ಮಂಗಳೂರು ಏರ್‌ಪೋರ್ಟ್‌ಗೆ ಮತ್ತೊಂದು ಬಾಂಬ್ ಬೆದರಿಕೆ : ಆರೋಪಿ ವಶಕ್ಕೆ

By Kannadaprabha News  |  First Published Aug 20, 2020, 9:17 AM IST

ಆದಿತ್ಯ ರಾವ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಿದ್ದ ಪ್ರಕರಣ ರಾಜ್ಯವನ್ನೇತಲ್ಲಣಗೊಳಿಸಿತ್ತು. ಇದೀಗ ಅಂತದ್ದೆ ಮತ್ತೊಂದು ಬಾಂಬ್ ಬೆದರಿಕೆ ಒಡ್ಡಲಾಗಿದೆ.


ಮಂಗಳೂರು (ಆ.20) : ಏರ್‌ ಪೋರ್ಟ್‌ನಲ್ಲಿ ಬಾಂಬ್‌ ಇಟ್ಟಿರುವುದಾಗಿ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಸಂಜೆ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಉಡುಪಿ ಜಿಲ್ಲೆ ಹೆಬ್ರಿ ಮೂಲದ ವಸಂತ(33) ಎಂಬಾತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್‌.ವಾಸುದೇವ ರಾವ್‌ ಅವರಿಗೆ ಕರೆ ಮಾಡಿ ಬಾಂಬ್‌ ಇಟ್ಟಿರುವುದಾಗಿ ಹೇಳಿ ಕಾಲ್‌ ಕಟ್‌ ಮಾಡಿದ್ದನು. 

Tap to resize

Latest Videos

undefined

ಕಾಸರಗೋಡು-ಮಂಗಳೂರು ಮಧ್ಯೆ ಮತ್ತೆ ನಿತ್ಯ ಪಾಸ್‌ ಸೌಲಭ್ಯ..

ಕೂಡಲೇ ವಾಸುದೇವ್‌ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ನಿಲ್ದಾಣ ಪೂರ್ತಿ ತಪಾಸಣೆ ನಡೆಸಿದರೆ ಎಲ್ಲೂ ಬಾಂಬ್‌ ಪತ್ತೆಯಾಗಿಲ್ಲ. 

ಕರಾವಳಿಯಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್‌ ಫೋನ್‌ ಸಿಗ್ನಲ್‌..

ಹಾಗಾಗಿ ಇದೊಂದು ಹುಸಿ ಕರೆ ಎಂದು ಬಜ್ಪೆ ಠಾಣೆಗೆ ದೂರು ನೀಡಿದ್ದರು. ಬಳಿಕ ಕಾರಾರ‍ಯಚರಣೆಗಿಳಿದ ಪೊಲೀಸರು ಕಾರ್ಕಳದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇದೇ ವರ್ಷ ಜನವರಿ 20ರಂದು ಆದಿತ್ಯ ರಾವ್‌ ಎಂಬಾತ ಮಂಗಳೂರು ಏರ್‌ಪೋರ್ಟ್‌ನ ಹೊರಗಡೆ ಬಾಂಬ್‌ ಇಟ್ಟದ್ದು ರಾಜ್ಯವನ್ನೇ ತಲ್ಲಣಗೊಳಿಸಿತ್ತು.

click me!