ಕೊರೋನಾ ಆತಂಕ: KSRP ಪೇದೆಗೆ ಜ್ವರ, ಇಡೀ ತುಕಡಿ ಕ್ವಾರಂಟೈನ್‌

By Kannadaprabha News  |  First Published Apr 15, 2020, 7:59 AM IST
ಕೆಎಸ್‌ಆರ್‌ಪಿ ಪೇದೆಯೊಬ್ಬನಿಗೆ ಕಾಣಿಸಿಕೊಂಡ ಕೆಮ್ಮು, ನೆಗಡಿ, ಜ್ವರ| ತುಕಡಿಯಲ್ಲಿದ್ದ ಇನ್ನುಳಿದ 24 ಮಂದಿ ಕ್ವಾರಂಟೈನ್‌ಗೆ| ಕೆಎಸ್‌ಆರ್‌ಪಿ ತುಕಡಿಯವರಿಗೆ ವಸತಿ ವ್ಯವಸ್ಥೆ ಮಾಡಿರುವುದಕ್ಕೆ ಸಮೀಪದ ಪೊಲೀಸ್‌ ಕ್ವಾಟ್ರರ್ಸ್‌ ನಿವಾಸಿಗಳ ಆಕ್ಷೇಪ|

ಹಾವೇರಿ(ಏ.15): ಕೆಎಸ್‌ಆರ್‌ಪಿ ಪೇದೆಯೊಬ್ಬನಿಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಕ್ತ ಮತ್ತು ಗಂಟಲು ದ್ರವದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿಯಲ್ಲಿದ್ದ ಇನ್ನುಳಿದ 24 ಮಂದಿಯನ್ನು ಕ್ವಾರಂಟೈನ್‌ ಮಾಡಿದ ಘಟನೆ ನಡೆದಿದೆ. 

ಈ ಮೂಲಕ ಇಡೀ ತುಕಡಿಯನ್ನು ಕ್ವಾರಂಟೈನ್‌ ಮಾಡಿದಂತಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಳ್ಳಾರಿಯಿಂದ ಎರಡು ಕೆಎಸ್‌ಆರ್‌ಪಿ ತುಕಡಿಯ 25 ಮಂದಿ ಬಂದೋಸ್ತ್‌ಗಾಗಿ ಆಗಮಿಸಿದ್ದರು. ಆ ಪೈಕಿ ಒಬ್ಬರಿಗೆ ಸೋಮವಾರ ರಾತ್ರಿ ಕೆಮ್ಮು-ಜ್ವರ ಕಾಣಿಸಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಗೆ ಕಳಿಸಿ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. ತುಕಡಿಯಲ್ಲಿದ್ದ ಇನ್ನುಳಿದ 24 ಜನರ ಆರೋಗ್ಯ ತಪಾಸಣೆ ಮಾಡಿ ಅವರನ್ನು ಕೆರಿಮತ್ತಿಹಳ್ಳಿಯಲ್ಲಿರುವ ಹಳೆ ಎಸ್ಪಿ ಕಚೇರಿಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಪೊಲೀಸ್‌ ಕುಟುಂಬದ ಆಕ್ಷೇಪ: 

ಹಳೆ ಎಸ್ಪಿ ಕಚೇರಿಯಲ್ಲಿ ಕೆಎಸ್‌ಆರ್‌ಪಿ ತುಕಡಿಯವರಿಗೆ ವಸತಿ ವ್ಯವಸ್ಥೆ ಮಾಡಿರುವುದಕ್ಕೆ ಸಮೀಪದ ಪೊಲೀಸ್‌ ಕ್ವಾಟ್ರರ್ಸ್‌ ನಿವಾಸಿಗಳು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಕ್ಷಣ ಪೊಲೀಸ್‌ ಅಧಿಕಾರಿಗಳು ತೆರಳಿ ಅವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಕ್ವಾರಂಟೈನ್‌ ಆಗಿರುವವರಿಗೆ ಸೋಂಕು ತಗುಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಇಲ್ಲಿ ಇರಿಸಲಾಗಿದೆ ಎಂದು ತಿಳಿ ಹೇಳಿದ್ದಾರೆ.
 
click me!