ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ ನೀರಾವರಿ ಉದ್ದೇಶಕ್ಕೆ ನಿರ್ಮಿಸಲಾದ ವಿಶ್ವೇಶ್ವರಯ್ಯ ಸುರಂಗ ಕಾಲುವೆಯ ಮೇಲ್ಭಾಗದ ಮಣ್ಣು ಕುಸಿತವಾಗಿದೆ.
ಮಂಡ್ಯ (ನ.07): ಕನ್ನಡ ನಾಡಿನ ಜೀವನದಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಿಂದ ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಕೆಆರ್‌ಎಸ್ ಆಣೆಕಟ್ಟೆಯಿಂದ ರೈತರ ಜಮೀನುಗಳಿಗೆ ನೀರು ಹರಿಸಲು ಹುಲಿಕೆರೆ ಗ್ರಾಮದ ಬಳಿ ನಿರ್ಮಿಸಲಾದ ಸುರಂಗ ನಾಲೆಯ (ಕಾಲುವೆ) ಮೇಲ್ಭಾಗದ ಭೂಮಿ ನಿರಂತರ ಮಳೆಯಿಂದ ಕುಸಿತವಾಗಿದೆ.
ಹೌದು, ಏಷ್ಯಾದಲ್ಲಿಯೇ ನೀರಾವರು ಉದ್ದೇಶಕ್ಕೆ ಸುರಂಗ ಮೊಟ್ಟಮೊದಲು ನಿರ್ಮಸಲಾದ ಸುರಂಗ ಕಾಲುವೆ ಎಂದು ಮಂಡ್ಯ ತಾಲೂಕಿನ ಹುಲಿಕೆರೆ ಸುರಂಗ ಕಾಲುವೆ ಪ್ರಸಿದ್ಧಿಯಾಗಿದೆ. ಇದನ್ನು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರು ನಿರ್ಮಿಸಿದ್ದಾರೆನ್ನಲಾಗಿದೆ. ಮಂಡ್ಯದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಭೂ ಕುಸಿತ ಉಂಟಾಗಿದೆ. ವಿಶ್ವೇಶ್ವರಯ್ಯ (ವಿಸಿ) ನಾಲಾ ಸುರಂಗದಲ್ಲಿ ಭೂ ಕುಸಿತ ಉಂಟಾಗಿದೆ. ಈ ಘಟನೆ ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಉಂಟಾಗಿದೆ. ಗ್ರಾಮದ ಮಧ್ಯ ಭಾಗದಲ್ಲಿ ಹಾದು ಹೋಗಿರೋ ಸುರಂಗವು ಏಕಾಏಕಿ ಕುಸಿದಿದೆ. ರಾಜಣ್ಣ ಎಂಬುವವರ ಮನೆಯ ಹಿಂಭಾಗದಲ್ಲಿ ನಿರ್ಮಿಸಲಾಗಿದ್ದ ಫ್ಲೋರ್ ಮಿಲ್ (ಹಿಟ್ಟಿನ ಗಿರಣಿ)ಯ ಗೋಡೆ ಕುಸಿತವಾಗಿದೆ. ಆದರೆ, ರಾತ್ರಿ ವೇಳೆ ಭೂ ಕುಸಿತವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
undefined
ಕರ್ನಾಟಕದ ಜನತೆಗೆ ಉಚಿತ ವಿದ್ಯುತ್ ಯೂನಿಟ್‌ಗಳ ಮಿತಿ ಹೆಚ್ಚಿಸಿದ ಸರ್ಕಾರ! ಯಾರಿಗೆಲ್ಲಾ ಅನ್ವಯ ಗೊತ್ತಾ?
ಸುರಂಗ ಮಾರ್ಗದ 20 ಮೀ. ಅಂತರದಲ್ಲಿ ವಿ.ಸಿ. ನಾಲೆ: ಇನ್ನು ವಿ.ಸಿ.ನಾಲಾ ಸುರಂಗದ ಪಕ್ಕದಲ್ಲೇ ಭೂ ಕುಸಿತ ಉಂಟಾಗಿದೆ. ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಸುರಂಗ ನಾಲೆಯಿಂದ ಕೇವಲ 20 ಮೀಟರ್ ದೂರದಲ್ಲೇ ಭೂಕುಸಿತ ಉಂಟಾಗಿದೆ. ಇನ್ನು ಸುರಂಗ ನಿರ್ಮಾಣ ವೇಳೆ ಮಣ್ಣು ಹಾಗೂ ಇತರೆ ಸಾಮಗ್ರಿ ಸಾಗಿಸಲು ದಾರಿ ಮಾಡಿಕೊಂಡಿದ್ದ ಜಾಗದಲ್ಲಿ ಭೂ ಕುಸಿತ ಉಂಟಾಗಿದೆ. ನಾಲೆಯ ಸುರಂಗಕ್ಕೆ ಸಂಪರ್ಕ ಕಲ್ಪಿಸಿದ್ದ ಜಾಗವನ್ನು ಸಂಪೂರ್ಣ ಮುಚ್ಟಿರಲಿಲ್ಲ. ಅದರ ಮೇಲ್ಭಾಗದಲ್ಲಿ ಮಣ್ಣು ಮುಚ್ಚಿ ಅದನ್ನು ವಸತಿ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು.
ಕಾವೇರಿ ಕಣಿವೆ, ಕರಾವಳಿ ಮತ್ತು ಕಾಫಿನಾಡಿನಲ್ಲಿ ಭಾರಿ ಮಳೆ: ಯಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಇನ್ನು ಸುರಂಗ ನಾಲೆಗೆ ಸರಕು ಸಾಮಗ್ರಿಗಳನ್ನು ಸಾಗಣೆ ಮಾಡಲು ಮಾಡಿಕೊಂಡಿದ್ದ ಕೊಳವೆ ಮಾರ್ಗದ ಮೇಲೆ ಮಣ್ಣು ಮುಚ್ಚಲಾಗಿದ್ದು, ಇದು ಗಟ್ಟಿಯಾಗಿದೆ ಎಂದು ಕೊಂಡು ಅದರ ಮುಂಭಾಗವೇ ರಾಜಣ್ಣ ಎನ್ನುವವರು ಫ್ಲೋರ್ ಮಿಲ್ ನಿರ್ಮಸಿಕೊಂಡಿದ್ದರು. ಆದರೆ, ಮಣ್ಣು ಗಟ್ಟಿಯಾಗಿ ಕುಳಿತುಕೊಳ್ಳದ ಹಿನ್ನೆಲೆಯಲ್ಲು ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿತವಾಗಿದೆ. ಏಕಾಏಕಿ ಸುರಂಗದ ಮಾರ್ಗ ಕುಸಿತಗೊಂಡ ಕಾರಣ ಮನೆ ಗೋಡೆಯೂ ಕುಸಿತವಾಗಿದೆ ಎಂದು ಹೇಳಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಇನ್ನು ವಿಸಿ ನಾಲೆಯ ಅಧಿಕಾರಿಗಳು ಭೇಟಿ ಮಾಡಿ ಕೂಡಲೇ ಈ ಸುರಂಗ ಮಾರ್ಗವನ್ನು ಮುಚ್ಚುವಂತೆ ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.