ಕಲಬುರಗಿ: ಮಧ್ಯಾಹ್ನ 12 ಆದರೂ ಕಚೇ​ರಿಗೆ ಬಾರದ ಅಧಿಕಾರಿಗಳು..!

By Kannadaprabha News  |  First Published Jun 16, 2023, 1:28 PM IST

ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕಚೇರಿ ಪ್ರಾರಂಭಿಸಿ, ಸಂಜೆ 5 ಗಂಟೆಗೆ ಕಚೇರಿ ಮುಚ್ಚಬೇಕು ಎಂಬುವದು ನಿಯಮವಿದೆ. ಅದರೆ, ಬೆಳಗ್ಗೆ 10 ಗಂಟೆಗೆ ಬರಬೇಕಾದ ಅಧಿಕಾರಿಗಳು, ಮಧ್ಯಾಹ್ನ 12 ಗಂಟೆಯಾದರೂ ಬಾರದೆ, ಇರುವದರಿಂದ ನಗರಸಭೆ ಸಿಬ್ಬಂದಿಯ ಮೇಲೆ ಹಿಡಿತ ಇಲ್ಲದಂತಾಗಿದ್ದು, ಸಿಬ್ಬಂದಿಗಳು ಸಹ ಮನ ಬಂದಂತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.


ಶಹಾಬಾದ(ಜೂ.16):  ಕಳೆದ ಒಂದು ವಾರದಿಂದ ನಗರ ಸಭೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬಾರದೆ, ಇರುವದರಿಂದ ಸಾರ್ವಜನಿಕರು ತಮ್ಮ ಕೆಲಸಕ್ಕೆ ನಗರ ಸಭೆಗೆ ಬಂದು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಹಿಂತಿರುಗಿ ಹೋಗುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕಚೇರಿ ಪ್ರಾರಂಭಿಸಿ, ಸಂಜೆ 5 ಗಂಟೆಗೆ ಕಚೇರಿ ಮುಚ್ಚಬೇಕು ಎಂಬುವದು ನಿಯಮವಿದೆ. ಅದರೆ, ಬೆಳಗ್ಗೆ 10 ಗಂಟೆಗೆ ಬರಬೇಕಾದ ಅಧಿಕಾರಿಗಳು, ಮಧ್ಯಾಹ್ನ 12 ಗಂಟೆಯಾದರೂ ಬಾರದೆ, ಇರುವದರಿಂದ ನಗರಸಭೆ ಸಿಬ್ಬಂದಿಯ ಮೇಲೆ ಹಿಡಿತ ಇಲ್ಲದಂತಾಗಿದ್ದು, ಸಿಬ್ಬಂದಿಗಳು ಸಹ ಮನ ಬಂದಂತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ಅಧಿಕಾರಿಗಳು ಇಲ್ಲದೆ ಇರದೆ ಇರುವದರಿಂದ ಗುರುವಿಲ್ಲದ ಮಠದಂತಾಗಿರುವ ನಗರ ಸಭೆಯಲ್ಲಿ ಸಿಬ್ಬಂದಿ ವರ್ಗದವರು ಯಾವುದೇ ಸಾರ್ವಜನಿಕ ಕೆಲಸಕ್ಕೆ ಸೂಕ್ತ ಸ್ಪಂದಿಸದೆ ಇದ್ದು, ಕೇವಲ ಹರಟೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅಧಿಕಾರಿಗಳು ಮಧ್ಯಾಹ್ನ 12 ಗಂಟೆಯಾದರು ಕಚೇರಿಗೆ ಬಾರದೆ ಇದ್ದುದರಿಂದ ಕಚೇರಿಯಲ್ಲಿರುವ ಸಿಬ್ಬಂದಿ ವರ್ಗದವರನ್ನು, ಡಿ ದರ್ಜೆ ಸಿಬ್ಬಂದಿಯವರನ್ನು ಕೇಳಿದರೆ ಅಧಿಕಾರಿಗಳು ಇನ್ನೇನು ಬರಬಹುದು ಎಂದು ಸಂಜೆಯವರೆಗೂ ಸಿದ್ದ ಉತ್ತರವನ್ನು ನೀಡುತ್ತಿದ್ದಾರೆ. ಅಧಿಕಾರಿಗಳ ಮೊಬೈಲ್‌ ಸಂಖ್ಯೆ ಕೇಳಿದರೆ ನಮಗೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಿದ್ದು, ಸಿಬ್ಬಂದಿಗಳ ಈ ವರ್ತನೆ ಅಧಿಕಾರಿಗಳು ಸಾಮಾನ್ಯ ನೌಕರರ ಮೇಲೆ ಸೂಕ್ತ ಮಾಹಿತಿ ನೀಡದಂತೆ ಒತ್ತಡ ಇರುವದು ಕಂಡು ಬರುತ್ತದೆ. ಈ ಕುರಿತು ಅಧಿಕಾರಿಗಳಿಗೆ ಹೆಚ್ಚಿನ ಒತ್ತಡದಿಂದ ಕೇಳಿದರೆ, ನಮಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಿಟಿಂಗ್‌ ಇತ್ತು ಎಂದು ಸಿದ್ದ ಉತ್ತರ ನೀಡುತ್ತಿದ್ದು, ಜಿಲ್ಲಾಧಿಕಾರಿಗಳು ನಗರ ಸಭೆ ಅಧಿಕಾರಿಗಳು, ಸಿಬ್ಬಂದಿಗಳ ಸಭೆಯನ್ನು ಪ್ರತಿನಿತ್ಯ ಮಾಡುತ್ತಿದ್ದರೆ, ನಗರ ಸಭೆ ಕಚೇರಯಲ್ಲಿ ಕೆಲಸ ಮಾಡುವವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಈ ಕುರಿತು ನಗರ ಸಭೆ ಸಿಬ್ಬಂದಿ, ಅಧಿಕಾರಿಗಳು ಹೇಳುವಂತೆ, ಪ್ರತಿನಿತ್ಯ ಸಭೆ ನಡೆಸುವ ಜಿಲ್ಲಾಧಿಕಾರಿಗಳೇ ಉತ್ತರಿಸಬೇಕಾಗಿದೆ.

