ಕತ್ತೆ ಹಾಲು ಸೇವನೆಯಿಂದ ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಕಡಿಮೆಯಾಗುತ್ತದೆಯಂತೆ. ಇದರಿಂದ ನಗರದ ಜನರು ಕತ್ತೆ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ಅಚ್ಚರಿ ಮೂಡಿಸಿದೆ. ಕತ್ತೆ ಹಾಲು ಅರ್ಧ ಲೀಟರ್‌ನಷ್ಟು ಸಿಗುವುದಿಲ್ಲ. ಇದು ಎಂಎಲ್‌ನಲ್ಲಿ ಮಾತ್ರ ಗ್ರಾಹಕರ ಎದುರು ಹಾಲು ಕರೆದು ಕೊಡಲಾಗುತ್ತದೆ. ₹80-100ಗೆ 10 ಎಂಎಲ್ ಹಾಲು ಸಿಗುತ್ತದೆ.
ವಿಜಯಪುರ(ನ.07): ಕತ್ತೆಯನ್ನು ಜನರು ನಿಕೃಷ್ಟವಾಗಿ ಕಾಣುತ್ತಾರೆ. ಆದರೆ, ಈಗ ಕತ್ತೆಗೂ ಒಂದು ಒಳ್ಳೆಯ ಕಾಲ ಬಂದಿದೆ. ಕತ್ತೆ ಹಾಲಿಗೆ ಸಂಪೂರ್ಣ ಬೇಡಿಕೆ ಬಂದಿದ್ದು, ಎಲ್ಲೆಡೆ ಈಗ ಅದರದ್ದೇ ಹವಾ ಆಗಿದೆ. ಗುಮ್ಮಟನಗರದ ವಿವಿಧ ಬಡಾವಣೆಯಲ್ಲಿ ಹಾದಿಬೀದಿಯಲ್ಲಿ ಕತ್ತೆ ಹಾಲಿಗೆ ಭಾರೀ ಬೇಡಿಕೆ ಬಂದಿದೆ. ಹಾಲು ಅಂದಾಕ್ಷಣ ನೆನಪಿಗೆ ಬರುವುದು ಹಸು ಇಲ್ಲವೆ ಎಮ್ಮೆಯ ಹಾಲು. ಆದರೆ, ಹಸು-ಎಮ್ಮೆ ಹಾಲಿಗಿಂತ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿದೆ. ಒಂದು ಲೀಟರ್ ಡೇರಿ ಹಾಲಿಗೆ ₹45 ರೂಪಾಯಿ. ಆದರೆ ಕತ್ತೆ ಹಾಲಿಗೆ ₹50ಗೆ ಕೇವಲ 5 ಎಂಎಲ್ ದರ ಇದೆ.
ಕತ್ತೆ ಹಾಲು ಸೇವನೆಯಿಂದ ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಕಡಿಮೆಯಾಗುತ್ತದೆಯಂತೆ. ಇದರಿಂದ ನಗರದ ಜನರು ಕತ್ತೆ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ಅಚ್ಚರಿ ಮೂಡಿಸಿದೆ. ಕತ್ತೆ ಹಾಲು ಅರ್ಧ ಲೀಟರ್‌ನಷ್ಟು ಸಿಗುವುದಿಲ್ಲ. ಇದು ಎಂಎಲ್‌ನಲ್ಲಿ ಮಾತ್ರ ಗ್ರಾಹಕರ ಎದುರು ಹಾಲು ಕರೆದು ಕೊಡಲಾಗುತ್ತದೆ. ₹80-100ಗೆ 10 ಎಂಎಲ್ ಹಾಲು ಸಿಗುತ್ತದೆ.
ಗ್ಯಾಸ್ ಕಟಿಂಗ್‌ನಿಂದ ಎಟಿಎಂ ಮಷಿನ್ ಕತ್ತರಿಸಿ ಲಕ್ಷಾಂತರ ರೂ ನಗದು ದೋಚಿದ ಖದೀಮರು!
