚ್ಚಿ ಬೀಳಿಸುವಿಕೆಗೂ ಕಾರಣವಾಗಿತ್ತು.
ಶನಿವಾರ ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಎಂದಿನಂತೆ ಜನದಟ್ಟಣೆ ಕಂಡು ಬರುತ್ತಿರಲಿಲ್ಲ, ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ವ್ಯಾಪಾರ ವಹಿವಾಟು ಅಷ್ಟಕ್ಕಷ್ಟೇ ನಡೆದರೂ ಸಹ ಅಲ್ಲಿ, ಕೊರೋನಾ ಬಗ್ಗೆ ಚರ್ಚೆಗಳೇ ಹೆಚ್ಚಿದ್ದವು. ಮಾಂಸ ಮಾರಾಟ ಬಹುತೇಕ ಅಂಗಡಿಗಳು ಬಂದ್ ಮಾಡಲಾಗಿತ್ತು. ಜನರು ದೃಶ್ಯ ಮಾಧ್ಯಮಗಳ ಹಾಗೂ ಸಾಮಾಜಿಕ ಜಾಲತಾಣಗಳತ್ತ ಈ ಬಗ್ಗೆ ಮಾಹಿತಿಗಳನ್ನು ನೋಡುವಲ್ಲಿ/ಹುಡುಕವಲ್ಲಿ ತಲ್ಲೀನರಾದಂತಿತ್ತು. ಇನ್ನೊಂದೆಡೆ, ಈ ಬಗ್ಗೆ ಜನಜಾಗೃತಿ ಮೂಡಿಸು ವಲ್ಲಿ ದಾಪುಗಾಲು ಇಟ್ಟಿರುವ ಜಿಲ್ಲಾಡಳಿತ, ಸಾರ್ವಜನಿಕರಲ್ಲಿ ರೋಗಲಕ್ಷಣಗಳು, ಮುಂಜಾಗ್ರತಾ ಕ್ರಮ ಗಳ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದೆ.
ಕೊರೋನಾ ಭೀತಿ: ಸಾರಿಗೆ ನೌಕರರ ಜೀವಕ್ಕಿಲ್ವಾ ಬೆಲೆ?
ಭಾರತೀಯ ವೈದ್ಯಕೀಯ ಸಂಘವೂ ಕೂಡ ಶನಿವಾರ ಪತ್ರಿಕಾಗೋಷ್ಠಿ ನಡೆಸಿ, ಮಾ.15 (ಭಾನು ವಾರ) ದಿಂದಲೇ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗುತ್ತಿದೆ ಎಂದು ತಿಳಿಸಿದೆ. ಜನರು ಕೊರೋನಾ ಬಗ್ಗೆ ಭಯಬೀಳದೆ, ಮುಂಜಾಗ್ರತೆ ವಹಿಸವುದು ಸೂಕ್ತ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಸಿ.ಎಂ. ಪಾಟೀಲ್ ಹಾಗೂ ಮುಂತಾದವರು ತಿಳಿಸಿದ್ದಾರೆ.
ಈ ಮಧ್ಯೆ, ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಸೈದಾಪೂರ ಭಾಗದಲ್ಲಿ ವಿದೇಶದಿಂದ (ದುಬೈ) ನಿಂದ ಮರಳಿದ ಸುಮಾರು ಏಳು ಜನರ ಹಾಗೂ ಅವರ ಕುಟುಂಬಸ್ಥರ ಮೇಲೆ ತೀವ್ರ ನಿಗಾ ಇಟ್ಟಿರುವ ಆರೋಗ್ಯ ಇಲಾಖೆ, ಅವರ ಆರೋಗ್ಯ ತಪಾಸಣೆ ಹಾಗೂ ಮುಂತಾದ ಕ್ರಮಗಳನ್ನು ಕೈಗೊಂಡು, ಎಲ್ಲಿಯೂ ತೆರಳದಂತೆ ಅವರಿಗೆ ಸೂಚಿಸಲಾಗಿದೆ. ಎಲ್ಲರೂ ಆರೋಗ್ಯದಿಂದಿದ್ದಾರಾಗ್ಯೂ ಕೂಡ, 14 ದಿನಗಳವರೆಗೆ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಯವಾಗದಂತೆ ಕಾಳಜಿ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಮಲ್ಲನಗೌಡ ಎಸ್. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಕೊರೋನಾ ಸೋಂಕಿತ ಟೆಕ್ಕಿಯ ಪತ್ನಿ ಪರಾರಿ!
ಸುಮಾರು ಹತ್ತು ದಿನಗಳ ಹಿಂದೆ ದುಬೈನಿಂದ ತಾಲೂಕಿನ ಸೈದಾಪುರಕ್ಕೆ ಮರಳಿದ್ದ ಇಬ್ಬರ (22 ಹಾಗೂ 30 ವರ್ಷ ವಯಸ್ಸಿನ) ಮೇಲೆ ನಿಗಾ ವಹಿಸಲಾಗಿದೆ. ದುಬೈನಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಕೆಲಸಕ್ಕಿದ್ದು, ರಜೆ ಮೇಲೆ ಮರಳಿದ್ದಾರೆ ಎನ್ನಲಾಗಿದೆ. ಅದೇ ರೀತಿ, ದುಬೈನಿಂದ ಮರಳಿದ್ದ ಶಹಾಪುರ ತಾಲೂಕಿ ನ ಮದ್ರಕಿಯ ಒಬ್ಬರು (30 ವರ್ಷ ವಯಸ್ಸಿನ), ಶಹಾಪುರದ ಮೂವರು (29, 24 ಹಾಗೂ 35 ವರ್ಷ ವಯಸ್ಸಿನ) ನಾಲ್ವರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಎಲ್ಲರೂ ಆರೋಗ್ಯದಿಂದಾರಾದರೂ, ಮುಂಜಾಗ್ರತಾ ಕ್ರಮವಾಗಿ ಅವರನ್ನು 14 ದಿನಗಳ ಕಾಲ ಮನೆಯಲ್ಲಿಯೇ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಡಿಎಚ್‌ಓ ಡಾ. ಎಂ.ಎಸ್. ಪಾಟೀಲ್ ತಿಳಿಸಿದ್ದಾರೆ.
ಇನ್ನು, ಸುರಪುರದ ರಂಗಂಪೇಟೆಯಲ್ಲಿಯೂ ದುಬೈನಿಂದ ಮರಳಿದ್ದ ವ್ಯಕ್ತಿಯೊಬ್ಬರ ಮೇಲೆ ನಿಗಾ ವಹಿಲಾಗುತ್ತಿದೆ. ಕಳೆದ 25 ವರ್ಷಗಳಿಂದ ಟೈಲರ್ ವೃತ್ತಿಯಲ್ಲಿರುವ, ಸುಮಾರು 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದಷ್ಟೇ ವಿದೇಶ ದಿಂದ ಮರಳಿದ ಬಗ್ಗೆ ಅಕ್ಕಪಕ್ಕದವರು ಆಡಳಿತಕ್ಕೆ ತಿಳಿಸಿದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಬಂದು ತಪಾಸಣೆ ನಡೆಸಿದ್ದಾರೆ. ಅವರ ರಕ್ತ ಹಾಗೂ ಕಫ ಮಾದರಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾ ಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಮನೆಯಿಂದ ಹೊರಬಾರದಂತೆ ಅವರಿಗೆ ಸೂಚಿಸಿದ್ದು, ದಿನವೂ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಎಂದು ಸುರಪುರ ತಾಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.