ಬೆಳಗಾವಿ ಸೇರಿ ಕೃಷ್ಣಾ ತೀರದ ಜಿಲ್ಲೆಗಳ ಜನರು ನಿರಾಳ

By Kannadaprabha NewsFirst Published Aug 20, 2020, 7:39 AM IST
Highlights

ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದು ಇದರಿಂದ ಕೃಷ್ಣ ನದಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕೃಷ್ಣಾ ತೀರದ ಜನರು ನಿರಾಳರಾಗಿದ್ದಾರೆ.

 ಬೆಂಗಳೂರು (ಆ.20):  ರಾಜ್ಯದೆಲ್ಲೆಡೆ ಮಳೆ ಕ್ಷೀಣಿಸಿದ ಬೆನ್ನಲ್ಲೇ ಮಹಾರಾಷ್ಟ್ರದಿಂದ ಕೃಷ್ಣಾ ನದಿ​ಗೆ ಹರಿ​ದು​ಬ​ರು​ತ್ತಿ​ರುವ ನೀರಿನ ಪ್ರಮಾ​ಣವೂ ಇದೀಗ ಇಳಿ​ಮು​ಖ​ವಾ​ಗಿ​ದ್ದು, ಪ್ರವಾ​ಹದ ಆತಂಕ​ದ​ಲ್ಲಿದ್ದ ಉತ್ತರ ಕರ್ನಾ​ಟ​ಕ​ ಕೊಂಚ ನಿರಾ​ಳ​ವಾ​ಗಿ​ದೆ. ಬೆಳ​ಗಾ​ವಿ, ಬಾಗ​ಲ​ಕೋ​ಟೆ​ಯಲ್ಲಿ ಕೃಷ್ಣಾ, ಘಟ​ಪ್ರಭಾ ಪ್ರವಾ​ಹ​ದಿಂದ ಜಲಾ​ವೃ​ತ​ವಾ​ಗಿದ್ದ ಪ್ರದೇ​ಶ​ಗ​ಳಿಂದ ನೀರಿ​ನ​ಮಟ್ಟನಿಧಾ​ನ​ವಾಗಿ ಇಳಿ​ಮು​ಖವಾಗು​ತ್ತಿದ್ದು, ಜನ​ಜೀ​ವನ ಸಹ​ಜ​ಸ್ಥಿತಿಗೆ ಮರಳುತ್ತಿ​ದೆ. ಈ ಮಧ್ಯೆ, ತುಂಗ​ಭದ್ರಾ ಡ್ಯಾಂನಿಂದ 1.2 ಲಕ್ಷ​ಕ್ಕೂ​ ಹೆಚ್ಚು ಕ್ಯುಸೆಕ್‌ ನೀರು ನದಿಗೆ ಹರಿದು ಬಿಟ್ಟಿ​ದ್ದ​ರಿಂದ ಹಂಪಿ ಮತ್ತು ಆನೆ​ಗೊಂದಿಯ ಹಲ​ವು ದೇವ​ಸ್ಥಾನ, ಸ್ಮಾರ​ಕ​ಗಳು ಜಲಾ​ವೃ​ತ​ವಾ​ಗಿ​ವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ...

ಮಹಾ​ರಾ​ಷ್ಟ್ರದ ಕೊಂಕಣ, ಪಶ್ಚಿ​ಮ​ಘಟ್ಟಭಾಗ​ದಲ್ಲಿ ಕಳೆ​ದೊಂದು ವಾರ​ದಿಂದ ಸುರಿ​ಯು​ತ್ತಿ​ರುವ ಮಳೆ ಇದೀಗ ಇಳಿ​ಮು​ಖ​ವಾ​ಗಿದ್ದು, ಅಲ್ಲಿನ ಕೊಯ್ನಾ ಡ್ಯಾಂನಿಂದ ಕೃಷ್ಣಾ ನದಿಗೆ ಸದ್ಯ 2 ಲಕ್ಷ ಕ್ಯುಸೆಕ್‌ಗಿಂತ​ಲೂ ಕಡಿಮೆ ನೀರು ಹರಿಸಲಾ​ಗು​ತ್ತಿದೆ. ಅದೇ ರೀತಿ ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿಗೆ ಬಿಡ​ಲಾ​ಗು​ತ್ತಿ​ರುವ ನೀರಿನ ಪ್ರಮಾಣ 82,295ದಿಂದ ಈಗ 36,900 ಕ್ಯುಸೆಕ್‌ಗೆ ಇಳಿ​ದಿ​ದ್ದು, ಮೂರ್ನಾಲ್ಕು ದಿನ​ಗ​ಳಿಂದ ಜಲಾ​ವೃ​ತ​ವಾ​ಗಿದ್ದ ಬೆಳ​ಗಾ​ವಿಯ ಗೋಕಾಕ, ಬಾಗ​ಲ​ಕೋ​ಟೆ​ಯ ಮುಧೋ​ಳ​ ಸೇರಿ​ದಂತೆ ಹಲವು ಕಡೆ ನೀರಿ​ನ​ಮಟ್ಟತಗ್ಗಿದೆ.

ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿ..

ಆದರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಾಭದ್ರಾ ಡ್ಯಾಂನಿಂದ 1.12 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ಹೊರಬಿಡುತ್ತಿರುವುದರಿಂದ ನದಿತೀರ ಪ್ರದೇಶಗಳಲ್ಲಿ ನೀರು ನುಗ್ಗುತ್ತಿದ್ದು, ಹಂಪಿಯ ರಾಮಲಕ್ಷ್ಮಣ ದೇವಸ್ಥಾನ, ಸಾಲು ಮಂಟಪ, ನಂದಿ ವಿಗ್ರಹ, ಪುರಂದರದಾಸ ಮಂಟಪ ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿಯ ನವವೃಂದಾವನಗಡ್ಡೆ, ಕೃಷ್ಣದೇವರಾಯ ಸಮಾಧಿ ಸೇರಿ ಹಲವು ಸಮಾಧಿಗಳು ಜಲಾವೃತವಾಗಿದೆ. ಕಂಪ್ಲಿ-ಗಂಗಾ​ವತಿ ಸೇತುವೆ ಮೇಲೆ ಸಂಪರ್ಕ ಕಡಿ​ತ​ವಾ​ಗುವ ಸಾಧ್ಯತೆ ಇದೆ.

click me!