ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಯೋಜನೆ ಇಂಜಿನಿಯರನ್ನು ಗಲ್ಲಿಗೇರಿಸಬೇಕು: ಶಾಸಕ ಬೆಲ್ಲದ್

By Suvarna News  |  First Published Jul 6, 2024, 3:23 PM IST

ಅವೈಜ್ಞಾನಿಕ ಬಿ ಆರ್ ಟಿ ಎಸ್ ಯೋಜನೆಯ ಇಂಜಿನಿಯರ್ ನನ್ನ ಗಲ್ಲಿಗೇರಿಸಬೇಕು ಎಂದ ಶಾಸಕ ಅರವಿಂದ್ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 


ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಜು.6): ಅದೊಂದು ಹುಬ್ಬಳ್ಳಿ-ಧಾರವಾಡ ಜನತೆಗೆ ಕಡಿಮೆ ಸಮಯದಲ್ಲಿ ರಸ್ತೆ ಸಂಪರ್ಕವನ್ನ ಕಲ್ಪಿಸುಂತೆ ಬಿ ಆರ್ ಟಿ ಎಸ್ ಮಹತ್ವಾಕಾಂಕ್ಷೆ ಯೋಜನೆಯನ್ನ ಸರಕಾರ ಜಾರಿಗೆ ತಂದಿದೆ. ಆದರೆ ಅದು ಅವಳಿ ನಗರದ ಜನರಿಗೆ ಮಾರಕವಾಗಿದೆ ಎಂದರೆ ತಪ್ಪಾಗಲಾರದು. ಸದ್ಯ ಅವಳಿ ನಗರದ ಜನರು ಈ ಯೋಜನೆಗೆ ತೀವ್ರ ವಿರೋಧ  ವ್ಯಕ್ತ ಪಡಿಸುತ್ತಿದ್ದಾರೆ.

Tap to resize

Latest Videos

ಹುಬ್ಬಳ್ಳಿ ಧಾರವಾಡ ನಗರದ ಮಧ್ಯ 2018 ರಲ್ಲಿ ಬಿ ಆರ್ ಟಿ ಎಸ್ ಯೋಜನೆಯನ್ನ ಜಾರಿಗೆ ತರಲಾಗಿದೆ ಆದರೆ ಈ ಯೋಜನೆ ಅವೈಜ್ಞಾನಿಕ ಸೇವೆಯಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಅವರು ಗಂಭಿರ ಆರೋಪವನ್ನ ಮಾಡುತ್ತಿದ್ದಾರೆ ಇನ್ನು ಧಾರವಾಡದಲ್ಲಿ ಈ ಯೋಜನೆ ಸಾರ್ವಜನಿಕರಿಗೆ ಕಂಟಕವಾಗಿದೆ ಎಂದು ಜನ ಸಾಮಾನ್ಯರು ಬೇಸರ ವ್ಯಕ್ತ ಪಡಿಸಿದರು. ಇನ್ನು ಈ ಯೋಜನೆಯ ಬಗ್ಗೆ ನಾನು 2013 ರಲ್ಲೆ ಮೊದಲಭಾರಿಗೆ ಶಾಸಕನಾಗಿದ್ದಾಗ ನಾನು ಈ ಯೋಜನೆಯ ನಕ್ಷೆಯನ್ನ ಕೇಳಿದ್ದೆ ಆ ಸಮಯದಲ್ಲಿ ಯಾರು ಕ‌್ಯಾರೆ ಎನ್ನಲಿಲ್ಲ. ಆದರೆ ಈ ಯೋಜನೆಯ ನಕ್ಷೆ ರೂಪಿಸಿದ ಇಂಜಿನಿಯರ್ ಅವರನ್ನ ಗಲ್ಲಿಗೇರಿಸಬೇಕು ಎಂದು ಶಾಸಕ ಬೆಲ್ಲದ ಅವರು ಆಗ್ರಹ ಮಾಡಿದ್ದಾರೆ. ಬಿ ಆರ್ ಟಿ ಎಸ್ ಯೋಜನೆಯ ಅವೈಜ್ಞಾನಿಕ ಕಾಮಗಾರಿಯನ್ನ ಖಂಡಿಸಿ ಜುಲೈ 15 ರಂದು ಬೆಲ್ಲದ ಪಾದಯಾತ್ರೆ ಯನ್ನು ಮಾಡಲು ನಿರ್ಧರಿಸಿದ್ದಾರೆ.

ಬಿಬಿಎಂಪಿ ಮಹಾ ಅಕ್ರಮ, ಅಸ್ತಿತ್ವದಲ್ಲೇ ಇಲ್ಲದ 27 ಸಹಕಾರಿ ಸಂಘಗಳಿಗೆ ₹18 ಕೋಟಿ ಹಣ ವರ್ಗಾವಣೆ!

