ಪೌರತ್ವ ಕಾಯ್ದೆ ಬೆಂಬಲಿಸಿ ಸಹಿ ಸಂಗ್ರಹಕ್ಕೆ ಗೃಹ ಸಚಿವರ ಸಾಥ್

By Suvarna News  |  First Published Jan 7, 2020, 11:08 AM IST

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿಯಿಂದ ಪೋಸ್ಟ್ ‌ಕಾರ್ಡ್ ಮತ್ತು ಸಹಿ ಸಂಗ್ರಹಕ್ಕೆ ಗೃಹ ಸಚಿವ ಬಸವರಾಜ್ ‌ಬೊಮ್ಮಾಯಿ ಸಾಥ್ ನೀಡಿದ್ದಾರೆ. ಮಂಗಳೂರಿಗೆ ಆಗಮಿಸಿದ ಅವರು, ಪೋಸ್ಟ್ ‌ಕಾರ್ಡ್‌ಗೆ ಸಹಿ ಹಾಕಿದ್ದಾರೆ.


ಮಂಗಳೂರು(ಜ.07): ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿಯಿಂದ ಪೋಸ್ಟ್ ‌ಕಾರ್ಡ್ ಮತ್ತು ಸಹಿ ಸಂಗ್ರಹಕ್ಕೆ ಗೃಹ ಸಚಿವ ಬಸವರಾಜ್ ‌ಬೊಮ್ಮಾಯಿ ಸಾಥ್ ನೀಡಿದ್ದಾರೆ. ಮಂಗಳೂರಿಗೆ ಆಗಮಿಸಿದ ಅವರು, ಪೋಸ್ಟ್ ‌ಕಾರ್ಡ್‌ಗೆ ಸಹಿ ಹಾಕಿದ್ದಾರೆ.

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿಯಿಂದ ಪೋಸ್ಟ್ ‌ಕಾರ್ಡ್ ಮತ್ತು ಸಹಿ ಸಂಗ್ರಹ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅಭಿಯಾನ ಆರಂಭವಾಗಿದೆ.

Tap to resize

Latest Videos

ಮಂಗಳೂರಲ್ಲಿ ಶಾಂತಿ ಕದಡಿದ್ದೇ ಐವನ್ ಡಿಸೋಜ: ನಳಿನ್

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿ ಸಹಿಸಂಗ್ರಹಕ್ಕೆ‌ ಗೃಹ ಸಚಿವರ ಸಾಥ್ ನೀಡಿದ್ದಾರೆ. ಗೃಹ ಸಚಿವ ಬಸವರಾಜ ‌ಬೊಮ್ಮಾಯಿ ಉಡುಪಿಗೆ ತೆರಳುವ ದಾರಿ ಮಧ್ಯೆ ಸುರತ್ಕಲ್‌ಗೆ ಆಗಮಿಸಿದ್ದಾರೆ. ಪೌರತ್ವ ಕಾಯ್ದೆ ಬೆಂಬಲಿಸಿ ಸಹಿ ಹಾಕಿ ಪೋಸ್ಟ್ ‌ಕಾರ್ಡ್‌ಗೂ ಸಹಿ ಹಾಕಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸಾಥ್ ನೀಡಿದ್ದು, ಶಾಸಕ ಭರತ್ ‌ಶೆಟ್ಟಿ‌ ಮನವಿಯ ಮೇರೆಗೆ ಬೊಮ್ಮಾಯಿ ಆಗಮಿಸಿದ್ದರು. 

ಮಂಡ್ಯ: ಮರಗಳನ್ನು ಕಡಿಯಲ್ಲ, ಎತ್ತಿ ಬೇರೆಡೆ ಇಡ್ತಾರೆ..!

ಮಂಗಳೂರಿನ ಸುರತ್ಕಲ್ ವೃತ್ತದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿ ಹಾಕಿದ್ದಾರೆ. ಬಳಿಕ ಪೋಸ್ಟ್ ಕಾರ್ಡ್‌ಗೆ ಸಹಿ ಹಾಕಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನೂರಾರು ಕಾರ್ಯಕರ್ತರು ಸಹಿ ಸಂಗ್ರಹ ಮತ್ತು ಪೋಸ್ಟ್ ಕಾರ್ಡ್ ಅಭಿಯಾನ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಮಂಗಳೂರು ‌ಉತ್ತರ ಶಾಸಕ ಭರತ್ ಶೆಟ್ಟಿ ಸೇರಿ ‌ಹಲವು ಮುಖಂಡರು ಭಾಗಿಯಾಗಿದ್ದಾರೆ.

click me!