ತಾಲೂಕು ಅಭಿವೃದ್ಧಿಯಾಗಬೇಕೆಂಬ ಕನಸು ಕಟ್ಟಿಕೊಂಡು ಬಿ.ಸಿ. ಪಾಟೀಲರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದು ಈಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ| ತಾಲೂಕಿನಲ್ಲಿ ಬಿ.ಸಿ. ಪಾಟೀಲ್ ಹಾಗೂ ಯು.ಬಿ. ಬಣಕಾರ ಅವರು ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ| ಈಗ ಆ ಎರಡು ಶಕ್ತಿಗಳು ಒಂದಾಗಿದ್ದು, ಮತದಾರರು ಬಿಜೆಪಿಗೆ ಅಭೂತ್ವಪೂರ್ವ ಬೆಂಬಲ ನೀಡುತ್ತಿದ್ದಾರೆ| ನಮ್ಮ ಗೆಲುವು ಖಚಿತವಾಗಿದೆ ಎಂದ ಸೃಷ್ಠಿ ಪಾಟೀಲ|
ರಟ್ಟೀಹಳ್ಳಿ(ನ.24): ಹಿರೇಕೆರೂರು ಉಪಚುನಾವಣೆಯ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲರ ಪರವಾಗಿ ಕಡೂರು ಗ್ರಾಮದಲ್ಲಿ ಬಿ.ಸಿ. ಪಾಟೀಲ ಅವರ ಪುತ್ರಿ ಸೃಷ್ಠಿ ಪಾಟೀಲ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ತಾಲೂಕು ಅಭಿವೃದ್ಧಿಯಾಗಬೇಕೆಂಬ ಕನಸು ಕಟ್ಟಿಕೊಂಡು ಬಿ.ಸಿ. ಪಾಟೀಲರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದು ಈಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತಾಲೂಕಿನಲ್ಲಿ ಬಿ.ಸಿ. ಪಾಟೀಲ್ ಹಾಗೂ ಯು.ಬಿ. ಬಣಕಾರ ಅವರು ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ. ಈಗ ಆ ಎರಡು ಶಕ್ತಿಗಳು ಒಂದಾಗಿದ್ದು, ಮತದಾರರು ಬಿಜೆಪಿಗೆ ಅಭೂತ್ವಪೂರ್ವ ಬೆಂಬಲ ನೀಡುತ್ತಿದ್ದಾರೆ. ನಮ್ಮ ಗೆಲುವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಡೂರು ಗ್ರಾಮದ ಹಿರಿಯ ಮುಖಂಡ ಚಂದ್ರೇಶಖರಪ್ಪ ತುಮ್ಮಿನಕಟ್ಟಿ ಸೇರಿದಂತೆ ಹಲವು ಮಹಿಳೆಯರು ಉಪಸ್ಥಿತರಿದ್ದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.