ರೇಣುಕಾಚಾರ್ಯರ ಮೂರ್ತಿಗಾಗಿ ರಂಭಾಪುರಿ ಪೀಠಕ್ಕೆ ಬೃಹತ್‌ ಶಿಲೆ ಆಗಮನ!

By Kannadaprabha News  |  First Published Jun 16, 2023, 4:56 AM IST

ರಂಭಾಪುರಿ ಪೀಠದ ಪರಿಸರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯ ಮಂಗಲ ಶಿಲಾ ಮೂರ್ತಿ ನಿರ್ಮಾಣಕ್ಕೆ ತುಮಕೂರು ಸಮೀಪದ ಮಡಕಶಿರಾ ಕ್ವಾರಿಯಿಂದ 250 ಟನ್‌ ತೂಕದ ಬೃಹತ್‌ ಶಿಲೆ ಬುಧವಾರ ರಂಭಾಪುರಿ ಪೀಠ ತಲುಪಿತು.


 ಬಾಳೆಹೊನ್ನೂರು (ಜೂ.16): ರಂಭಾಪುರಿ ಪೀಠದ ಪರಿಸರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯ ಮಂಗಲ ಶಿಲಾ ಮೂರ್ತಿ ನಿರ್ಮಾಣಕ್ಕೆ ತುಮಕೂರು ಸಮೀಪದ ಮಡಕಶಿರಾ ಕ್ವಾರಿಯಿಂದ 250 ಟನ್‌ ತೂಕದ ಬೃಹತ್‌ ಶಿಲೆ ಬುಧವಾರ ರಂಭಾಪುರಿ ಪೀಠ ತಲುಪಿತು.

ರಂಭಾಪುರಿ ಜಗದ್ಗುರು(Rambhapuri jagadguru) ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ(Dr Veerasomeshwar shivacharya swamiji) ಅವರ ಆಶಯದಂತೆ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಶಿಲಾಮಯ ಮೂರ್ತಿ ನಿರ್ಮಿಸಲು ಕಾರ್ಯಾರಂಭ ಮಾಡಿದ್ದು, ಈಗಾಗಲೇ 100 ಹಾಗೂ 150 ಟನ್‌ ತೂಕದ ಪಾಣಿಪೀಠದ ಎರಡು ಬೃಹತ್‌ ಶಿಲೆಗಳನ್ನು ಶ್ರೀಪೀಠಕ್ಕೆ ತಂದು ಮೂರ್ತಿ ನಿರ್ಮಾಣದ ಕೆಲಸ ಆರಂಭಿಸಲಾಗಿದೆ.

Latest Videos

undefined

ಸನಾತನ ಧರ್ಮದ ಬಗ್ಗೆ ಪ್ರತಿಯೊಬ್ಬರೂ ಗೌರವ ಬೆಳೆಸಿಕೊಳ್ಳಿ: ಡಾ.ವೀರಸೋಮೇಶ್ವರ ಜಗದ್ಗುರುಗಳು

ಬೃಹತ್‌ ಶಿಲೆ ಸಾಗಾಟ ಕಾರ್ಯವನ್ನು ಬೆಂಗಳೂರಿನ ಶ್ರೀಧರಬಾಬು ತಂಡದವರು ವಹಿಸಿಕೊಂಡಿದ್ದು, ಸುಮಾರು 20 ದಿನಗಳಿಗೂ ಅಧಿಕ ಕಾಲ ಸಾಗಟಕ್ಕೆ ಆಗಿದೆ. ಬೃಹತ್‌ ಶಿಲೆಯನ್ನು ರಸ್ತೆ ಮೂಲಕ ತರುವುದೇ ಸಾಹಸಮಯವಾದ ಕೆಲಸವಾಗಿತ್ತು. ಶಿಲೆಯನ್ನು 112 ಚಕ್ರಗಳುಳ್ಳ ಬೃಹತ್‌ ವಾಹನದಲ್ಲಿ ಸಾಗಾಟ ಮಾಡಲಾಯಿತು. ಮೂರ್ತಿ ನಿರ್ಮಾಣಕ್ಕೆ ಅಗತ್ಯವಿರುವ 4ನೇ ಶಿಲೆಯು ಶೀಘ್ರದಲ್ಲಿಯೇ ಶ್ರೀಪೀಠಕ್ಕೆ ತರಲಿದ್ದು, ಇದು 300 ಟನ್‌ ತೂಕ ಹೊಂದಿರಲಿದೆ ಎಂದು ಶ್ರೀಪೀಠದ ಮೂಲಗಳು ತಿಳಿಸಿವೆ.

ಶಿಲಾ ಮೂರ್ತಿಯ ಕೆತ್ತನೆ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ಅಶೋಕ ಗುಡಿಗಾರ ಮತ್ತು ಗೌತಮ ಗುಡಿಗಾರ ವಹಿಸಿಕೊಂಡಿದ್ದಾರೆ.

ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚು ಸ್ಥಾನ ಕೊಡಿ: ರಂಭಾಪುರಿ ಶ್ರೀಗಳ ಆಗ್ರಹ

click me!