ಪರಿಸರ ಸಂರಕ್ಷಣೆಯಾದರೆ ಮಾತ್ರ ಮಾನವನ ಭವಿಷ್ಯ ಸದೃಢ: ರಾಜ್ ಕಿಶೋರ್ ಸಿಂಗ್

Published : Jul 09, 2022, 09:37 PM IST
ಪರಿಸರ ಸಂರಕ್ಷಣೆಯಾದರೆ ಮಾತ್ರ ಮಾನವನ ಭವಿಷ್ಯ ಸದೃಢ: ರಾಜ್ ಕಿಶೋರ್ ಸಿಂಗ್

ಸಾರಾಂಶ

*  ಜಾಗತಿಕ ತಾಪಮಾನ ಕಡಿಮೆ ಮಾಡಲು ಹಸಿರೀಕರಣದಿಂದ ಮಾತ್ರ ಸಾಧ್ಯ *  ಉತ್ತಮ ಪರಿಸರ ಪ್ರೇಮಿ ವೈದ್ಯನಾಗವುದು ಇಂದಿನ ಜಗತ್ತಿಗೆ ಅವಶ್ಯಕತೆ ಇದೆ *  ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ತಿಳಿಸಿದಂತೆ ಸಸ್ಯಗಳಿಗೂ ಜೀವವಿದೆ 

ವರದಿ: ಟಿ.ಮಂಜುನಾಥ್, ಹೆಬ್ಬಗೋಡಿ

ನೆಲಮಂಗಲ(ಜು.09):  ನಮ್ಮೆಲ್ಲರ ಭವಿಷ್ಯವಿರುವುದು ಪರಿಸರ, ಭೂಮಿ ಹಾಗೂ ಮರ ಗಿಡಗಳಿಂದ ಎಂದು ವೈದ್ಯ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣಾ ಹಿರಿಯ ಅಧಿಕಾರಿ (ಐಎಫ್ಎಸ್) ರಾಜ್ ಕಿಶೋರ್ ಸಿಂಗ್ ಹೇಳಿದರು.  

ತಾಲೂಕಿನ ತಿಪ್ಪಗೊಂಡನಹಳ್ಳಿ ಬಳಿಯ ಶ್ರೀ ಸಿದ್ದಾರ್ಥ ಮಹಾವಿದ್ಯಾಲಯದ ಪ್ರಥಮ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶಿಕ್ಷಣದ ಜೊತೆಗೆ ಪರಿಸರ ಎಂಬ ಘೋಷ ವಾಕ್ಯದೊಂದಿಗೆ ಗ್ರೀನ್ ಗ್ಯಾಜೇಯೇಷನ್ ಡೇ-2022 ಕ್ಕೆ, ಕಾಲೇಜು ಆವರಣದಲ್ಲಿ ಗಿಡ ನೆಟ್ಟು ದೀಪ ಬೆಳಗಿ ಚಾಲನೆ ನೀಡಿ ಮಾತನಾಡಿದರು.  

ಅರಣ್ಯದಲ್ಲಿ  ಬೀಜದುಂಡೆಗಳ ಬಳಕೆ ಮಾಡುವ ಬದಲು ಖಾಲಿ ಜಾಗದಲ್ಲಿ ಬಳಸುವುದು ಉತ್ತಮ ಬೆಳವಣಿಗೆ, ಜಾಗತಿಕ ತಾಪಮಾನ ಕಡಿಮೆ ಮಾಡಲು ಹಸಿರೀಕರಣದಿಂದ ಮಾತ್ರ ಸಾಧ್ಯ, ಉತ್ತಮ ಪರಿಸರ ಪ್ರೇಮಿ ವೈದ್ಯನಾಗವುದು ಇಂದಿನ ಜಗತ್ತಿಗೆ ಅವಶ್ಯಕತೆ ಇದೆ, ನಿಮ್ಮ ಕ್ಯಾಂಪಸ್ ನಲ್ಲಿ ಐದು ವರ್ಷ ವೈದ್ಯ ಶಿಕ್ಷಣ ಮುಗಿಸುವ ವೇಳೆಗೆ, ಒಂದು ಉತ್ತಮ ಸಸಿಯನ್ನು ಮರವನ್ನಾಗಿ ಮಾಡುತ್ತೇನೆ ಎಂಬ ಗುರಿ ನಿಮ್ಮಲ್ಲರಲ್ಲಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಧಾರವಾಡ: ನವಲೂರಿನಲ್ಲಿ ಸಾಲು ಮರದ ತಿಮ್ಮಕ್ಕ ಹೆಸರಿನ ನಗರವನ..!

ಕಾಲೇಜಿನ ಟ್ರಸ್ಟಿ ಕನ್ನಿಕಾ ಪರಮೇಶ್ವರಿ ಮಾತನಾಡಿ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ತಿಳಿಸಿದಂತೆ ಸಸ್ಯಗಳಿಗೂ ಜೀವವಿದೆ, ಎಂಬುದನ್ನು ನನ್ನ ಜೀವನದಲ್ಲೂ ಈ ಅನುಭವ ತಿಳಿದಿದ್ದೇನೆ, ಈ ವನಮಹೋತ್ಸವದ ಮಾದರಿ ಐದು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಉತ್ತಮವಾಗಿ ನಡೆಯುತ್ತಿದೆ, ನಾವೆಲ್ಲರೂ ಪರಿಸರದೊಂದಿಗೆ ಉತ್ತಮ ಸೌರ್ಹದಯುತವಾದ ಸಂಬಂಧ ಇಟ್ಟುಕೊಂಡಾಗ ಮಾತ್ರ ನಿಜವಾದ ಮಾನವೀಯತೆ ಉಳಿದು, ಪ್ರಾಕೃತಿಕ ಸಂಪತ್ತನ್ನು ಉಳಿಸಬಹುದು ಎಂದರು.  

ಈ ವೇಳೆಯಲ್ಲಿ ಕಾಲೇಜಿನ ಉಪಕುಲಪತಿ ಡಾ ಬಾಲಕೃಷ್ಣ ಶೆಟ್ಟಿ, ಸಹಾಯಕ ರೆಜಿಸ್ಟರ್ ಡಾ ಸುದೀಪ್ ಪ್ರಾಂಶುಪಾಲರಾದ ಡಾ. ಶ್ರೀನಿವಾಸ್, ಮೆಡಿಕಲ್ ಸೂಪರ ಡೆಂಟ್ ಡಾ.ಮನೋಹರ್, ಕಾರ್ಯಕ್ರಮಾಧಿಕಾರಿ ಡಾ. ಅಶೋಕ್ ಜಯರಾಮ್, ಸಮನ್ವಯಾಧಿಕಾರಿ ಡಾ.ಶೋಭಾ ರಾಣಿ, ವಿದ್ಯಾರ್ಥಿಗಳಾದ ಶ್ರೀ ವಿದ್ಯಾ, ಸಂತೋಷ್, ಸಿಂಚನ, ಜನ್ನಿಫರ್, ನೂರಾರು ವೈದ್ಯ ವಿದ್ಯಾರ್ಥಿಗಳಿದ್ದರು.
 

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