ವಿಚಿತ್ರ ಕಾಯಿಲೆಗೆ ಕನಕಗಿರಿಯಲ್ಲಿ ನೂರಾರು ಹಂದಿಗಳ ಸಾವು!

Published : Feb 13, 2023, 09:00 AM IST
ವಿಚಿತ್ರ ಕಾಯಿಲೆಗೆ ಕನಕಗಿರಿಯಲ್ಲಿ ನೂರಾರು ಹಂದಿಗಳ ಸಾವು!

ಸಾರಾಂಶ

 100ಕ್ಕೂ ಹೆಚ್ಚು ಹಂದಿಗಳು ವಿಚಿತ್ರ ಕಾಯಿಲೆಯಿಂದ ಬಳಲಿ ಸಾವಿಗೀಡಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಒಂದು ವಾರದ ಹಿಂದೆ ಪಕ್ಕದ ಗಂಗಾವತಿಯಲ್ಲಿ 200ಕ್ಕೂ ಹೆಚ್ಚು ಹಂದಿಗಳು ವಿಚಿತ್ರ ಕಾಯಿಲೆಗೆ ಬಲಿಯಾಗಿದ್ದವು. ಇದೀಗ ಅದೇ ರೋಗ ಪಟ್ಟಣಕ್ಕೆ ವ್ಯಾಪಿಸಿದ್ದು, ಮೂರ್ನಾಲ್ಕು ದಿನದಲ್ಲಿ ನೂರಕ್ಕೂ ಹೆಚ್ಚು ಹಂದಿಗಳು ಸಾವಿಗೀಡಾಗಿವೆ.

ಕನಕಗಿರಿ (ಫೆ.13) : 100ಕ್ಕೂ ಹೆಚ್ಚು ಹಂದಿಗಳು ವಿಚಿತ್ರ ಕಾಯಿಲೆಯಿಂದ ಬಳಲಿ ಸಾವಿಗೀಡಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಒಂದು ವಾರದ ಹಿಂದೆ ಪಕ್ಕದ ಗಂಗಾವತಿಯಲ್ಲಿ 200ಕ್ಕೂ ಹೆಚ್ಚು ಹಂದಿಗಳು ವಿಚಿತ್ರ ಕಾಯಿಲೆಗೆ ಬಲಿಯಾಗಿದ್ದವು. ಇದೀಗ ಅದೇ ರೋಗ ಪಟ್ಟಣಕ್ಕೆ ವ್ಯಾಪಿಸಿದ್ದು, ಮೂರ್ನಾಲ್ಕು ದಿನದಲ್ಲಿ ನೂರಕ್ಕೂ ಹೆಚ್ಚು ಹಂದಿಗಳು ಸಾವಿಗೀಡಾಗಿವೆ.

ಪಟ್ಟಣದ ಕೊರವರ ಕಾಲನಿ(Koravar )ಯ ನಿವಾಸಿಗಳಾದ ಹನುಮಂತಪ್ಪ ಜಿಂಕಿ(Hanamantappa jinki), ಮರಿಯಪ್ಪ ಮಳಗಿಮನಿ, ಚಿದಾನಂದಪ್ಪ ಅಸ್ತಮನಿ, ಯಮನಪ್ಪ, ಕನಕಪ್ಪ ಗಾಳೆಪ್ಪ ಕುಂಚಿಕೊರವರ ಅವರಿಗೆ ಸೇರಿದ ಹಂದಿಗಳು(Pigs dies) ಕರ್ಕಶ ಧ್ವನಿ ಮಾಡಿ ಹೊಟ್ಟೆಉಬ್ಬಿ ಪ್ರಾಣ ಬಿಡುತ್ತಿವೆ. ಮೃತ ಹಂದಿಗಳ ದುರ್ವಾಸನೆ ಬೀರುತ್ತಿದ್ದರಿಂದ ಸಾಕಣೆದಾರರು ವಿಲೇವಾರಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಸರದಿಯಲ್ಲಿ ಹಂದಿಗಳ ಸಾವಾಗುತ್ತಿದ್ದರಿಂದ ವಿಲೇವಾರಿಗೂ ತೊಂದರೆಯಾಗಿದೆ.