Tap to resize

Latest Videos

undefined

ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ನಗರಸಭೆ ಅಧ್ಯಕ್ಷರ ಅವಧಿ ಸಂದರ್ಭದಲ್ಲಿ ಒಂದೆರಡು ಗಂಟೆ ತಡವಾದರು ಕೆಲಸಕ್ಕೆ ಬರುತ್ತಿದ್ದು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಈಗ ನಗರ ಸಭೆ ಅಧ್ಯಕ್ಷರ ಅವಧಿ ಪೂರ್ಣಗೊಂಡು, ಆಡಳಿತ ವ್ಯವಸ್ಥೆ ಜಾರಿಗೆ ಬಂದ ಮೇಲೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಎನ್ನುತ್ತಾರೆ ನಗರ ಸಭೆ ಸದಸ್ಯರಾದ ನಾಗೇಂದ್ರ ಕರಣಿಕೆ, ಮುಖಂಡ ಶರಣು ಪಗಲಾಪುರ ಅವರು.

ಈ ಕುರಿತು ಮಾನ್ಯ ಶಾಸಕರು, ಹಾಗೂ ಜಿಲ್ಲಾಧಿಕಾರಿಗಳು ನಗರ ಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ಎಚ್ಚರಿಕೆ ನೀಡಬೇಕು, ಇಲ್ಲವಾದಲ್ಲಿ ಇಡೀ ನಗರ ಸಭೆ ಆಡಳಿತ ವ್ಯವಸ್ಥೆ ಮೇಲೆ ಆಡಳಿತಾತ್ಮಕ ಸರ್ಜರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರಸಭೆ ಅಧ್ಯಕ್ಷರ ಅವಧಿ ಮುಕ್ತಾಗೊಂಡು ಆಡಳಿತ ಅವಧಿ ಪ್ರಾರಂಭವಾದ ನಂತರ ನಗರ ಸಭೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಬಿಜೆಪಿ ಯುವ ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ ತಿಳಿಸಿದ್ದಾರೆ. 

click me!