ಆಧಾರ್ ಸೇವೆ ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲೂ ಲಭ್ಯ..!

By Kannadaprabha News  |  First Published Sep 11, 2019, 9:11 AM IST

ಆಧಾರ್ ಸೇವೆಗಾಗಿ ಜನರು ಪರದಾಡುತ್ತಿದ್ದು, ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸೌಲಭ್ಯವೂ ದೊರೆಯುವುದಿಲ್ಲ. ಆಧಾರ್ ಕೇಂದ್ರಗಳಲ್ಲಿಯೂ ಜನದಟ್ಟಣೆ ಇದ್ದು, ಸಕಾಲಕ್ಕೆ ಸೇವೆ ಎಲ್ಲರಿಗೂ ತಲುಪುತ್ತಿರಲಿಲ್ಲ. ಇದನ್ನು ಸರಿಮಾಡಲು ದಾವಣಗೆರೆ ಜಿಲ್ಲಾಧಿಕಾರಿ ಹೊಸದೊಂದು ದಾರಿ ಕಂಡುಕೊಂಡಿದ್ದಾರೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.


ದಾವಣಗೆರೆ(ಸೆ.11): ಜಿಲ್ಲೆಯಲ್ಲಿ ಈ ಹಿಂದೆ ಇಡಿಸಿಎಸ್‌,ಅಟಲ್‌ಜೀ ಜನಸ್ನೇಹಿ, ಸಿಇಜಿ ಆಧಾರ ಕೇಂದ್ರಗಳಲ್ಲಿ ಮಾತ್ರ ಆಧಾರ ನೋಂದಣಿ, ತಿದ್ದುಪಡಿ, ಇತರೆ ಕಾರ್ಯಗಳು ನಡೆಯುತ್ತಿದ್ದವು. ಆದರೆ ಈಗ ದಾವಣಗೆರೆ, ಚನ್ನಗಿರಿ, ಹರಿಹರ ತಾಲೂಕುಗಳ ಬ್ಯಾಂಕ್‌, ಪೋಸ್ಟ್‌ ಆಫೀಸ್‌ಗಳಲ್ಲಿಯೂ ಆಧಾರ್‌ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದ್ದಾರೆ.

ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿ ಆಧಾರ್ ಸೇವೆ:

Tap to resize

Latest Videos

ದಾವಣಗೆರೆಯ ಮಂಡಿಪೇಟೆಯ ಸೌತ್‌ ಇಂಡಿಯನ್‌ ಬ್ಯಾಂಕ್‌. ಪಿಜೆ ಬಡಾವಣೆಯ ಜಯದೇವ ಸರ್ಕಲ್‌ ಪೋಸ್ಟ್‌ ಆಫೀಸ್‌. ವಿದ್ಯಾನಗರ ಬಿ.ವಿ. ನಗರ ಪೋಸ್ಟ್‌ ಆಫೀಸ್‌. ದೇವರಾಜ ಅರಸ್‌ ಬಡಾವಣೆಯ ಪೂಜಾ ಹೋಟೆಲ್‌ ಹಿಂಭಾಗದ ಪೋಸ್ಟ್‌ ಆಫೀಸ್‌. ಆರ್‌ಎಂಸಿ ಲಿಂಕ್‌ ರೋಡ್‌ನ 4ನೇ ವಾರ್ಡ್‌, 6ನೇ ವಿಭಾಗದ ಬಿ.ಟಿ.ಲೇಔಟ್‌ನ ಕರ್ನಾಟಕ ಬ್ಯಾಂಕ್‌ನಲ್ಲೂ ಆಧಾರ್ ಸೇವೆ ಲಭ್ಯವಾಗಲಿದೆ.

ಕರ್ನಾಟಕದಲ್ಲಿ ಮದ್ಯ ಖರೀದಿಗೆ ಆಧಾರ್‌ ಕಾರ್ಡ್‌ ಕಡ್ಡಾಯ?

