ಲಾಕ್‌ಡೌನ್‌: ರೋಗಿಗಳ ಮೊಗದಲ್ಲಿ ಮಂದಹಾಸ, ಮನೆಬಾಗಿಲಿಗೆ ಉಚಿತ ಮಾತ್ರೆ ವಿತರಣೆ

By Kannadaprabha NewsFirst Published Apr 15, 2020, 7:45 AM IST
Highlights
ಬಿಪಿ, ಶುಗರ್‌, ಅಸ್ತಮಾ ಇರುವ ವಯೋವೃದ್ಧರಿಗೆ ಬಿಜೆಪಿ ಯುವ ಮೊರ್ಚಾ ವತಿಯಿಂದ ರೋಗಿಗಳ ಮನೆಬಾಗಿಲಿಗೆ ತೆರಳಿ ಮಾತ್ರೆ ವಿತರಣೆ| ಉಚಿತ ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪನ್ಯಾಸಕ ಮಹೇಶ ಪಟ್ಟೇದ| ವಯೋವೃದ್ಧರು ಸೇರಿದಂತೆ ರೋಗಿಗಳು ಮಾತ್ರೆಗಳಿಲ್ಲದೇ ಸಮಸ್ಯೆ ಪಡುವಂತಹ ಸ್ಥಿತಿ ನಿರ್ಮಾಣ| ಖುದ್ದು ಮನೆ ಬಾಗಿಲಿಗೆ ಹೋಗಿ ಔಷಧಿ ಮಾತ್ರೆಗಳ ವಿತರಣೆ ಕಾರ್ಯ ಅತ್ಯಂತ ಮಹತ್ವದ್ದು|
ಯಲಬುರ್ಗಾ(ಏ.15): ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬಿಪಿ, ಶುಗರ್‌, ಅಸ್ತಮಾ ಇರುವ ವಯೋವೃದ್ಧರಿಗೆ ಬಿಜೆಪಿ ಯುವ ಮೊರ್ಚಾ ವತಿಯಿಂದ ರೋಗಿಗಳ ಮನೆಬಾಗಿಲಿಗೆ ತೆರಳಿ ಮಾತ್ರೆ ವಿತರಣೆ ಮಾಡುವ ಕಾರ್ಯ ನಿಜಕ್ಕೊ ಶ್ಲಾಘನೀಯ ಎಂದು ಉಪನ್ಯಾಸಕ ಮಹೇಶ ಪಟ್ಟೇದ ಹೇಳಿದ್ದಾರೆ.

ತಾಲೂಕಿನ ಮಾರನಾಳ ತಾಂಡದಲ್ಲಿ ಮಂಗಳವಾರ ಬಿಜೆಪಿ ಯುವ ಮೊರ್ಚಾ ವತಿಯಿಂದ ಆಯೋಜಿಸಿದ್ದ ದಮ್ಮು, ಕೆಮ್ಮು, ಬಿಪಿ, ಅಸ್ತಮಾ, ಶುಗರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಯೋವೃದ್ಧರು ಸೇರಿದಂತೆ ರೋಗಿಗಳು ಮಾತ್ರೆಗಳಿಲ್ಲದೇ ಸಮಸ್ಯೆ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಖುದ್ದು ಮನೆ ಬಾಗಿಲಿಗೆ ಹೋಗಿ ಔಷಧಿ ಮಾತ್ರೆಗಳ ವಿತರಣೆ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು.

ಲಾಕ್‌ಡೌನ್‌: ಬೆವರು ಸುರಿಸಿ ಬೆಳೆದ ಬೆಳೆ ಕದ್ದು ಮಾರುವ ಸ್ಥಿತಿ, ನಿಲ್ಲದ ಅನ್ನದಾತನ ಸಂಕಷ್ಟ..!

ಪಟ್ಟಣ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯ ಜೀವಿಗಳಿಗೆ ಅಗತ್ಯವಾಗಿರುವ ಔಷಧಿಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಅನೇಕ ಜನರಿಗೆ ಜೀವ ಸಂಜೀವಿನಿಯಾಗಿದೆ. ಈಗಾಗಲೇ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಾತ್ರೆಗಳ ವಿತರಣೆ ಕಾರ್ಯ ಭರದಿಂದ ನಡೆದಿದೆ. ಗ್ರಾಮದ ಯುವ ಜನತೆ ಅಂತಹವರನ್ನು ಗುರುತಿಸಿ ಮನೆಗಳಿಗೆ ಮಾತ್ರೆ ಸರಬರಾಜು ಮಾಡುವ ಕಾರ್ಯವನ್ನು ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದು ಹೇಳಿದರು.

ಯಲಬುರ್ಗಾ ಪಟ್ಟಣದ ಮೀನಾಕ್ಷಿ ನಗರ, ಮಾರನಾಳ ತಾಂಡಾ, ಬೂನಕೊಪ್ಪ, ದಮ್ಮೂರು, ಗ್ರಾಮಗಳ ಬಡ ವೃದ್ಧರಿಗೆ ಬಿಪಿ, ಶುಗರ, ದಮ್ಮು ಮತ್ತು ಕೆಮ್ಮಿನ ಮಾತ್ರೆಗಳನ್ನು ಮನೆಬಾಗಿಲಿಗೆ ಹೋಗಿ ಉಚಿತವಾಗಿ ವಿತರಿಸಲಾಯಿತು. ವೃಂದಾ ಸಂಸ್ಥೆಯ ವೆಂಕಟೇಶ ಪಾಪಳೆ, ಜೈರಾಮ ಪೂಜಾರ ಹಾಗೂ ಬಿಜೆಪಿ ಪದಾಧಿಕಾರಿಗಳು ಇದ್ದರು.
 
click me!