'ಟೀ ಮಾರುತ್ತಿದ್ದ ಡಿಕೆಶಿ 800 ಕೋಟಿ ರೂ. ಗಳಿಸಿದ್ದು ಹೇಗೆ?'

By Web Desk  |  First Published Sep 11, 2019, 9:21 AM IST

ಕಾಳಧನ ದಂಧೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಇದಕ್ಕೆ ಒಕ್ಕಲಿಗರು ಒಂದಾಗಿ ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ಅಷ್ಟಕ್ಕೂ ಟೀ ಮಾರುತ್ತಿತ್ತ ಡಿಕೆಶಿ ಅಷ್ಡೊಂದು ಹಣ ಸಂಪಾದಿಸಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ ಬಿಜೆಪಿ ಎಂಎಲ್‌ಸಿ. 


ಚಿತ್ರದುರ್ಗ (ಸೆ.11) : ಬೆಂಗಳೂರಿನಲ್ಲಿ ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಂಚಾರದಲ್ಲಿ ವ್ಯತ್ಯಯವಾಗುವ ನಿರೀಕ್ಷೆ ಇದೆ. ಮತ್ತೊಂದೆಡೆ ಕಾಳ ದಂಧೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಬಂಧನವಾಗಿದ್ದನ್ನು ಹಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಚಿತ್ರದುರ್ಗದಲ್ಲಿ ಮಾತನಾಡಿದ ಬಿಜೆಪಿ ಎಂಎಲ್‌ಸಿ ರವಿಕುಮಾರ್, 'ಟೀ  ಮಾರುತ್ತಿದ್ದ ಕಾಂಗ್ರೆಸ್ ಮುಖಂಡ ಡಿ.ಕೆ.ಶಶಿಕುಮಾರ್ 800 ಕೋಟಿ ರೂ. ಒಡೆಯನಾಗಿದ್ದು ಹೇಗೆ? ಉಪ್ಪು ತಿಂದವರು ನೀರು ಕುಡಿಯಲೇ ಬೇಕು. 
ಡಿಕೆಶಿ, ಚಿದಂಬರಂ, ಕಾರ್ತಿಕ್ ಯಾರೇ ಇರಲಿ ತಮ್ಮ ತಪ್ಪಿಗೆ ಶಿಕ್ಷೆ ಎದುರಿಸಬೇಕು,' ಎಂಬ ಅಭಿಪ್ರಾಯ ಪಟ್ಟಿದ್ದಾರೆ. 

Tap to resize

Latest Videos

ಡಿಕೆೆಶಿ ಬಂಧನ ವಿರೋಧಿಸಿ ಬೆಂಗಳೂರಲ್ಲಿ ಒಕ್ಕಲಿಗರ ಬೃಹತ್ ಪ್ರತಿಭಟನೆ

'ಸಿಬಿಐ, ಇಡಿ ಅದು ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ತನಿಖಾ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ.  ಉತ್ತಮ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.  ಡಿಕೆಶಿ ಮಗಳು ಕೋಟಿಗಟ್ಟಲೆ ಗಳಿಸಲು ಸಾಧ್ಯವಾಗಿದ್ದಾದರೂ ಹೇಗೆ? ಈ ಉಪಾಯವನ್ನು ಎಲ್ಲರಿಗೂ ಹೇಳಿಕೊಟ್ಟು, ಮಹಿಳೆಯರನ್ನು ಸ್ವಾವಲಂಬಿಯಾಗುವಂತೆ ಮಾಡಲಿ,' ಎಂದೂ ರವಿಕುಮಾರ್ ಆಗ್ರಹಿಸಿದ್ದಾರೆ. 

ದೆಹಲಿಯ ಡಿಕೆಶಿ ಮನೆಯಲ್ಲಿ ಸಿಕ್ಕ ಕೋಟಿಗಟ್ಟಲೆ ಹಣದ ಬಗ್ಗೆ ಸೂಕ್ತ ಮಾಹಿತಿ ನೀಡದ ಕಾರಣ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಮುಖಂಡನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ. 

ಇಡಿ ವಶದಲ್ಲಿರುವ ಡಿಕೆಶಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!