ಶಾಸಕ ರೇಣುಕಾಚಾರ್ಯಗೆ 6ನೇ ಬಾರಿ ಕೊರೋನಾ ನೆಗೆಟಿವ್‌

By Kannadaprabha News  |  First Published Sep 9, 2020, 2:49 PM IST

ನಿರಂತರ ಜನಸೇವೆ, ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ವಾಯು ವಿಹಾರದಂತಹ ಜೀವನಶೈಲಿ, ಜನರು, ಹಿರಿಯರ ಆಶೀರ್ವಾದ ತಮ್ಮನ್ನು ಕೋವಿಡ್‌ ಮಹಾಮಾರಿಯಿಂದ ಪಾರು ಮಾಡುತ್ತಿದೆ ಎಂದು 6ನೇ ಬಾರಿ ತಮ್ಮ ಕೊರೋನ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.


 ದಾವಣಗೆರೆ (ಸೆ.09):  ಆರನೇ ಸಲ ಮಾಡಿಸಿದ ಕೋವಿಡ್‌-19 ಟೆಸ್ಟ್‌ನಲ್ಲೂ ತಮಗೆ ನೆಗೆಟಿವ್‌ ಬಂದಿದ್ದು, ಹೆತ್ತವರು, ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಜನತೆ, ಗುರು-ಹಿರಿಯರ ಆಶೀರ್ವಾದದಿಂದ ಮತ್ತಷ್ಟುಜನಸೇವೆ ಮಾಡಲು ನನಗೆ ಸ್ಫೂರ್ತಿ ನೀಡಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ 6ನೇ ಸಲ ಕೋವಿಡ್‌ ಟೆಸ್ಟ್‌ ಮಾಡಿಸಿದಾಗಲೂ ತಮಗೆ ನೆಗೆಟಿವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂತರ ಜನಸೇವೆ, ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ವಾಯು ವಿಹಾರದಂತಹ ಜೀವನಶೈಲಿ, ಜನರು, ಹಿರಿಯರ ಆಶೀರ್ವಾದ ತಮ್ಮನ್ನು ಕೋವಿಡ್‌ ಮಹಾಮಾರಿಯಿಂದ ಪಾರು ಮಾಡುತ್ತಿದೆ ಎಂದರು.

Tap to resize

Latest Videos

ಕೊರೋನಾ ಕೊನೆಯಲ್ಲ, ಜಗತ್ತಿಗೆ ವಕ್ಕರಿಸಲಿದೆ ಇನ್ನಷ್ಟು ಮಹಾಮಾರಿ: WHO ಎಚ್ಚರಿಕೆ ..

ಅವಳಿ ತಾಲೂಕಿನಲ್ಲಿ ಮಾ.27 ರಿಂದಲೇ ನಾನೂ ಒಬ್ಬ ಕೊರೋನಾ ವಾರಿಯರ್‌ ಆಗಿ ಪ್ರತಿ ಬೂತ್‌ಗಳ ಪ್ರತಿ ಮನೆ ಮನೆಗೂ ತೆರಳಿ, ವೈರಸ್‌ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇನೆ. ಲಾಕ್‌ಡೌನ್‌ ಕಾಲದಿಂದಲೂ ಆರೋಗ್ಯ, ಪೊಲೀಸ್‌ ಅಧಿಕಾರಿ, ಸಿಬ್ಬಂದಿ, ಪೌರ ಕಾರ್ಮಿಕರು, ಹೋಂ ಗಾರ್ಡ್ಸ್, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಅಸಹಾಯಕ ಬಡ, ಕೂಲಿ ಕಾರ್ಮಿಕರು, ಅಲೆಮಾರಿಗಳಿಗೆ ನಿತ್ಯ ನಾಲ್ಕೈದು ಸಾವಿರ ಜನರಿಗೆ ವೈಯಕ್ತಿಕವಾಗಿ ಊಟದ ವ್ಯವಸ್ಥೆ ಮಾಡುತ್ತ ಬಂದಿದ್ದೇನೆ ಎಂದು ಹೇಳಿದರು.

