ಭಾರತೀಯರ ಆಯುಷ್ಯ ಬರುಬರುತ್ತಾ ಕಡಿಮೆ ಆಗ್ತಿದೆ!

By Kannadaprabha News  |  First Published Jul 1, 2023, 12:29 PM IST

ಭಾರತ ಜಗತ್ತಿಗೆ ಇತರೆÜ ದೇಶಗಳ ಮಧ್ಯೆ ಹತ್ತಾರು ವಿಚಾರಗಳಲ್ಲಿ ಪ್ರಗತಿ ಪಥದಲ್ಲಿ ಸಾಗುತ್ತಿದೆಯಾದರೂ ದೇಶದ ಜನರ ಆಯುಷ್ಯದ ಪ್ರಮಾಣದಲ್ಲಿ ಸರಾಸರಿ 68 ವಯಸ್ಸಿಗಿಂತಲೂ ಇಳಿಮುಖವಾಗುತ್ತಿರುವುದು ಖೇದಕರ ಎಂದು ಕಂಪಾನಿಯೋ ಕಂಪನಿಯ ಪ್ರವರ್ತಕ ಕೌಶಿಕ ಅಭಿಪ್ರಾಯಪಟ್ಟರು.


ಲೋಕಾಪುರ (ಜು.1) : ಭಾರತ ಜಗತ್ತಿಗೆ ಇತರೆ ದೇಶಗಳ ಮಧ್ಯೆ ಹತ್ತಾರು ವಿಚಾರಗಳಲ್ಲಿ ಪ್ರಗತಿ ಪಥದಲ್ಲಿ ಸಾಗುತ್ತಿದೆಯಾದರೂ ದೇಶದ ಜನರ ಆಯುಷ್ಯದ ಪ್ರಮಾಣದಲ್ಲಿ ಸರಾಸರಿ 68 ವಯಸ್ಸಿಗಿಂತಲೂ ಇಳಿಮುಖವಾಗುತ್ತಿರುವುದು ಖೇದಕರ ಎಂದು ಕಂಪಾನಿಯೋ ಕಂಪನಿಯ ಪ್ರವರ್ತಕ ಕೌಶಿಕ ಅಭಿಪ್ರಾಯಪಟ್ಟರು.

ಪಟ್ಟಣದ ಸದ್ಗುರು ಶಂಭುಲಿಂಗಾನಂದ ಮಠ ಸದ್ಭಕ್ತರು, ಹಿರಿಯ ನಾಗರಿಕರ ಸೇವಾ ಸಂಘ (ರಿ), ಕಂಪಾನಿಯೋ ಇವರ ಸಹಯೋಗದೊಂದಿಗೆ ನಡೆದ 15 ದಿನಗಳ ಉಚಿತ ಪೂಟ್‌ ಫÜಲ್ಸ್‌ ಥೆರಪಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿ ಮಾತನಾಡಿದ ಅವರು, ಮನೆಯಲ್ಲಿಯೇ ಕುಳಿತು ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್‌ವೇನ್‌, ಬೆನ್ನುನೋವು, ಪಾಶ್ರ್ವವಾಯು, ಥೈರಾಯ್ಡ್‌, ನಂತಹ ಕಾಯಿಲಿಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

Tap to resize

Latest Videos

undefined

Panchang: ತುಳಸಿ ಹಬ್ಬ ಆಚರಿಸುವುದರಿಂದ ಆಯುಷ್ಯ ಪ್ರಾಪ್ತಿ

 

ಹಿರಿಯ ನಾಗರಿಕರ ಸೇವಾ ಸಂಘದ ಅಧ್ಯಕ್ಷ ಆರ್‌.ಕೆ.ಮಠದ ಮಾತನಾಡಿ, ಇಂತಹ ಶಿಬಿರಗಳು ಪರಿಣಾಮಕಾರಿಯಾಗಿದೆ. ಅತ್ಯಂತ ಸುಲಭವಾಗಿ ಆರೋಗ್ಯ ವೃದ್ಧಿಸಿಕೊಳ್ಳು ಸಾಧ್ಯ ಎಂದರು. ಗ್ರಾಮೀಣ ಭಾಗವಾದ ನಮ್ಮಲ್ಲಿ ಫäಟ್‌ ಪಲ್ಸ್‌ ಥೆರಪಿ ಪ್ರಥಮ ಬಾರಿಗೆ ಆಯೋಜನೆ ಮಾಡಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ತಿಳಿಸಿದರು.

ನಿವೃತ್ತ ಪ್ರಾಚಾರ್ಯ ವ್ಹಿ.ಬಿ.ಮಾಳಿ ಮಾತನಾಡಿ, ಪೂಟ್‌ ಫಲ್ಸ್‌ ಥೆರಪಿಯಿಂದ ರಕ್ತ ಪರಿಚಲನೆ ಮತ್ತು ನರಗಳ ಸಮಸ್ಯೆಗಳನ್ನು ಔಷಧಿ ರಹಿತವಾಗಿ, ಅಡ್ಡಪರಿಣಾಮವಿಲ್ಲದೆ ನಿವಾರಿಸಬಹುದು. ಈ ಥೆರಪಿಯಿಂದ 5 ಕಿ.ಮೀ ವಾಕಿಂಗ್‌ ಮಾಡಿದಷ್ಟುರಕ್ತ ಸಂಚಾರ ಮಡಲು ಸಹಕಾರಿಯಾಗುತ್ತದೆ ಎಂದರು.

ಆರೋಗ್ಯ, ಆಯುಷ್ಯ, ಸಂಪತ್ತಿಗಾಗಿ ಈ ಸುಲಭ ಮಂತ್ರ ಪಠಿಸಿ..

ಪಿಜಿಯೋಥೆರಪಿ ತಜ್ಞ ಅಶ್ವಥ, ಹಿರಿಯರಾದ ಎಸ್‌.ಆರ್‌.ಹುಂಡೇಕಾರ, ಚಂದ್ರಕಾಂತ ರಂಗಣ್ಣವರ, ಬಸನಗೌಡ ಪಾಟೀಲ, ಕೆ.ಎಸ್‌.ಪಾಟೀಲ, ಬಸವರಾಜ ಉದಪುಡಿ, ಡಿ.ಎಂ.ತುಬಾಕಿ, ವೆಂಕಣ್ಣ ಮುಳ್ಳೂರ, ಬಸವರಾಜ ಅಂಗಡಿ, ಅರ್ಜುನಪ್ಪ ಕೊಪ್ಪದ, ರಾಮಣ್ಣಾ ಪೋಲಿಸ್‌ ಪಾಟೀಲ ಫುಟ್‌ ಪಲ್ಸ್‌ ಥೆರಪಿ ಚಿಕಿತ್ಸಾ ಶಿಬಿರಾರ್ಥಿಗಳು ಇದ್ದರು.

click me!