ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್‌ : BJP ಶಾಸಕ ರಾಮದಾಸ್

Kannadaprabha News   | Asianet News
Published : Aug 11, 2021, 07:09 AM IST
ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್‌ : BJP ಶಾಸಕ ರಾಮದಾಸ್

ಸಾರಾಂಶ

ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ನನಗೂ ಸಚಿವನಾಗುವ ಆಸೆ ಇತ್ತು ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್‌ ಮೈಸೂರಿನ ಕೆ.ಆರ್‌.ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎ.ರಾಮದಾಸ್‌ 

ಮೈಸೂರು (ಆ.11): ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ನನಗೂ ಸಚಿವನಾಗುವ ಆಸೆ ಇತ್ತು, ಅದು ಮಿಸ್‌ ಆಯ್ತು. ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್‌. ಅವರದ್ದು ನನ್ನದು ಪ್ರೇಮ, ಅವರ ಹೆಸರು ನನಗೆ ಮಾತ್ರ ಗೊತ್ತಿರಬೇಕು. ಅವರಿಗೆ ಈಗಾಗಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ ಎಂದು ಮೈಸೂರಿನ ಕೆ.ಆರ್‌.ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ತಿಳಿಸಿದರು. 

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆಯೂ ಇಲ್ಲ ಎಂದರು.

ಸಂಪುಟದಲ್ಲಿ ಸಿಗದ ಸ್ಥಾನ: ಸಿಎಂ ಸ್ವಾಗತಕ್ಕೂ ಬಾರದೇ ಶಾಸಕ ರಾಮದಾಸ್ ಮುನಿಸು

 ಮಂತ್ರಿಯಾಗಿದ್ದರೆ ರಾಜ್ಯಾದ್ಯಂತ ಓಡಾಡಬೇಕಿತ್ತು. ಈಗ ನನ್ನ ಕ್ಷೇತ್ರವೇ ಎಲ್ಲಾ ಆಗಿದೆ. ಅದಕ್ಕೆ ಈಗ ನಾನು ನನ್ನ ಕ್ಷೇತ್ರವನ್ನು ದೇಶಕ್ಕೆ ಮಾದರಿ ಕ್ಷೇತ್ರವನ್ನಾಗಿಸುವತ್ತ ಮುಂದಾಗಿದ್ದೇನೆ ಎಂದರು.

ಸಿಎಂ ಬೊಮ್ಮಾಯಿ ಮೈಸೂರಿಗೆ ಭೇಟಿ ನೀಡಿದ್ದ ವೇಳೆಯೂ ಕಾರ್ಯಕ್ರಮಗಳಿಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಹೇಳಿಕೆ ಸಂಚಲನ ಉಂಟು ಮಾಡಿದೆ. 

PREV
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