ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರ ಮಾತಿನ ಚಕಮಕಿ- ಓರ್ವನಿಗೆ ಗಾಯ

By Kannadaprabha NewsFirst Published Nov 20, 2019, 11:11 AM IST
Highlights

ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಹುಣಸೂರು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ಚುನಾವಣೆ ಪ್ರಚಾರ ಮುಗಿಸಿ ತೆರಳಿದ ಬಳಿಕ, ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು(ನ.20): ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಹುಣಸೂರು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ಚುನಾವಣೆ ಪ್ರಚಾರ ಮುಗಿಸಿ ತೆರಳಿದ ಬಳಿಕ, ಅವರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಳಿಗೆರೆ ಗ್ರಾಮದ ಸ್ವಾಮಿಗೌಡ ಗಾಯಾಳು. ಈತನ ಮೇಲೆ ಹಲ್ಲೆ ಮಾಡಿದ ಅದೇ ಗ್ರಾಮದ ಜಗದೀಶ್‌, ರಾಘು, ಮೋಹನ್‌, ಹೇಮಂತ್‌ ಕುಮಾರರನ್ನು ಪೊಲೀಸರು ಬಂಧಿಸಿದ್ದಾರೆ.

'ಸಿದ್ದು ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು'..!

ನ. 18ರ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ಅವರು ಬಿಳಿಗೆರೆಯಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಸ್ವಾಮಿಗೌಡ ಅವರು ಕಳೆದ ಹತ್ತು ವರ್ಷದಲ್ಲಿ ನನಗೆ ಒಂದೂ ಮನೆ ನೀಡಿಲ್ಲ ಎಂದಾಗ ಸಮಾಧಾನ ಮಾಡಿ ಆಗಲಿ ಈ ಬಾರಿ ಗೆಲ್ಲಿಸ್ರಪ್ಪಾ ಖಂಡಿತವಾಗಿ ಮನೆ ನೀಡುವೆ ಎಂದು ಹೇಳಿದ್ದಾರೆ.

ಹುಣಸೂರು: ಉಪಸಮರದ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜು

ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಊರಿನಿಂದ ಹೋದ ಬಳಿಕ ಸ್ವಾಮಿಗೌಡ ಮತ್ತು ಜಗದೀಶ್‌ ಮತ್ತು ಮೋಹನ್‌ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಮಾಡಿ ಸ್ವಾಮಿಗೌಡನಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಈ ಸಂಬಂಧವಾಗಿ ಹುಣಸೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಗದೀಶ್‌, ರಾಘು, ಮೋಹನ್‌, ಹೇಮಂತ್‌ ಕುಮಾರ್‌ ಅವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಐ ಶಿವಪ್ರಕಾಶ್‌ ತಿಳಿಸಿದ್ದಾರೆ.

ತಾಪಮಾನ ಹೆಚ್ಚಳಕ್ಕೆ ಮಾಂಸಾಹಾರ ಸೇವನೆ ಕಾರಣ: ಬಾಬಾ ರಾಮ್‌ದೇವ್!

click me!