ಹರಪನಹಳ್ಳಿ: ಕೋವಿಡ್‌ ಸಂಕ​ಷ್ಟ​ದ​ಲ್ಲಿ ವೈದ್ಯರ ಕೊರ​ತೆ, ಆತಂಕ​ದಲ್ಲಿ ಜನತೆ .

ಕೊರೋನಾ ವಾರಿಯ​ರ್‍ಸ್ ಆದ ಅಧಿಕಾರಿಗಳು, ಅಶಾ- ಅಂಗನವಾಡಿ, ಪೊಲೀಸ್‌, ಪೌರ ಕಾರ್ಮಿಕರು, ಹೋಂ ಗಾರ್ಡ್ಸ್, ಜನರ ಆರೋಗ್ಯವೃದ್ಧಿಗೆ ಹೋಮ ಮಾಡಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದೇವೆ. ಅವಳಿ ತಾಲೂಕಿನಾದ್ಯಂತ 3 ಲಕ್ಷಕ್ಕೂ ಕ್ಕೂ ಅಧಿಕ ಮಾಸ್ಕ್‌ ನೀಡಿದ್ದೇವೆ. ಅಸಹಾಯಕ ಜನರಿಗೆ 2-3 ತಿಂಗಳಿಗೆ ಆಗುವಷ್ಟುಉಚಿತ ಔಷಧ ನೀಡಿದ್ದೇವೆ. ನೆರವು ಕೋರಿ ಬಂದ ಯಾರನ್ನೂ ಬರಿಗೈಯ್ಯಲ್ಲಿ ವಾಪಾಸ್ಸು ಕಳಸದೇ, ವೈಯಕ್ತಿಕವಾಗಿ ನೆರವು ನೀಡಿದ್ದೇನೆ ಎಂದು ತಿಳಿಸಿದರು.

ಕ್ಷೇತ್ರದ ಪ್ರತಿ ಗ್ರಾ.ಪಂ.ಗಳಿಗೆ ತೆರಳಿ, ಆಯಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಬಡ ಕೂಲಿ ಕಾರ್ಮಿಕರಿಗೆ ವೈಯಕ್ತಿಕವಾಗಿ ಫುಡ್‌ ಕಿಟ್‌ ಹಾಗೂ ಮಾಸ್ಕ್‌ ನೀಡಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೀಲ್‌ ಡೌನ್‌ ಮಾಡಲಾದ ಪ್ರತಿ ಪ್ರದೇಶಕ್ಕೂ ತೆರಳಿ, ಆಹಾರ ಕಿಟ್‌, ಮಾಸ್ಕ್‌ಗಳನ್ನು ಕೊಟ್ಟಿದ್ದೇನೆ. ಒಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಎಷ್ಟೇ ಜಾಗೃತಿ, ಅರಿವು ಮೂಡಿಸಿದರೂ ಜನರಲ್ಲಿ ಸ್ವಯಂಪ್ರಜ್ಞೆ, ಅರಿವು ಮೂಡಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಮಂಗಳವಾರ ಕೂಡ ಕೊರೋನಾ ಅಬ್ಬರ: ಗುಣಮುಖ ಸಂಖ್ಯೆಯಲ್ಲೂ ಹೆಚ್ಚಳ ..

ಕೊರೋನಾ ಬಗ್ಗೆ ಇಡೀ ಕ್ಷೇತ್ರದಲ್ಲಿ ಜನಜಾಗೃತಿ ಮೂಡಿಸಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ದಿನದಿನಕ್ಕೂ ಸಾವಿನ ಸಂಖ್ಯೆ, ಪಾಸಿಟಿವ್‌ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬುದು ಆತಂಕದ ಸಂಗತಿ. ವೈರಸ್‌ಗೆ ಲಸಿಕೆ ಲಭ್ಯ ಆಗುವವರೆಗಾದರೂ ಜನರು ಸರ್ಕಾರದ ನಿಯಮ, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದರು.

click me!