ಲಾಕ್‌ಡೌನ್‌: ಚೆಕ್‌ಪೋಸ್ಟ್‌ ಪರಿಶೀಲಿಸಿದ ಗೃಹ ಸಚಿವ ಬೊಮ್ಮಾಯಿ

By Kannadaprabha NewsFirst Published Apr 10, 2020, 7:30 AM IST
Highlights

ಬೆಂಗಳೂರು ಪೂರ್ವ, ಉತ್ತರ ಮತ್ತು ಪಶ್ಚಿಮ ವಿಭಾಗದ ಠಾಣಾ ವ್ಯಾಪ್ತಿಗಳಲ್ಲಿನ ಚೆಕ್‌ಪೋಸ್ಟ್‌ ಪರಿಶೀಲನೆ ನಡೆಸಿದ ಸಚಿವ ಬೊಮ್ಮಾಯಿ|ಟ್ಯಾನರಿ ರಸ್ತೆ ಹಾಗೂ ಪಶ್ಚಿಮ ವಿಭಾಗದಲ್ಲಿ ನಗರ ಪೊಲೀಸ್‌ ಆಯುಕ್ತರೊಂದಿಗೆ ಪಾಸ್‌ ಇಲ್ಲದ ವಾಹನಗಳ ಪರಿಶೀಲನೆ| 

ಬೆಂಗಳೂರು(ಏ.10): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಪೂರ್ವ, ಉತ್ತರ ಮತ್ತು ಪಶ್ಚಿಮ ವಿಭಾಗದ ಠಾಣಾ ವ್ಯಾಪ್ತಿಗಳಲ್ಲಿನ ಚೆಕ್‌ಪೋಸ್ಟ್‌ ಪರಿಶೀಲನೆ ನಡೆಸಿದರು.

ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಜತೆ ಭೇಟಿ ನೀಡಿದ ಸಚಿವರು, ಶಿವಾಜಿನಗರ, ಹೆಬ್ಬಾಳ, ಪೀಣ್ಯ, ಮೆಜೆಸ್ಟಿಕ್‌ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿದರು.

ಲಾಕ್ ಡೌನ್ ಇದ್ದರೆ ಏನಾತು...ಮದುವೆಯಾಗಿ ಮಾಸ್ಕ್ ಧರಿಸಿ ಗಿರಿನಗರ ಠಾಣೆಗೆ ಬಂದ ನವಜೋಡಿ

ಈ ವೇಳೆ ರಸ್ತೆಯಲ್ಲಿ ಹಾಕಲಾಗಿದ್ದ ಚೆಕ್‌ಪೋಸ್ಟ್‌ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ದರಲ್ಲದೆ, ಪೊಲೀಸ್‌ ಸಿಬ್ಬಂದಿಗೆ ಕೆಲವೊಂದು ಸೂಚನೆ ನೀಡಿದರು. ಇದೇ ವೇಳೆ ಟ್ಯಾನರಿ ರಸ್ತೆ ಹಾಗೂ ಪಶ್ಚಿಮ ವಿಭಾಗದಲ್ಲಿ ನಗರ ಪೊಲೀಸ್‌ ಆಯುಕ್ತರೊಂದಿಗೆ ಪಾಸ್‌ ಇಲ್ಲದ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು. ಕೆಲವರು ಪಾಸ್‌ ಇಲ್ಲದೇ ರಸ್ತೆಗಿಳಿದಿದ್ದು, ಕಂಡು ಬಂತು. ಅಂತಹ ಕೆಲ ವಾಹನಗಳನ್ನು ಜಪ್ತಿ ಮಾಡಲಾಯಿತು ಎಂದು ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದರು.
 

click me!