* ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದಲ್ಲಿ ನಡೆದ ಘಟನೆ
* ಜು.18ರಂದು ಕೋವಿಡ್‌ನಿಂದ ಮೃತಪಟ್ಟಿದ್ದ ದೇವಕ್ಕಿ
* ಆ. 1ರಂದು ದೇವಕ್ಕಿ ಐಸಿಯುನಲ್ಲಿದ್ದಾರೆಂದು ಎಂದು ಮಗನಿಗೆ ಕರೆ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ
ಮಡಿಕೇರಿ(ಆ.11): ಕೋವಿಡ್ ಆಸ್ಪತ್ರೆಯಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ಆಗುತ್ತಿದೆ. ತಾಯಿ ಮೃತಪಟ್ಟು 12 ದಿನದ ಬಳಿಕ ಆಕೆ ಬದುಕಿದ್ದಾರೆಂದು ಮಗನಿಗೆ ಆಸ್ಪತ್ರೆಯಿಂದ ಕರೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದ ದೇವಕ್ಕಿ (68) ಜು.18ರಂದು ಕೋವಿಡ್‌ನಿಂದ ಮೃತಪಟ್ಟಿದ್ದರು. 19 ರಂದು ಸ್ವಗ್ರಾಮದಲ್ಲಿ ಅಂತ್ಯ ಅಂಸ್ಕಾರ ನಡೆಸಲಾಗಿದೆ.
ಸರ್ಕಾರಿ ಶಾಲೆ ದಾಖಲಾತಿ ಶೇ.200ರಷ್ಟು ಹೆಚ್ಚಳ..!
ಆದರೆ ಆ. 1ರಂದು ದೇವಕ್ಕಿ ಐಸಿಯುನಲ್ಲಿದ್ದಾರೆಂದು ಮಗ ಪೊನ್ನಪ್ಪನಿಗೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ. ಮತ್ತೆ ಆ.8ರಂದು ಮತ್ತೊಮ್ಮೆ ತಾಯಿ ಐಸಿಯುನಲ್ಲಿದ್ದಾರೆ ಎಂದು ಕರೆ ಮಾಡಲಾಗಿದೆ. ನೊಂದಿರುವ ಕುಟುಂಬಕ್ಕೆ ಆಸ್ಪತ್ರೆ ಸಿಬ್ಬಂದಿ ಮತ್ತೆ ಮತ್ತೆ ನೋವು ನೀಡಿದ್ದು, ತಪ್ಪಿ ಕರೆ ಮಾಡಿದವರನ್ನು ಮಗ ಪೊನ್ನಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.