ಇನ್ನು ನಾನು 2013 ರಲ್ಲೆ ಟೋಲ್ ನಾಕಾ, ಎನ್ ಟಿ ಟಿ ಎಪ್, ಕೆ ಎಮ್ ಎಪ್, ಕಿಟಲ್ ಕಾಲೇಜು ಹತ್ರ ಮಳೆ ಬಂದರೆ ಬಿ ಆರ್ ಟಿ ಎಸ್ ರಸ್ತೆಯನ್ನ ದಾಟಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಈ ಯೋಜನೆ ಒಳ್ಳೆಯದ್ದು ಆದರೆ ಡಿಸೈನ್  ಮಾಡಿದ್ದು ಸರಿಯಲ್ಲಿ ಎಂದು ಬೆಲ್ಲದ ಆಕ್ರೋಶ ಹೊರ ಹಾಕಿದರು. ಇನ್ನು ಸುಮಾರು 6 ವರ್ಷಗಳಿಂದ ಈ ಯೋಜನೆ ಅವಳಿ ನಗರದ ಜನರಿಗೆ ಮಾರಕವಾಗಿದೆ.

ಇನ್ನು ಬಿ ಆರ್ ಟಿ ಎಸ್ ಯೋಜನೆಯಲ್ಲಿ 80 ಬಸ್ ಗಳು ಸಂಚಾರವನ್ನ ಮಾಡುತ್ತಿವೆ,ಅದರಲ್ಲೂ 10 ಕ್ಕೂ ಹೆಚ್ಚು ಬಸ್ ಗಳು ಸದ್ಯ ಡಿಪೋದಲ್ಲಿ ಹಾಳಾಗಿ ನಿಂತಿವೆ.ಆದರೆ ಈ ಕಾರಿಡಾರನ್ನ ಸುಮಾರು 20 ಕ್ಕೂ ಹೆಚ್ಚು ಬಸ್ ನಿಲ್ದಾಣಗಳು ಇವೆ. ಎಲ್ಲೂ ಕೂಡ ಓವರ ಬ್ರಿಡ್ಜ ಇಲ್ಲ. ಜೊತೆಗೆ ಸಿಗ್ನಲ್ ಗಳಲ್ಲಿ ಸರಿಯಾಗಿ ಓವರ ಬ್ರಿಡ್ಜ ಇಲ್ಲ, ಅಕ್ಕ ಪಕ್ಕದ ಜನರಿಗೆ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಲು ಪರದಾಡುವಂತಾಗಿದೆ.ಜೊತೆಗೆ ಸಿಗ್ನಲ್ ಗಳು ಅಲ್ಲಲ್ಲಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.

ಬೆಂಗಳೂರಿಗೆ ಬರಬೇಕಿದ್ದ ವಿಮಾನ ದೆಹಲಿಯಲ್ಲಿ ಲಾಕ್, 12 ಗಂಟೆ ವಿಮಾನದೊಳಗೆ ಹಸಿವಿನಿಂದ ಪರದಾಡಿದ ಪ್ರಯಾಣಿಕರು!

ಇನ್ನು ಬಿ ಆರ್ ಟಿ ಎಸ್ ಯೋಜನೆ ಜಾರಿಯಾದಾಗಿನಿಂದಲೂ ,2018 ರಿಂದ 2024 ರವೆಗೆ 43 ರಸ್ತೆ ಅಪಘಾತಗಳು ಆಗಿವೆ ಅದರಲ್ಲಿ 33 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ, ಮತ್ತು 10 ಜನರು ಪ್ರಾಣವನ್ನ ಕಳೆದುಕ್ಕೊಂಡಿದ್ದಾರೆ. ಇನ್ನು ಈ ಯೋಜನೆ ಅವಳಿ ನಗರದ ಜನತೆಗೆ ಮಾರಕವಾಗಿದೆ.ಎಂದು ಸ್ಥಳಿಯರು ಶಾಸಕ ಬೆಲ್ಲದ ಕೂಡಾ ಆಕ್ರೋಶವನ್ನ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಸದ್ಯ ಬಿ ಆರ್ ಟಿ ಎಸ್ ಯೋಜನೆಯ ವಿರುದ್ದ ಸಮರ ಸಾರಿದ್ದಾರೆ. ಜೊತೆಗೆ ಇದರಿಂದಾಗುವ ಸಮಸ್ಯಗಳನ್ನ ಜನಸಾಮಾನ್ಯರಿಗೆ ಮುಕ್ತಿ ಕೊಡಿಸಲು ಶಾಸಕ ಅರವಿಂದ ಬೆಲ್ಲದ ಅವರು ಜುಲೈ 15 ರಂದು ಪಾದಯಾತ್ರೆ ಮಾಡಿ ಬಿ ಆರ್ ಟಿ ಎಸ್ ಯೋಜನೆಯನ್ನ ಅಗಲೀಕರಣ ಮಾಡಿ ದುರಸ್ತಿ ಮಾಡಿ ಅವಳಿ ನಗರದ ಜನರ ಸಂಚಾರಕ್ಕೆ ಅನೂಕೂಲ ಮಾಡಲು ಮುಂದಾಗಿದ್ದಾರೆ.

click me!