ಹದಡಿ ರಸ್ತೆಯ ಸಿಂಡಿಕೇಟ್‌ ಬ್ಯಾಂಕ್‌, ಶಾಮನೂರು ರಸ್ತೆಯ ಬಾಟ್ಲಿ ಬಿಲ್ಡಿಂಗ್‌ ಸಮೀಪದ ಐಡಿಎಫ್‌ಸಿ ಬ್ಯಾಂಕ್‌ ಲಿಮಿಟೆಡ್‌, ದಾವಣಗೆರೆ ಸಿಟಿ ಕೆಇಬಿ ಸರ್ಕಲ್‌ ಬಳಿ ಇರುವ ಪೋಸ್ಟ್‌ ಆಫೀಸ್‌, ಮಂಡಿಪೇಟೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಲಿಮಿಟೆಡ್‌, ಬಾರ್‌ಲೈನ್‌ ರಸ್ತೆ, ಹೊಂಡದ ಸರ್ಕಲ್‌ನ ಪೋಸ್ಟ್‌ ಆಫೀಸ್‌, ಪಿಬಿ ರಸ್ತೆಯ ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ಗಳು. ಗಡಿಯಾರ ಕಂಬದ ಬಳಿಯ ಹೆಡ್‌ ಪೋಸ್ಟ್‌ ಆಫೀಸ್‌, ಪಿಜೆ ಬಡಾವಣೆ, ಜಿಲ್ಲಾಸ್ಪತ್ರೆ ರಸ್ತೆಯ ಐಡಿಬಿಐ ಬ್ಯಾಂಕ್‌ ಲಿಮಿಟೆಡ್‌.

ಚನ್ನಗಿರಿ ತಾಲೂಕು : ಚನ್ನಗಿರಿಯ ಕೆನರಾ ಬ್ಯಾಂಕ್‌, ಸರ್ಕಾರಿ ಆಸ್ಪತ್ರೆ ಹತ್ತಿರದ ಪೋಸ್ಟ್‌ ಆಫೀಸ್‌, ಸಂತೆಬೆನ್ನೂರಿನ ಪೋಸ್ಟ್‌ ಆಫೀಸ್‌.

ಹರಿಹರ ತಾಲೂಕು: ಕೆನರಾ ಬ್ಯಾಂಕ್‌, ಪಿಕೆಜಿಬಿ ಹರಿಹರ. ನಂದಿ ಗುಡಿ ರಸ್ತೆ, ಬಾನುವಳ್ಳಿ ಉಪ ವಿಭಾಗದ ಪೋಸ್ಟ್‌ ಆಫೀಸ್‌, ಹರಿಹರ. ಕೆನರಾ ಬ್ಯಾಂಕ್‌ ನ್ಯೂ 657, ಪಿಕೆಜಿಬಿ, ಕುಂಬಳೂರು. ಪಿಕೆಜಿಬಿ ಕುಂಬಳೂರು. ಪೋಸ್ಟ್‌ ಆಫೀಸ್‌, ಶಿವಮೊಗ್ಗ ರಸ್ತೆ, ಮಲೆಬೆನ್ನೂರು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನ್ಯೂ-654, ಎಸ್‌ಬಿಐ ಮಲೇಬೆನ್ನೂರು. ಹರಿಹರ ಲೇಬರ್‌ ಕಾಲನಿ ಯಂತ್ರಾಪುರದ ಪೋಸ್ಟ್‌ ಆಫೀಸ್‌. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನ್ಯೂ-654, ಪಿಬಿ ರಸ್ತೆ, ಹರಿಹರ. ಪೋಸ್ಟ್‌ ಆಫೀಸ್‌ ಎಂಡಿಜಿ ಹರಿಹರ. ಸಾರ್ವಜನಿಕರು ಆಧಾರ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಈ ಬ್ಯಾಂಕ್‌ಗಳು ಹಾಗೂ ಪೋಸ್ಟ್‌ ಆಫೀಸ್‌ಗಳಲ್ಲಿ ಪಡೆಯಬಹುದಾಗಿದೆ ಎಂದು ಬೀಳಗಿ ತಿಳಿಸಿದ್ದಾರೆ.

ಫೇಸ್‌ಬುಕ್‌ ಪ್ರೊಫೈಲ್‌ಗೆ ಆಧಾರ್‌ ಲಿಂಕ್‌: ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

click me!