ಸಾರ್ವಜನಿಕ ರಸ್ತೆಯ ಬದಿಯಲ್ಲೇ ನಡೆಯಿತು ಶವಸಂಸ್ಕಾರ..!

By Kannadaprabha NewsFirst Published Nov 24, 2019, 7:50 AM IST
Highlights

ರುದ್ರಭೂಮಿ ಇಲ್ಲದೆ ರಸ್ತೆ ಬದಿಯಲ್ಲಿ ಶವಸಂಸ್ಕಾರ ನಡೆಸಿರುವ ಘಟನೆ ಈ ಬಾರಿ ಗಾಂಧಿಗ್ರಾಮ ಪುರಸ್ಕಾರ ಪಡೆದ ದ.ಕ. ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮದಲ್ಲಿ ನಡೆದಿದೆ. ಶಾಲಾ ಮಕ್ಕಳು, ಸಾರ್ವಜನಿಕರೂ ನಡೆದು ಹೋಗುವ ರಸ್ತೆ ಬದಿಯಲ್ಲೇ ಶವ ಸಂಸ್ಕಾರ ಮಾಡಲಾಗಿದೆ.

ಮಂಗಳೂರು(ನ.24): ರುದ್ರಭೂಮಿಯ ಕೊರತೆಯಿಂದಾಗಿ ರಸ್ತೆಬದಿಯಲ್ಲೇ ಶವ ಸಂಸ್ಕಾರ. ಇದು ಈ ಬಾರಿ ಗಾಂಧಿಗ್ರಾಮ ಪುರಸ್ಕಾರ ಪಡೆದ ದ.ಕ. ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮದ ಸಾರ್ವಜನಿಕರ ಪರಿಸ್ಥಿತಿ.

ಶಾಲೆಯ ಮಕ್ಕಳು ನಡೆದು ಹೋಗುವ ದಾರಿ ಪಕ್ಕದಲ್ಲೇ ಒಂದಷ್ಟುಮನೆಗಳು. ಆದರೆ ನಡುವೆ ಒಂದಿಷ್ಟು ಜಾಗದಲ್ಲೇ ಸಂಬಂಧಿಗಳ ಅಂತ್ಯವಿಧಿಯನ್ನು ನಡೆಸಬೇಕಾದ ಅನಿವಾರ್ಯತೆ ಇಲ್ಲಿನ ಸಾರ್ವಜನಿಕರದ್ದು.

ಕಟೀಲು ಯಕ್ಷಗಾನ ಮೇಳದಿಂದ ಪಟ್ಲ ಸತೀಶ್ ಹೊರಕ್ಕೆ

ಕಲ್ಲಮುಂಡ್ಕೂರಿನ ಗುಂಡುಕಲ್ಲು ಪರಿಸರದ ಹಿಂದುಳಿದ ವರ್ಗದ ಜನ ರುದ್ರಭೂಮಿಯ ಕೊರತೆಯಿಂದ ಬೇರೆ ದಾರಿ ಕಾಣದೇ ದಾರಿ ಪಕ್ಕದಲ್ಲೇ ಇತ್ತೀಚೆಗೆ ಶವ ಸಂಸ್ಕಾರ ನಡೆಸಿದ್ದಾರೆ. ಈ ಭಾಗದಲ್ಲಿ ಹಾದು ಹೋಗುವ ಶಾಲಾ ಮಕ್ಕಳು, ಹತ್ತಿರದ ಸಾರ್ವಜನಿಕರು ಈ ಬೆಳವಣಿಗೆಯಿಂದ ಆತಂಕಿತರಾಗಿದ್ದಾರೆ.

ರುದ್ರಭೂಮಿ ಇಲ್ಲ?

ಸುಮಾರು ಎಂಟೂವರೆ ಸಾವಿರಕ್ಕೂ ಅಧಿಕ ಜನಸಂಖ್ಯೆಯಿರುವ ಕಲ್ಲಮುಂಡ್ಕೂರು ಪಂಚಾಯಿತಿ ವ್ಯಾಪ್ತಿಯಲ್ಲಿ ರುದ್ರಭೂಮಿ ಸಮಸ್ಯೆ ಇನ್ನೂ ಜೀವಂತವಾಗಿದೆ. ಇಲ್ಲಿನ ಬರ್ಕಬೆಟ್ಟು ಎಂಬಲ್ಲಿ ರುದ್ರಭೂಮಿಗಾಗಿ ಸ್ಥಳವಿದ್ದರೂ ಇದಕ್ಕೆ ಹೋಗುವ ದಾರಿ ಇಲ್ಲ. ಖಾಸಗಿಯವರ ಜತೆ ಮಾತುಕತೆ ಇನ್ನೂ ಫಲ ನೀಡಿಲ್ಲ. ನಿಡ್ಡೋಡಿಯಲ್ಲಿ ಒಂದು ಎಕರೆ ಮುರಕಲ್ಲು ಸ್ಥಳ ಮಂಜೂರಾಗಿದ್ದು ಬಿಟ್ಟರೆ ಅಲ್ಲೇನೂ ಸವಲತ್ತಿಲ್ಲ. ಪಕ್ಕದ ಪಿದುಮಲೆಯಲ್ಲಿ 5 ಸೆಂಟ್ಸ್‌ ಸ್ಥಳ ಸಮತಟ್ಟು ಮಾಡಲಾಗಿದ್ದರೂ ಅದು ಡೀಮ್‌್ಡ ಫಾರೆಸ್ಟ್‌ ಎಂಬ ತಗಾದೆ ಇತ್ಯರ್ಥವಾಗಿಲ್ಲ. ಒಟ್ಟಿನಲ್ಲಿ ರುದ್ರಭೂಮಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.

ಪತ್ನಿ ಸಾವಿನ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ಪತಿ: ಸಾವಿನಲ್ಲೂ ಒಂದಾದ ದಂಪತಿ

ಸಾರ್ವಜನಿಕರು ಓಡಾಡುವ ರಸ್ತೆ ಬದಿ ಶವಸಂಸ್ಕಾರ ಮಾಡುತ್ತಿರುವುದು ಸರಿಯಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ಈ ಬಗ್ಗೆ ಜನತೆಯ ಅಗತ್ಯಕ್ಕೆ ಸ್ಪಂದಿಸಬೇಕು ಎಂದು ಸ್ಥಳೀಯ ಅಶೋಕ್ ನಾಯ್ಕ್ ಹೇಳಿದ್ಧಾರೆ.

ಡೀಮ್ಡ್ ಫಾರೆಸ್ಟ್‌ ಸಮಸ್ಯೆಯೇ ನಮಗೆ ತೊಡಕಾಗಿದೆ. ಮೀಸಲು ಅರಣ್ಯ ತೆರವು ಮಾಡಿದರೆ ಸಮಸ್ಯೆ ಪರಿಹಾರ ಕಾಣಲಿದೆ ಎಂದು ಪಿಡಿಒ ಉಗ್ಗಪ್ಪ ಮೂಲ್ಯ ತಿಳಿಸಿದ್ದಾರೆ.

click me!