ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ: ಅಲ್ಹಾಭಕ್ಷ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ!

By Govindaraj S  |  First Published Sep 16, 2023, 11:59 PM IST

ಇತ್ತೀಚಿನ ದಿನಗಳಲ್ಲಿ ಧರ್ಮ ದಂಗಲ್ ಮಧ್ಯೆ ಈ ಗ್ರಾಮದಲ್ಲೊಂದು ಕುಟುಂಬ ಕಳೆದ ಮೂರು ತಲೆಮಾರಿನಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿದೆ. ಅಷ್ಟಕ್ಕೂ ಯಾವುದು ಆ ಊರು? ಆ ಕುಟುಂಬ ಯಾವುದು? ಆ ಕುಟುಂಬ ಸಾರುತ್ತಿರುವ ಭಾವೈಕ್ಯತೆ ಸಂದೇಶ ಏನು ಅಂತೀರಾ ಈ ಸ್ಟೋರಿ ನೋಡಿ. 


ಬೆಳಗಾವಿ (ಸೆ.16): ಇತ್ತೀಚಿನ ದಿನಗಳಲ್ಲಿ ಧರ್ಮ ದಂಗಲ್ ಮಧ್ಯೆ ಈ ಗ್ರಾಮದಲ್ಲೊಂದು ಕುಟುಂಬ ಕಳೆದ ಮೂರು ತಲೆಮಾರಿನಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿದೆ. ಅಷ್ಟಕ್ಕೂ ಯಾವುದು ಆ ಊರು? ಆ ಕುಟುಂಬ ಯಾವುದು? ಆ ಕುಟುಂಬ ಸಾರುತ್ತಿರುವ ಭಾವೈಕ್ಯತೆ ಸಂದೇಶ ಏನು ಅಂತೀರಾ ಈ ಸ್ಟೋರಿ ನೋಡಿ.  ಮನೆಯ ತುಂಬೆಲ್ಲ ಝಗಮಗಿಸುತ್ತಿರುವ ಕಲರ್‌‌ಫುಲ್ ಗಣೇಶ ಮೂರ್ತಿಗಳು.. ವಿಘ್ನನಿವಾರಕನ ಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಮುಸ್ಲಿಂ ಕುಟುಂಬ.. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ. 

ಗಣೇಶನಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಟೋಪಿಧಾರಿ ವ್ಯಕ್ತಿಯ ಹೆಸರು ಅಲ್ಹಾಭಕ್ಷ ಜಮಾದಾರ್ ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕರಾಗಿರುವ ಇವರು ವಂಶಪಾರಂಪರ್ಯವಾಗಿ ಬಂದಿರುವ ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಸುತ್ತಾ ಬಂದಿದ್ದಾರೆ. ಮಾಂಜರಿವಾಡಿ ಗ್ರಾಮದ ಜಮಾದಾರ್ ಕುಟುಂಬ ಕಳೆದ ಮೂರು ತಲೆಮಾರಿನಿಂದ ಈ ಕಾಯಕ ಮಾಡುತ್ತ ಬಂದಿದೆ. ಮಹಾರಾಷ್ಟ್ರದಿಂದ ಜೇಡಿಮಣ್ಣನ್ನು ತಂದು ಪರಿಸರ ಸ್ನೇಹಿ ಗಣಪನ ಸಿದ್ಧಪಡಿಸುತ್ತಾರೆ. ಪ್ರತಿ ವರ್ಷ ಗಣೇಶ ಹಬ್ಬ ಬಂತಂದ್ರೆ ಮಾಂಜರಿವಾಡಿ, ಮಾಂಜರಿ, ಯಡೂರವಾಡಿಯಿಂದ ಜನ ಆಗಮಿಸಿ ಗಣೇಶನ ಮೂರ್ತಿ ತೆಗೆದುಕೊಂಡು ಹೋಗುತ್ತಾರೆ. 

Latest Videos

undefined

ಗಣೇಶ ಮಂಡಳಗಳಿಂದ ಹೊಸ ಬೇಡಿಕೆ: ಗಣೇಶನಿಗೂ ಫ್ರೀ ಕರೆಂಟ್ ಕೊಡಿ ಎಂದ ಹಿಂದೂ ಸಂಘಟನೆಗಳು!