ಒಂದು ಲೀಟರ್ ಹಾಲಿಗೆ ₹5000 ಆಗಬಹುದು. ಕತ್ತೆ ಹಾಲಿನಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ಹಾಗಾಗಿ ಈ ಹಾಲಿಗೆ ಬೇಡಿಕೆ ಬರಲು ಪ್ರಮುಖ ಕಾರಣವಾಗಿದೆ. ಮಹಾರಾಷ್ಟ್ರದ ನಾಂದೇಡದದಿಂದ 50 ಕುಟುಂಬಗಳು ಕತ್ತೆಯೊಂದಿಗೆ ವಿಜಯಪುರಕ್ಕೆ ನಗರಕ್ಕೆ ಬಂದು ಹಾಲು ಮಾರುತ್ತಿವೆ. ನಗರ ಸೇರಿದಂತೆ ಹಳ್ಳಿಗಳ್ಳಿಗೆ ಬೆಳಗ್ಗೆ 6 ಗಂಟೆಗೆ ಹೋಗಿ 10-11 ಗಂಟೆಗೆ ವೇಳೆ 1000-1500 ರೂ.ಗಳಿಕೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಇವರು ಕತ್ತೆ ಹಾಲಿನ ಮಹತ್ವದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಾರೆ. ಬೇಕಾದವರು ಅಲ್ಲೇ ಕತ್ತೆ ಹಾಲನ್ನು ಕರೆಸಿಕೊಂಡು ಕುಡಿಯುತ್ತಿದ್ದಾರೆ.
ಬಾಣಂತಿಯರು ತಮ್ಮ ಕಂದಮ್ಮಗಳಿಗೆ ಕತ್ತೆ ಹಾಲು ಕುಡಿಸಿ ಬುದ್ಧಿವಂತರಾಗಲಿ, ಶಕ್ತಿವಂತರಾಗಲಿ, ರೋಗ ನಿರೋಧಕ ಶಕ್ತಿ ಹೆಚ್ಚಾಗಲಿ ಅಂತಿದರೆ, ರಸ್ತೆಯಲ್ಲಿ ಕತ್ತೆ ಕಂಡು ದೊಡ್ಡವರು ಕೂಡ ಚೌಕಾಸಿ ಮಾಡಿ ಹಾಲು ಕುಡಿಯುತ್ತಿದ್ದಾರೆ. ಕತ್ತೆಗಳು ಅಂದರೆ ಕೇರ್ ಮಾಡದ ಜನ, ಇದೀಗ ಕೈಗೆಟುಕದ ಅದರ ಹಾಲಿಗೆ ಮುಗಿ ಬೀಳುತ್ತಿರುವುದಂತು ಸತ್ಯ.
ಒಂದು ಕತ್ತೆ ದಿನವೊಂದಕ್ಕೆ ಸುಮಾರು ಅರ್ಧ ಲೀಟರ್ ಹಾಲು ನೀಡುತ್ತದೆ. ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ 1200-1500 ರು. ಸಂಪಾದಿಸುತ್ತೇವೆ. ನಾನು ನಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವು. ವರ್ಷದಲ್ಲಿ ಮೂರು ತಿಂಗಳು ಬೇರೆ ನಗರಕ್ಕೆ ಹೋಗಿ ಹಾಲು ಮಾರುತ್ತೇವೆ ಎನ್ನುತ್ತಾರೆ ಕತ್ತೆ ಮಾಲೀಕ ನಾಗೇಶ ನಾಂದೇಡ್.
ಉಳ್ಳಾಗಡ್ಡಿ ದರ ಏರಿಕೆ: ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ..!
ಈ ಹಿಂದೆ ನಗರಕ್ಕೆ ಬಂದಾಗ ಕೇವಲ ಮಕ್ಕಳಿಗೆ ಹಾಲು ಕುಡಿಸಿ ಎಂದು ಹೇಳಿದ್ದರು. ಈಗ ಎಲ್ಲರೂ ಕುಡಿಯಬಹುದು ಎನ್ನುತ್ತಿದ್ದಾರೆ. ಕತ್ತೆ ಹಾಲು ಸೇವನೆ ನಿಜಕ್ಕೂ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ವಿಜಯಪುರ ನಿವಾಸಿ ರಾಮರಾವ್ ಮೊಕಾಶಿ ಹೇಳಿದ್ದಾರೆ.
ನಾವು ವಿಜಯಪುರಕ್ಕೆ ಬಂದು ಮೂರು ನಾಲ್ಕು ದಿನವಾಗಿದೆ. ಇಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚು. ಜನರು ಸ್ವಯಂ ಪ್ರೇರಿತವಾಗಿ ತಮ್ಮ ಮಕ್ಕಳಿಗೆ ಹಾಲು ಕುಡಿಸುತ್ತಿದ್ದಾರೆ. 10 ಎಂಎಲ್‌ಗೆ 80-100 ರೂ. ಮಾರಾಟ ಮಾಡುತ್ತಿದ್ದೇವು ಎಂದು ಮಹಾರಾಷ್ಟ್ರ ನಾಗೇಶ ನಾಂದೇಡ್ ತಿಳಿಸಿದ್ದಾರೆ.