ಬಿಲ್ಲವ ಸಮಾಜ ಪ್ರವೀಣ್ ನೆಟ್ಟಾರು ರೂಪದಲ್ಲಿದ್ದ ಭವಿಷ್ಯದ ನಾಯಕನನ್ನು ಕಳೆದುಕೊಂಡಿದೆ. ಪ್ರವೀಣ್ ಹತ್ಯೆಯ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಹತ್ಯೆಯ ಹಿಂದಿನ ಜಾಲವನ್ನು ಬಯಲಿಗೆಳೆಯಬೇಕು ಎಂದು ಪುತ್ತೂರು ಬಿಲ್ಲವ ಸಮಾಜದ ಖಜಾಂಚಿ ಮಹೇಶ್ ಸಾಲಿಯಾನ್ ಆಗ್ರಹಿಸಿದ್ದಾರೆ.
ಸುಂಟಿಕೊಪ್ಪ (ಅ.1} : ಬಿಲ್ಲವ ಸಮಾಜ ಪ್ರವೀಣ್ ನೆಟ್ಟಾರು ರೂಪದಲ್ಲಿದ್ದ ಭವಿಷ್ಯದ ನಾಯಕನನ್ನು ಕಳೆದುಕೊಂಡಿದೆ. ಪ್ರವೀಣ್ ಹತ್ಯೆಯ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಹತ್ಯೆಯ ಹಿಂದಿನ ಜಾಲವನ್ನು ಬಯಲಿಗೆಳೆಯಬೇಕು ಎಂದು ಪುತ್ತೂರು ಬಿಲ್ಲವ ಸಮಾಜದ ಖಜಾಂಚಿ ಮಹೇಶ್ ಸಾಲಿಯಾನ್ ಆಗ್ರಹಿಸಿದ್ದಾರೆ.
ಭಾನುವಾರ ಸುಂಟಿಕೊಪ್ಪ(Sunitikoppa)ದ ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪ ಹೋಬಳಿ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ(Shri Narayanaguru billava seva trust)ದ ವತಿಯಿಂದ, ಪ್ರವೀಣ್ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ವೈಯಕ್ತಿಕ ನೆಲೆಯಲ್ಲಿ ಪ್ರವೀಣ್ ನೆಟ್ಟಾರು ಬಹು ವರ್ಷಗಳಿಂದ ತನಗೆ ಒಡಾನಾಡಿಯಾಗಿದ್ದು, ಅವರು ತಮಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡು ಬಿಲ್ಲವ ಸಮಾಜ ಅನಾಥವಾಗಿದೆ ಎಂದು ವಿಷಾದಿಸಿದ ಮಹೇಶ್ ಸಾಲಿಯಾನ್, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 1 ಕೋಟಿ ರು. ಪರಿಹಾರ ಮತ್ತು ಪ್ರವೀಣ್ ಪತ್ನಿಗೆ ಸೂಕ್ತ ಸರ್ಕಾರಿ ಉದ್ಯೋಗ ಕೊಡಬೇಕೆಂದು ಆಗ್ರಹಿಸಿದರು.
undefined
ನಳಿನ್ ಕುಮಾರ್ ಕಟೀಲ್‌ಗೆ ಆಪ್ತನಾಗಿದ್ದ ಪ್ರವೀಣ್: ಸಿದ್ದು ಆರೋಪ
ಸೋಮವಾರಪೇಟೆ(Somavarapete) ತಾಲೂಕು ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ. ಭಾಸ್ಕರ್(B.A.Bhaskar) ಮಾತನಾಡಿ, ನಾಯಕತ್ವದ ಗುಣಗಳನ್ನು ಹೊಂದಿದ್ದ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇದ್ದ ಪ್ರವೀಣ್ ಹತ್ಯೆಯಾಗಿರುವುದು ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟಎಂದು ಹೇಳಿದರು.
ಕನ್ನಡ ವೃತ್ತದಲ್ಲಿ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸಮಾಜ ಮತ್ತು ದೇಯಿಬೈದೇತಿ ಸಂಘದ ಸದಸ್ಯರು ಮಾನವ ಸರಪಳಿ ರಚಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿಲ್ಲವ ಸಮಾಜದ ಪ್ರಮುಖರಾ ದಿನೇಶ್ ಸತ್ಯ ರ್ಕಕೇರ ಮತ್ತಿತರರು ಘೋಷಣೆಗಳನ್ನು ಕೂಗಿದರು. ಪ್ರವೀಣ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಬಿಲ್ಲವ ಸಂಘಕ್ಕೆ ಜಮೀನು ಕೊಡಿಸಲು ಕ್ರಮ : ಸುನಿಲ್ ಕುಮಾರ್
ಬಳಿಕ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಸುಂಟಿಕೊಪ್ಪ ಅರಕ್ಷಕ ಉಪನಿರೀಕ್ಷಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎರಡೂ ಸಂಘಟನೆಗಳ ಪ್ರಮುಖರಾದ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್, ಕಾರ್ಯದರ್ಶಿ ವೆಂಕಪ ಹಾಗೂ ದೇಯಿಬೈದೇತಿ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ಕಾರ್ಯದರ್ಶಿ ಮಹಿಮಾ ಸತ್ಯ, ಬಿಲ್ಲವ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಪ್ರೀತಮ್, ಕಾರ್ಯದರ್ಶಿ ಯಕ್ಷಿತ್, ಸೋಮವಾರಪೇಟೆ ಬಿಲ್ಲವ ಸಂಘದ ರಮೇಶ್ ಕರಾವಳಿ, ಪ್ರಶಾಂತ್, ಹರೀಶ್ ಕೊಟ್ಯಾನ್, ಇಂದಿರಾ ಮೊಣ್ಣಪ್ಪ, ಇಂದಿರಾ ರಮೇಶ್, ಕುಶಾಲನಗರ ಬಿಲ್ಲವ ಸಮಾಜದ ಮಂಜು, ಸುಂಟಿಕೊಪ್ಪ ಬಿಲ್ಲವ ಸಂಘದ ಡಾ. ಯಶೋಧರ ಪೂಜಾರಿ, ಬಿ.ಕೆ. ಮೋಹನ್, ನಾಗೇಶ್ ಪೂಜಾರಿ, ಬಾಬು ಪೂಜಾರಿ, ಬಿ.ಎಸ್. ರಮೇಶ್ ಪೂಜಾರಿ, ದೇವಪ್ಪ, ದಿನೇಶ್ ತೊಂಡೂರು, ಪದ್ಮನಾಭ ಸೇರಿದಂತೆ ನೂರಾರು ಪದಾಧಿಕಾರಿಗಳು ಇದ್ದರು.