ಗಂಡಾನೆ ಮರಿಗೆ ಜನ್ಮ ನೀಡಿದ ಸಾಕಾನೆ ಸುವರ್ಣ| ತಾಯಿ ಮತ್ತು ಮರಿ ಆರೋಗ್ಯವಾಗಿದ್ದು ಮುಂದಿನ ವಾರದಲ್ಲಿ ಪ್ರವಾಸಿಗರ ವೀಕ್ಷಣೆಗೆ ಲಭ್ಯ| ಕಾಡೆಮ್ಮೆ ರಕ್ಷಣೆ|
ಆನೇಕಲ್(ಆ.20): ಬನ್ನೇರುಘಟ್ಟ ಜೈವಿಕ ಉದ್ಯಾನ ವನದ ಸಾಕಾನೆ ಸುವರ್ಣ(45) ಗಂಡಾನೆ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿದ್ದು ಮುಂದಿನ ವಾರದಲ್ಲಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದೆ. ಪಾರ್ಕಿನಲ್ಲಿ ಒಟ್ಟು 25 ಆನೆಗಳ ಹಿಂಡು ಇದೆ ಎಂದು ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಕಾಡೆಮ್ಮೆಯ ರಕ್ಷಣೆ:
undefined
ಕೋಡಿಹಳ್ಳಿ ವಲಯ ಅರಣ್ಯದ ಕೆರಳುಸಂದ್ರದ ತೋಟದ ಮನೆಯಲ್ಲಿ ಒಂದೂವರೆ ವರ್ಷದ ಕಾಡೆಮ್ಮೆಯನ್ನು ರಕ್ಷಿಸಲಾಗಿದೆ. ಬಲಗಾಲು ಮುರಿದಿದ್ದು ಏಳಲು ಆಗದೆ ಒಂದೇ ಕಡೆ ಮಲಗಿತ್ತು. ಅದನ್ನು ರಕ್ಷಿಸಿ ಪಾರ್ಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬನ್ನೇರುಘಟ್ಟ ಪಾರ್ಕಲ್ಲಿ ಗಂಡು ಆನೆ ಮರಿ ಜನನ
ಕರಡಿಯ ರಕ್ಷಣೆ:
ರಾಮನಗರ ವಲಯ ಅರಣ್ಯದ ಕಾಡಿನ ಕುಪ್ಪೆ ಗ್ರಾಮದ ಬಳಿ ಬಲೆಗೆ ಬಿದ್ದಿದ್ದ ಗಂಡು ಕರಡಿಯನ್ನು ರಕ್ಷಿಸಿ ಕರೆತರಲಾಗಿದೆ. ವೈದ್ಯಾಧಿಕಾರಿ ಉಮಾಶಂಕರ್, ವೈದ್ಯರಾದ ಕ್ಷಮಾ, ರಮೇಶ್ ಮಂಜುನಾಥ್ ಚಿಕಿತ್ಸೆ ನೀಡುತ್ತಿದ್ದಾರೆ.