ಸೇವಂತಿಗೆ ಹೂವಿನ ದರ ಕುಸಿತದಿಂದ ಕಂಗಾಲಾದ ಅನ್ನದಾತ: ಬೆಳೆ ನಾಶಪಡಿಸಿದ ರೈತ!

By Govindaraj S  |  First Published Sep 16, 2023, 11:30 PM IST

ಹೂವಿನ ದರ ದಿಢೀರ್ ಕುಸಿತದಿಂದ ಕಂಗಾಲಾದ ಕೋಟೆನಾಡಿನ ಅನ್ನದಾತ. ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದ್ರು ಕೂಲಿ ಕಾರ್ಮಿಕರಿಗೂ ಹಣ ಸಿಗ್ತಿಲ್ಲ ಎಂದು ಟ್ರಾಕ್ಟರ್ ನಿಂದ ಬೆಳೆ ನಾಶ ಪಡಿಸ್ತಿರೋ ರೈತ.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಸೆ.16): ಹೂವಿನ ದರ ದಿಢೀರ್ ಕುಸಿತದಿಂದ ಕಂಗಾಲಾದ ಕೋಟೆನಾಡಿನ ಅನ್ನದಾತ. ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದ್ರು ಕೂಲಿ ಕಾರ್ಮಿಕರಿಗೂ ಹಣ ಸಿಗ್ತಿಲ್ಲ ಎಂದು ಟ್ರಾಕ್ಟರ್ ನಿಂದ ಬೆಳೆ ನಾಶ ಪಡಿಸ್ತಿರೋ ರೈತ. ಈ ಕುರಿತು ಒಂದು ವರದಿ ಇಲ್ಲಿದೆ. ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದಿರೋ ಬೆಳೆಯನ್ನೇ ನೊಂದು ನಾಶ ಪಡಿಸ್ತಿರೋ ರೈತ ಕಾಂತರಾಜ್. ಸೂಕ್ತ ಪರಿಹಾರ ಒದಗಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ತಿರೋ ರೈತ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ, ಶ್ರಾವಣ ಮಾಸ ಹಾಗೂ ಚೌತಿ ಹಬ್ಬದ ಸಮಯದಲ್ಲಿ ಸೇವಂತಿಗೆ ಹೂವಿನ ದರ ಕೇಳೋದಕ್ಕೂ ಗ್ರಾಹಕರು ಹಿಂದೇಟು ಹಾಕುವ ಕಾಲವಿತ್ತು. 

Tap to resize

Latest Videos

undefined

ಆದ್ರೆ ಈ ಬಾರಿ ದಿಢೀರ್ ಹೂವಿನ ದರ ಕುಸಿತದಿಂದ ಕೋಟೆನಾಡಿನ ಅನ್ನದಾತರು ಕಂಗಾಲಾಗಿ ಹೋಗಿದ್ದಾರೆ. ಒಂದು ಮಾರು ಸೇವಂತಿಗೆ ಕೇವಲ 10 ರೂಗೆ ಮಾರುವ ಪರಿಸ್ಥಿತಿ ಬಂದಿದ್ದು, ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿರೋ ರೈತ ಹಾಕಿರುವ ಬಂಡವಾಳವೂ ಸಿಗ್ತಿಲ್ವಲ್ಲ ಎಂದು ನೋವಿನಿಂದ ತಾನು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಟ್ರಾಕ್ಟರ್ ಮೂಲಕ ನಾಶ ಪಡಿಸ್ತಿದ್ದಾನೆ. ಒಂದು ಎಕರೆ ಸೇವಂತಿಗೆ, ಕಾಕಡ, ಸೂಜಿ ಮಲ್ಲಿಗೆ ಬೆಳೆಯಬೇಕಂದ್ರೆ ಎರಡ ಲಕ್ಷಕ್ಕೂ ಅಧಿಕ ಹಣ ಖರ್ಚಾಗಲಿದೆ. 

ಚಾರ್ಮಾಡಿ ಘಾಟಿನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ, ಪ್ರಾಣ ಉಳಿಸಿದ ಮರ: ಹೇಗೆ ಗೊತ್ತಾ?

ಪ್ರತಿ ಭಾರಿಯೂ ಶ್ರಾವಣ ಮಾಸ ಹಾಗೂ ಚೌತಿ ಹಬ್ಬದ ಸಮಯದಲ್ಲಿ ದರ ಹೆಚ್ಚಿರೋದು ಆದ್ರೆ ಈ ಬಾರಿ ದರ ಕುಸಿತದಿಂದ ನಮ್ಮ ಪಾಡು ಹೇಳತೀರದು ಎಂದು ಬೇಸರ ವ್ಯಕ್ತಪಡಿಸ್ತಿದ್ದಾರೆ ರೈತರು. ಇನ್ನೂ ಹುಣಸೇಕಟ್ಟೆ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಹೆಕ್ಟೇರ್ ನಲ್ಲಿ ಸೇವಂತಿಗೆ ಹೂವನ್ನು ಬೆಳೆಯಲಾಗುತ್ತದೆ. ಎಷ್ಟೋ ರೈತರು ಹೂವು ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಪ್ರತೀ ಬಾರಿ ಶ್ರಾವಣ ಮಾಸದಲ್ಲಿ ಹೂವಿನ ದರ ಹೆಚ್ಚಾಗಿ ಇರೋದ್ರಿಂದ ಅಲ್ಪ ಸ್ವಲ್ಪ ಲಾಭ ಗಳಿಸುತ್ತಿದ್ದೆವು. ಅದ್ರೆ ಈ ಬಾರಿ ದರ ಕುಸಿತದಿಂದ ಹೂವಿನ ಬೆಳೆ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರಿಗೂ ಹಣ ನೀಡಲು ಸಾಧ್ಯವಾಗ್ತಿಲ್ಲ. 

ಚಿತ್ರದುರ್ಗ ಜಿಲ್ಲೆಯಾದ್ಯಂತ ಹಲವೆಡೆ ದಾಳಿ: 12 ಪಿಒಪಿ ಗಣೇಶ ಮೂರ್ತಿ ವಶ

ಇನ್ನೂ ಈ ಬಗ್ಗೆ ಸಂಬಂಧಿಸಿದ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನಾದ್ರು ಸರ್ಕಾರ ನಮಗೆ ಆಗಿರುವ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಲಿ ಎಂಬುದು ರೈತರ ಆಗ್ರಹ. ಒಟ್ಟಾರೆ ಕೋಟೆನಾಡಿನಲ್ಲಿ ಮಳೆ ಬಾರದೇ ಕಂಗಾಲಾಗಿದ್ದ ಅನ್ನದಾತರಿಗೆ ದರ ಕುಸಿತವು ಗಾಯದ ಮೇಲೆ ಬರ ಎಳೆದಂತೆ ಆಗಿದೆ. ಆದ್ದರಿಂದ ಇನ್ನಾದ್ರು ಅಧಿಕಾರಿಗಳು ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಲಿ ಎಂಬುದು ನಮ್ಮ ಒತ್ತಾಯ.

click me!