ಹೋಬಳಿ ಮಟ್ಟದ ಸಮಿತಿಗಳು ಕನ್ನಡ ಸಾಹಿತ್ಯ ಪರಿಷತ್‌ನ ಬೇರುಗಳು, ಅವು ಸದೃಢವಾದರೆ ಪರಿಷತ್ತು ಬಲಿಷ್ಠವಾಗುತ್ತದೆ.-ಕೇಶವ್ ಕಾಮತ್
ಮಡಿಕೇರಿ (ಅ.1) : ಹೋಬಳಿ ಮಟ್ಟದ ಸಮಿತಿಗಳು ಕನ್ನಡ ಸಾಹಿತ್ಯ ಪರಿಷತ್‌ನ ಬೇರುಗಳು, ಅವು ಸದೃಢವಾದರೆ ಪರಿಷತ್ತು ಬಲಿಷ್ಠವಾಗುತ್ತದೆ. ಸದ್ಯದಲ್ಲೆ ಸದಸ್ಯತ್ವ ಆಂದೋಲನ ಪ್ರಾಂಭಿಸಲಾಗುವುದು. ಆ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರು ಹೆಚ್ಚು ಹೆಚ್ಚು ಸದಸ್ಯರು ಮಾಡುವ ಮೂಲಕ ಪರಿಷತ್ತನ್ನು ಗಟ್ಟಿಗೊಳಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್ ಹೇಳಿದರು.
ವಿರಾಜಪೇಟೆ(Virajapete) ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿ(Kannada Sahitya Parishath)ನ ಅಮ್ಮತ್ತಿ ಹೋಬಳಿ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದರು.
undefined
ಕಸಾಪ ಚುನಾವಣೆಗೂ ಇನ್ನು ಸಾಮಾಜಿಕ ಜಾಲತಾಣ ಬಳಕೆ
ಕಾರ್ಯಕ್ರಮ ಉದ್ಘಾಟಿಸಿದ ಪರಿಷತ್ತಿನ ಪೂರ್ವಾಧ್ಯಕ್ಷ ಟ.ಪಿ.ರಮೇಶ್(T.P.Ramesh), ಸಾಹಿತ್ಯ ಪರಿಷತ್ತಿನ ನಡಿಗೆ ಶಾಲೆಗಳ ಕಡೆಗೆ ಎಂಬಂತೆ ಶಾಲಾ ಅಧ್ಯಾಪಕರನ್ನು ಮತ್ತು ವಿದ್ಯಾರ್ಥಿಗಳನ್ನು ಪರಿಷತ್ತಿನ ಕಾರ್ಯಕ್ರಮಗಳೆಡೆಗೆ ಕರೆತರಬೇಕಿದೆ. ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಸಾಹಿತಿಗಳನ್ನು, ಕವಿಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸಾಹಿತ್ಯ ಬೆಳೆಯಬೇಕಿದೆ ಎಂದರು.
ರಮೇಶ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾಧ್ಯಕ್ಷ ಕೇಶವ ಕಾಮತ್, ಘಟಕದ ನೂತನ ಅಧ್ಯಕ್ಷ ಟಿ.ಎಚ್. ಮಂಜುನಾಥ್‌ಗೆ ಅಧಿಕಾರ ಹಸ್ತಾಂತರ ಮಾಡಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಗಣಪತಿ ಶುಭಹಾರೈಸಿದರು. ಅಮ್ಮತ್ತಿ ಹೋಬಳಿ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ವೆಂಕಟೇಶ್, ಹೋಬಳಿಯ ನೂತನ ಅಧ್ಯಕ್ಷ ಟಿ.ಎಚ್. ಮಂಜುನಾಥ್ ಮಾತನಾಡಿದರು. ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು.
ನಾಡಗೀತೆಗೆ ಅವಮಾನ: ಕ್ರಮಕ್ಕೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಆಗ್ರಹ
ಕಸಾಪ ಜಿಲ್ಲಾ ಸಮಿತಿ ಸದಸ್ಯರಾದ ಬಿಜೋಯ…, ಮೂಸಾ, ಸಿದ್ದಾಪುರ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಯಮುನಾ, ದೇವಜಾನು, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎ. ಆನಂದ, ಲೋಕೇಶ್, ಝಮೀರಾ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಸಂತ ಅನ್ನಮ್ಮ ಶಾಲೆಯ ಶಿಕ್ಷಕರು, ಬಿಜಿಎಸ್ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಸಿದ್ದಾಪುರ ಸುತ್ತಮುತ್ತಲಿನ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನ್‌ಮೋಹನ್ ಹಾಗೂ ಸಿಬ್ಬಂದಿ ವರ್ಗ, ಆಮ್ಮತ್ತಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ವಿ ಸೆವೆನ್ ಸಂಘದ ಸದ್ಯಸರು, ಸಿದ್ದಾಪುರ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಆಟೋ ಚಾಲಕ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉದ್ಯಮಿ ಮಾಲೀಕ ರಾಜೇಂದ್ರ ಪ್ರಸಾದ್, ಕಾರ‍್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ತುಳಸಿ ಗಿಡವನ್ನು ಉಚಿತವಾಗಿ ಕೊಟ್ಟು ತಮ್ಮ ಪರಿಸರ ಪ್ರೇಮ ತೋರಿದರು. ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ವಿಜಯಲಕ್ಷ್ಮೇ ಮತ್ತು ಸಮಿತಿ ಸದ್ಯಸರಾದ ಕೆ.ಎ.ಹರಿದಾಸ್, ಹಂಸ, ವಿನೀತ, ಶಿವ ಕುಮಾರ್ ಉಪಸ್ಥಿತರಿದ್ದರು. ಟೋಮಿ ಥೋಮಸ್ ನಿರೂಪಿಸಿದರು. ವಿಜಯಲಕ್ಷ್ಮೇ ಸ್ವಾಗತಿಸಿದರು. ಟಿ.ಎಚ್. ಮಂಜುನಾಥ್ ವಂದಿಸಿದರು. ಜಲಜಾಕ್ಷಿ ಮತ್ತು ತಂಡ ನಾಡಗೀತೆ ಹಾಡಿದರು.