ಈ ಕುರಿತು ಮಾತನಾಡಿರುವ ಅಲ್ಹಾಭಕ್ಷ ಜಮಾದಾರ್ ನಮ್ಮ ತಾತನ ಕಾಲದಿಂದಲೂ ಈ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ. ನಮ್ಮ ಕುಟುಂಬ ಸದಸ್ಯರೆಲ್ಲರೂ ಸೇರಿ ಪ್ರತಿ ವರ್ಷ 150ರಿಂದ 200 ಗಣೇಶಮೂರ್ತಿ ತಯಾರು ಮಾಡ್ತೀವಿ ಅಂತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಧರ್ಮ ದಂಗಲ್‌‌ಗೆ ಬೇಸರ ವ್ಯಕ್ತಪಡಿಸುವ ಅಲ್ಹಾಭಕ್ಷ ಜಮಾದಾರ್, ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವ ದೇಶ ನಮ್ಮದು. ನಮ್ಮೂರಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಅಣ್ಣತಮ್ಮಂದಿರಂತೆ ಇರ್ತೀವಿ‌. 

ಹಿಂದೂ ಮುಸ್ಲಿಂ ಅನ್ನೋದಕ್ಕಿಂತ ಮನುಷ್ಯ ಜಾತಿ ಮುಖ್ಯ ಅಂತಾರೆ. ಇನ್ನು ಮಾಂಜರಿವಾಡಿಯ ಜಮಾದಾರ್ ಕುಟುಂಬ ಕಾರ್ಯಕ್ಕೆ ಇಡೀ ಊರಿಗೆ ಊರೇ ಮೆಚ್ಚುಗೆ ವ್ಯಕ್ತಪಡಿಸುತ್ತೆ‌. ಗಣೇಶ ಮೂರ್ತಿ ಬುಕ್ ಮಾಡಲು ಆಗಮಿಸಿದ ಶಾಹಜೀ ಖೋತ್ ಎಂಬುವರು ಮಾತನಾಡುತ್ತ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರು ಮಾಡಿ ಪರಿಸರ ಸಂದೇಶ ಸಾರುವುದರ ಜೊತೆಗೆ ಭಾವೈಕ್ಯತೆ ಸಂದೇಶ ಸಹ ಸಾರುತ್ತಿದ್ದಾರೆ. ಗಣೇಶ ಮೂರ್ತಿ ತಯಾರಿಸೋದನ್ನು‌ ಬ್ಯುಸಿನೆಸ್ ಅಂತಾ ಮಾಡ್ತಿಲ್ಲ. ಮುಂಚೆ ಅಲ್ಹಾಭಕ್ಷ ಜಮಾದಾರ್ ಅಜ್ಜ, ತಂದೆ ಗಣೇಶಮೂರ್ತಿ ಮಾಡುತ್ತಿದ್ದರು‌. ಅದೇ ಪರಂಪರೆಯನ್ನು ಇವರು ಮುಂದುವರಿಸಿಕೊಂಡು ಬಂದಿದ್ದಾರೆ. 

ಚಾರ್ಮಾಡಿ ಘಾಟಿನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ, ಪ್ರಾಣ ಉಳಿಸಿದ ಮರ: ಹೇಗೆ ಗೊತ್ತಾ?

ನಮ್ಮೂರಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಸೇರಿ ಗಣೇಶೋತ್ಸವ, ಈದ್ ಮಿಲಾದ್ ಹಬ್ಬ ಮಾಡುತ್ತವೆ. ನಾವು ಪ್ರತಿ ವರ್ಷ ಅಲ್ಹಾಭಕ್ಷ ಜಮಾದಾರ್ ಕುಟುಂಬದವರು ತಯಾರಿಸಿರುವ ಗಣೇಶನ ಮೂರ್ತಿಯೇ ತಗೆದುಕೊಂಡು ಹೋಗ್ತೀವಿ‌. ಒಟ್ಟಿನಲ್ಲಿ ಸರ್ಕಾರಿ ನೌಕರಿ ಇದ್ದರೂ ವಂಶಪಾರಂಪರ್ಯವಾಗಿ ಬಂದ ವೃತ್ತಿ ಮುಂದುವರಿಸಿಕೊಂಡು  ಭಾವೈಕ್ಯತೆ ಸಾರುತ್ತಿರುವ ಅಲ್ಹಾಭಕ್ಷರ ಕಾರ್ಯ ಇತರರಿಗೆ ಮಾದರಿ‌.‌

click me!