ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣವೂ ಈ ಹಿಂದೆ ಖಾಲಿ ಖಾಲಿಯಾಗಿ, ವಿರಳ ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಬಸ್‌ಗಳಲ್ಲಿ ಈಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವಂತಾಗಿದೆ. ಆದರೆ, ದೇಶದ ಆರ್ಥಿಕ ಶಕ್ತಿ ತುಂಬುವ ರೈಲುಗಳು ಇಂದು ಖಾಲಿ ಖಾಲಿ ಸಂಚರಿಸುತ್ತಿವೆ.
ಖಾಜಾ ಮೈನುದ್ದೀನ್ ಪಟೇಲ್
ವಿಜಯಪುರ(ಜೂ.16): ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಶಕ್ತಿ ಯೋಜನೆಗೆ ವಿಜಯಪುರ ಜಿಲ್ಲೆಯಲ್ಲಿ ನಾರಿಯರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ರೈಲು ಮೂಲಕ ಪ್ರಯಾಣ ಬೆಳೆಸುತ್ತಿದ್ದ ಮಹಿಳೆಯರು ಸಹ ಈಗ ರೈಲ್ವೆ ಸಂಚಾರಕ್ಕೆ ಬ್ರೇಕ್ ಹಾಕಿ ಸ್ವಲ್ಪ ತಡವಾದರೂ ಚಿಂತೆಯಿಲ್ಲ ಎಂದು ಬಸ್ ಮೂಲಕ ಪ್ರಯಾಣಕ್ಕೆ ಅಣಿಯಾಗುತ್ತಿದ್ದಾರೆ.
undefined
ನಗರದ ಕೇಂದ್ರ ಬಸ್ ನಿಲ್ದಾಣವೂ ಈ ಹಿಂದೆ ಖಾಲಿ ಖಾಲಿಯಾಗಿ, ವಿರಳ ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಬಸ್‌ಗಳಲ್ಲಿ ಈಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವಂತಾಗಿದೆ. ಆದರೆ, ದೇಶದ ಆರ್ಥಿಕ ಶಕ್ತಿ ತುಂಬುವ ರೈಲುಗಳು ಇಂದು ಖಾಲಿ ಖಾಲಿ ಸಂಚರಿಸುತ್ತಿವೆ. ಜನ ಜಂಗುಳಿಯಿಂದ ಕೂಡಿರುತ್ತಿದ್ದ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಗ್ರಾಮಗಳಿಗೆ ಸಂಚರಿಸುವ ಮಹಿಳೆಯರ ಸಂಖ್ಯೆ ಗಣನೀಯಗಾಗಿ ತಗ್ಗಿದ್ದು ರೈಲ್ವೇ ನಿಲ್ದಾಣ ಖಾಲಿ ಖಾಲಿಯಾಗಿ ಗೋಚರಿಸುತ್ತಿದೆ.
ಶಕ್ತಿ ಯೋಜನೆ ಘೋಷಣೆ ಹಿನ್ನೆಲೆಯಲ್ಲಿ ಕಳೆದ 5 ದಿನಗಳಿಂದ ಮಹಿಳೆಯರಲ್ಲಿ ಸಂಭ್ರಮ ಮನೆ ಮಾಡಿದೆ. ಒಂದು ಬಾರಿ ಊಚಿತ ಪ್ರಯಣ ಮಾಡಿದರೆ ಆಯಿತು ಎಂದು ಸಂಭ್ರಮದಿಂದಲೇ ಬಸ್ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಮಹಿಳಾ ಪ್ರಯಾಣಿಕರು ತಂಡೋಪ ತಂಡವಾಗಿ ಸೇರಿ ತಾವು ಸಂಚಿರಿಸುವ ಬಸ್‌ಗಾಗಿ ಕಾಯುತ್ತ ಕುಳಿತುಕೊಂಡಿರುವ ದೃಶ್ಯ ಕಂಡು ಬಂದಿದೆ.
ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ತೆರಳುವ ಮಹಿಳೆಯರ ಸಂಖ್ಯೆ ಹೆಚ್ಚಿದ್ದರಿಂದ ಬೆಳಗ್ಗೆಯಿಂದಲೇ ಬಹುತೇಕ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಕಂಡು ಬಂದಿದೆ. ಇನ್ನೂ ಕೆಲವು ಬಸ್‌ಗಳಲ್ಲಿ ಪುರುಷರೇ ಇಲ್ಲದಿರುವುದು ಕಂಡು ಬಂದರೆ ಕೆಲವು ಬಸ್‌ಗಳಲ್ಲಿ ಪುರುಷ ಪ್ರಯಾಣಿಕರು ಬೆರಳೆಣಿಕೆಯಂತೆ ಕಂಡು ಬರುತ್ತಿದ್ದಾರೆ.
ಗ್ರಾಮೀಣ ಭಾಗದಂತೆ ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿದ್ದಾರೆ. ಇನ್ನು ಆಟೋ ಚಾಲಕರು ಹಾಗೂ ಮಾಲೀಕರು ಪ್ರಯಾಣಿಕರು ಇಲ್ಲದೆ ಕಂಗಾಲಾಗಿದ್ದಾರೆ.
ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ರೈಲುಗಳು ಪ್ರಯಾಣಿಕರಿಲ್ಲದೆ ಖಾಲಿಯಾಗಿ ಬರುತ್ತಿದ್ದು, ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ನಗರ ಕೇಂದ್ರ ರೈಲು ನಿಲ್ದಾಣದ ಪ್ಲಾಟ್ ಫಾಮ್‌ರ್‍ಗಳು ನಿರ್ಜನವಾಗಿವೆ. ಅಲ್ಲದೇ, ರೈಲುಗಳು ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ. ಗದಗ- ಕೊಲ್ಲಾಪುರ- ಮುಂಬೈ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಕರು ಇಲ್ಲಿದೆ ಸೀಟುಗಳು ಖಾಲಿಯಾಗಿರುವುದು ಕಂಡು ಬರುವಂತಾಯಿತು. ಅಲ್ಲದೇ ಗೋಳಗುಮ್ಮಟ ಎಕ್ಸಪ್ರೆಸ್ ಸಹ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತಿತ್ತು.
Shakti scheme: 2ನೇ ದಿನ 41 ಲಕ್ಷ ಸ್ತ್ರೀಯರ ಉಚಿತ ಬಸ್ ಯಾನ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿ. ಗರ್ಭಿಣಿಯರು, ಪುಟ್ಟಮಕ್ಕಳನ್ನು ಹೊಂದಿರುವ ಸ್ತ್ರೀಯರು, ವಯಸ್ಸಾದವರು, ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು ಬಸ್ ಸಂಚಾರ ಕಷ್ಟವಾಗಿದ್ದು, ರೈಲಲ್ಲೇ ಪ್ರಯಣ ನಡೆಸಿದ್ದಾರೆ. ಕೆಲವರು ಹಣ ಕೊಟ್ಟರೂ ತೊಂದರೆ ಇಲ್ಲದೇ ಆರಾಮವಾಗಿ ಪ್ರಯಾಣ ಬೆಳೆಸಿದ್ದಾರೆ. ಬಸ್‌ನಲ್ಲಿ ಸಂಚರಿಸುವುದು ಸಾಧ್ಯವಿಲ್ಲ. ರೈಲಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು ಇಲ್ಲ. ಶೌಚಗೃಹ ಸೌಲಭ್ಯವೂ ಇದೆ. ಹಾಗಾಗಿ, ಕೆಲವರು ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಬಸ್‌ಗಳು ಮಹಿಳಾ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದರಿಂದ ಪುರುಷರು ರೈಲು ಪ್ರಯಾಣಕ್ಕೆ ಮುಂದಾಗಿದ್ದು, ರೈಲ್ವೇ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರೇ ಹೆಚ್ಚಾಗಿದ್ದಾರೆ.