Hubballi KIMS: ಸತತ 6 ಗಂಟೆ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರು!

By Ravi Janekal  |  First Published Sep 22, 2022, 1:21 PM IST

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಸಂಜೀವಿನಿ. ಕರಡಿ ದಾಳಿಗೆ ತುತ್ತಾದ ವ್ಯಕ್ತಿಯೊರ್ವನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೇ ಸುದೀರ್ಘ 6 ಗಂಟೆಗಳ ಗಂಭೀರ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ. ಫಕ್ಕಿರಪ್ಪ ಅವರನ್ನು ಪ್ರಾಣ ಅಪಾಯದಿಂದ ಪಾರು ಮಾಡಿದ್ದಾರೆ.


ಹುಬ್ಬಳ್ಳಿ (ಸೆ.22): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಸಂಜೀವಿನಿ. ಕೋವಿಡ್ ಸಮಯದಲ್ಲಂತೂ ಸಹಸ್ರಾರು ಜನರ ಜೀವ ಉಳಿಸಿದ ಜೀವದಾತ. ಇದೀಗ ಕರಡಿ ದಾಳಿಗೆ ತುತ್ತಾದ ವ್ಯಕ್ತಿಯೊರ್ವನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೇ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದು ಸಾಬೀತು ಮಾಡಿದೆ.

Hubballi: ಮಹಿಳೆಯ ಕಣ್ಣಿನ ಕೆಳಗೆ ಸಿಲುಕಿದ್ದ ಮುರಿದ ಟೂತ್ ಬ್ರಶ್ ಹೊರ ತೆಗೆದ ವೈದ್ಯರು

Tap to resize

Latest Videos

ಹೌದು, ಹೀಗೆ ದೃಶ್ಯದಲ್ಲಿ ಕಾಣುತ್ತಿರುವ ಇವರ ಹೆಸರು ಫಕ್ಕಿರಪ್ಪ(Fakirappa), ಕಾರವಾರ(Karwar) ಜಿಲ್ಲೆಯ ಮುಂಡಗೋಡ(Mundagoda) ತಾಲೂಕಿನವರು. ಕಳೆದ ಜುಲೈ 30 ರಂದು ಹೊಲಕ್ಕೆ ತೆರಳುತ್ತಿದ್ದ ವೇಳೆ ಕರಡಿ(Bear)ಯೊಂದು ಏಕಾಏಕಿ ಮೈಮೇಲೆ ಎರಗಿ ಮಾರಣಾಂತಿಕವಾಗಿ ದಾಳಿ(attack) ನಡೆಸಿತ್ತು. ಪರಿಣಾಮ ಫಕ್ಕಿರಪ್ಪನ ಮೆದುಳು, ಕಣ್ಣು, ಮತ್ತು ಮುಖದ ಮೇಲ್ಭಾಗ ಶೇ.90 ರಷ್ಟು ಚರ್ಮ ಕಿತ್ತು ವಿರೂಪಗೊಂಡಿತ್ತು.

ತೀವ್ರವಾಗಿ ಗಾಯಗೊಂಡಿದ್ದ ಫಕಿರಪ್ಪರನ್ನ ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜುಲೈ 30 ರಂದು ದಾಖಲಾಗಿದ್ದರು.

ಇದೀಗ ಕಿಮ್ಸ್(KIMS) ಆಸ್ಪತ್ರೆಯ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ(surgery) ತಜ್ಞ ವೈದ್ಯರು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸ(Eye surgery)ಕರ ಸಹಯೋಗದಲ್ಲಿ ಸೆಪ್ಟೆಂಬರ್ 16 ರಂದು ಸುದೀರ್ಘ 6 ಗಂಟೆಗಳ ಗಂಭೀರ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ. ಫಕ್ಕಿರಪ್ಪ ಅವರನ್ನು ಪ್ರಾಣ ಅಪಾಯದಿಂದ ಪಾರು ಮಾಡಿದ್ದಾರೆ.

ಸದ್ಯ ಕಣ್ಣಿನ ಪ್ರಮುಖ ಭಾಗಗಳಿಗೆ ಯಾವುದೇ ರೀತಿಯ ಅಪಾಯವಾಗದಂತೆ ಪುನರ್ ರಚನೆ ಮಾಡಲು ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯ ತಜ್ಞ ಡಾ.ಮಂಜುನಾಥ(Dr Manjunath), ವಸಂತ ಕಟ್ಟಿಮನಿ(Vasanta Kattimani), ಅನುರಾಧ(Anuradha) ಹಾಗೂ ವಿವೇಕಾನಂದ ಜೇವರ್ಗಿ(Vivekanand Jevargi) ನೇತೃತ್ವದ ತಂಡ ಯಶಸ್ವಿಯಾಗಿದೆ. 

Hubballi Kims ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಈ ರೋಗಿಯ ತೊಡೆಯ ಚರ್ಮವನ್ನು ತೆಗೆದು ಮುಖಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಇದೀಗ ಫಕ್ಕಿರಪ್ಪ ಯಥಾಸ್ಥಿತಿಗೆ ಮರಳಿದ್ದಾರೆ. ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ 1.50 ಲಕ್ಷ ರೂ ವೆಚ್ಚವಾಗಬಹುದಾದ ಗಂಭೀರ ಸ್ವರೂಪದ ಈ ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಉಚಿತವಾಗಿ ಮಾಡಿದ್ದು, ರೋಗಿಯ ಜೀವ ಉಳಿಸಿ ಮಾದರಿ ಅನಿಸಿಕೊಂಡಿದೆ‌.

click me!