ಕೊಪ್ಪಳ: ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

ಹಂದಿಗಳ ಸ್ಥಳಾಂತರಕ್ಕೆ ಆಗ್ರಹ:

ಪಟ್ಟಣದ ಸರ್ಕಾರಿ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಹಂದಿಗಳು ವಾಸವಿದ್ದು, ಇದೇ ಪ್ರದೇಶದಲ್ಲಿ ಹಂದಿಗಳು ಸಾವಿಗೀಡಾಗುತ್ತಿರುವುದು ಕಂಡು ಬಂದಿದೆ. ಇನ್ನೂ ಆಸ್ಪತ್ರೆಯ ಪಕ್ಕದಿಂದ ಡಿಗ್ರಿ ಕಾಲೇಜಿಗೆ ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸುಮಾರು 500 ಮೀಟರ್‌ ಹಂದಿಗಳ ಸಾವಿನಿಂದ ದುರ್ವಾಸನೆ ಹಬ್ಬಿದೆ. ಇದರಿಂದ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುವುದು ದುಸ್ತರವಾಗಿದೆ. ಫೆ. 15 ಹಾಗೂ 16ರಂದು ಡಿಗ್ರಿ ಕಾಲೇಜಿಗೆ ನ್ಯಾಕ್‌ ತಂಡ ಭೇಟಿ ನೀಡುತ್ತಿದ್ದು, ಅವರಿಗೆ ಮುಜುಗರ ಉಂಟಾಗುವ ಮೊದಲು ಮೃತ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಣ್ಣೀರಿಟ್ಟಸಾಕಣೆದಾರರು:

ಹಂದಿಗಳ ಸರಣಿ ಸಾವಿನಿಂದ ಆರ್ಥಿಕ ಸಂಕಷ್ಟಎದುರಾಗಿರುವ ದುಸ್ಥಿತಿಯಲ್ಲಿ ಅವುಗಳ ವಿಲೇವಾರಿಗೂ ತೊಂದರೆಯಾಗಿದೆ. ಹಂದಿಗಳಿಗೆ ಚಿಕಿತ್ಸೆ ನೀಡಲು ಹಣ ಇಲ್ಲವಾಗಿದ್ದು, ನಮ್ಮ ಕಷ್ಟಹೇಳ ತೀರದಾಗಿದೆ. ಅವುಗಳ ಪ್ರಾಣ ಉಳಿಸಲು ಸಂಬಂಧಪಟ್ಟಅಧಿಕಾರಿಗಳು ಮುಂದಾಗಿ ನೆರವಾಗಬೇಕು ಎಂದು ಹಂದಿ ಸಾಕಾಣಿಕೆದಾರರು ಆಗ್ರಹಿಸಿದ್ದಾರೆ.

ಹಂದಿ ಉಪಟಳ ಕಡಿವಾಣಕ್ಕೆ ಹಳೆ ಸೀರೇಗಳೇ ಮದ್ದು!

ನಾಲ್ಕೆ ೖದು ದಿನಗಳಿಂದ ಯಾವುದೋ ಕಾಯಿಲೆಗೆ ಹಂದಿಗಳು ಒಂದರ ಮೇಲೊಂದು ಸಾಯುತ್ತಿವೆ. ರೋಗ ನಿಯಂತ್ರಿಸುವಂತೆ ವೈದ್ಯರಿಗೆ ತಿಳಿಸಿದ್ದು, ರೋಗಕ್ಕೆ ಔಷಧವಿಲ್ಲ ಎಂದಿದ್ದಾರೆ. ನಾನಾ ಕಡೆ ಮೃತಪಟ್ಟಹಂದಿಗಳನ್ನು ವಿಲೇವಾರಿ ಮಾಡುತ್ತಿದ್ದೇವೆ. ಆದರೂ ಒಂದರ ಮೇಲೊಂದು ಸರತಿಯಲ್ಲಿ ಹಂದಿಗಳ ಸಾವಿಗೀಡಾಗುತ್ತಿದ್ದು, ದಿಕ್ಕು ತೋಚದಂತಾಗಿದೆ.

ಕನಕಪ್ಪ ಕೊರವರ, ಹಂದಿ ಸಾಕಾಣೆದಾರ

ಹಂದಿಗಳ ಸರಣಿ ಸಾವಿನ ಕುರಿತು ಮಾಹಿತಿ ಬಂದಿದೆ. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಮೃತ ಹಂದಿಗಳ ವಿಲೇವಾರಿ ಕಾರ್ಯ ನಡೆದಿದೆ.

ದತ್ತಾತ್ರೇಯ ಹೆಗಡೆ, ಪಪಂ ಮುಖ್ಯಾಧಿಕಾರಿ

PREV
Read more Articles on
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