ರಾಜ್ಯದ 7 ಅದ್ಭುತಗಳಲ್ಲಿ ಸ್ಥಾನ: ಹಿರೇಬೆಣಕಲ್‌ನಲ್ಲಿ ಸಂಭ್ರಮೋತ್ಸವ

By Kannadaprabha NewsFirst Published Mar 19, 2023, 11:53 AM IST
Highlights

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ಏಳು ಅದ್ಭುತಗಳಲ್ಲಿ ಗಂಗಾವತಿಯ ಹಿರೇಬೆಣಕಲ್‌ ಗ್ರಾಮದ ಮೋರೆರ್‌ ತಟ್ಟೆಗಳು ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಹಿರೇಬೆಣಕಲ್‌ ಗ್ರಾಮದಲ್ಲಿ ಶನಿವಾರ ಸಂಭ್ರಮೋತ್ಸವ ಆಚರಿಸಲಾಯಿತು.

ಕೊಪ್ಪಳ (ಮಾ.19) : ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ(Karnataka Tourism DepartmentKarnataka Tourism Department) ಸಹಯೋಗದಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ಏಳು ಅದ್ಭುತಗಳಲ್ಲಿ ಗಂಗಾವತಿಯ ಹಿರೇಬೆಣಕಲ್‌ ಗ್ರಾಮದ ಮೋರೆರ್‌ ತಟ್ಟೆಗಳು ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಹಿರೇಬೆಣಕಲ್‌ ಗ್ರಾಮದಲ್ಲಿ ಶನಿವಾರ ಸಂಭ್ರಮೋತ್ಸವ ಆಚರಿಸಲಾಯಿತು.

ನಮ್ಮೂರಿನ ಸುಪ್ರಸಿದ್ಧ ಶಿಲಾಸಮಾಧಿ(stone burialburial)ಗಳಿಗೆ ಸಿಕ್ಕಿರುವ ಈ ಗೌರವ ಹಿರಿಮೆ ತಂದು ಕೊಟ್ಟಿದೆ. ಈ ಮೂಲಕ ಈ ಶಿಲಾಸಮಾಧಿಗಳು ಇನ್ನುಂದೆ ವಿಶ್ವದಲ್ಲಿಯೇ ಪ್ರಸಿದ್ಧಿಯಾಗಲಿದೆ. ಅಷ್ಟೇ ಅಲ್ಲ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಗ್ರಾಮಸ್ಥರು ಕೊಂಡಾಡಿದರು.

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಹಿರೇಬೆಣಕಲ್ ಶಿಲಾ ಸಮಾಧಿಗಳು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ(MLA Paranna munvalli), ಇಂಥದ್ದೊಂದು ಸ್ಥಳ ಗುರುತಿಸಿ, ನಾಡಿಗೆ ಪರಿಚಯಿಸಿದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ಗೆ ಅಭಿನಂದನೆ. ಈ ಪ್ರದೇಶ ಅಭಿವೃದ್ಧಿ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಹಿರೇಬೆಣಕಲ್‌ ಈಗ ಕರ್ನಾಟಕ ಏಳು ಅದ್ಭುತಗಳಲ್ಲೊಂದಾಗಿದೆ. ಇದನ್ನು ಅಭಿವೃದ್ಧಿ ಕೈಗೊಳ್ಳಲಾಗುವುದು. ಬೆಟ್ಟದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಪಠ್ಯದಲ್ಲಿ ಈ ಪಾಠ ಅಳವಡಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ವಿಶ್ವ ಪಾರಾಂಪರಿಕ ಪಟ್ಟಿಯಲ್ಲಿ ಸೇರುವಂತಾಗಬೇಕು ಎಂದರು.

ಚಾರಣ ಬಳಗದ ಡಾ. ಶರಣಬಸಪ್ಪ ಕೋಲ್ಕಾರ ಮಾತನಾಡಿ, ಹಿರೇಬೆಣಕಲ್‌ ಗ್ರಾಮ ಈಗ ವಿಶ್ವಪ್ರಸಿದ್ಧವಾಗುತ್ತದೆ. ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಇದೆಲ್ಲಕ್ಕೂ ಕಾರಣವಾಗಿದೆ. ಅವರ ಇಂತಹ ಅದ್ಭುತ ಯೋಚನೆ ಮಾಡದೆ ಇದ್ದರೆ ನಮಗೆ ಈ ಯೋಗ ಬರುತ್ತಿರಲಿಲ್ಲ. ಇದಕ್ಕಾಗಿ ನಾವು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ಗೆ ಎಷ್ಟುಅಭಿನಂದನೆ ಸಲ್ಲಿಸಿದರೂ ಸಾಲದು. ಅವರಿಗೆ ಸಾಥ್‌ ನೀಡಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಧನ್ಯವಾದ ಎಂದರು.

ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ(Ravi hegde) ಅವರ ಯೋಚನೆ ಇದಾಗಿದೆ.ಅವರು ಕೈಗೊಂಡ ಈ ಯೋಜನೆ ನಾಡಿನಲ್ಲಿಯೇ ಶ್ರೇಷ್ಠ ಕಾರ್ಯ ಮಾಡಿದ್ದಾರೆ. ಅವರಿಗೂ ಧನ್ಯವಾದ ತಿಳಿಸುತ್ತೇನೆ. ಗಂಗಾವತಿ ಚಾರಣ ಬಳಗವೂ ಸಹ ಇದನ್ನು ಗುರುತಿಸುವ ದಿಸೆಯಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಮೂರು ಸಾವಿರ ವರ್ಷಗಳ ಹಿಂದೆ ಮೊರೇರ ಎನ್ನುವ ಬುಡಕಟ್ಟು ಜನಾಂಗ ವಾಸಿಸಿರುವ ಕುರುಹಗಳು ಇವು. ಅವುಗಳನ್ನು ಸಂರಕ್ಷಣೆ ಮಾಡುವುದು ನಮ್ಮ ಹೊಣೆಯಾಗಿದೆ. ಈಗ ನಾಡಿನ ಏಳು ಅದ್ಭುತಗಳು ಘೋಷಣೆ ಮಾಡಿರುವುದರಿಂದ ಮತ್ತಷ್ಟುಜವಾಬ್ದಾರಿ ನಮ್ಮದಾಗಬೇಕಾಗಿದೆ ಎಂದರು.

ಡಾ.ಶಿವಕುಮಾರ ಮಾತನಾಡಿ, ಶಿಲಾಸಮಾಧಿಗಳು ಚಿನ್ನದಗಣಿ ಇದ್ದಂತೆ. ಅವುಗಳನ್ನು ಸಂರಕ್ಷಣೆ ಮಾಡಿಕೊಂಡರೆ ನಿಮ್ಮ ಬದುಕು ಬಂಗಾರವಾಗುತ್ತದೆ ಎಂದ ಅವರು, ಹಿರೇಬೆಣಕಲ್‌ಗೆ ನುರಿತ ಗೈಡ್‌ ನೇಮಕವಾಗಬೇಕಿದೆ. ಬೇರೆ ಬೇರೆ ರಾಜ್ಯದವರು, ದೇಶದವರು ಬರುವುದರಿಂದ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. ಅದ್ದರಿಂದ ಈ ದಿಸೆಯಲ್ಲಿ ಸರ್ಕಾರ ಸ್ಪಂದಿಸಬೇಕಾಗಿದೆ ಎಂದು ಮನವಿ ಮಾಡಿದರು.

ಹಿರೇಬೆಣಕಲ್‌ಗೆ ಕರ್ನಾಟಕದ ಅದ್ಭುತ ಸ್ಥಾನ: ಗಂಗಾವತಿಯಲ್ಲಿ ಸಂಭ್ರಮಾಚರಣೆ

ಚಾರಣ ಬಳಗದ ಡಾ.ಶಿವಕುಮಾರ ಪಾಟೀಲ, ಮಂಜುನಾಥ ಗುಡ್ಲಾನೂರು,ರಾಮನಾಥ ಭಂಡಾರಕರ, ಸಿ.ಮಹಾಲಕ್ಷ್ಮೇ, ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ವೀರೇಶ ಅಂಗಡಿ, ಚಂದ್ರು ಕುಂಬಾರ, ಆನಂದ ಅಕ್ಕಿ, ಹರನಾಯಕ, ನೀಲಕಂಠಪ್ಪ, ಬೆಟ್ಟದಪ್ಪ ಹಾಗೂ ಹಿರೇಬೆಣಕಲ್‌ ಗ್ರಾಮಸ್ಥರು ಮತ್ತಿರರು ಭಾಗವಹಿಸುವರು.

ನೇತ್ರಾ, ಹುಲಿಗೆಮ್ಮ, ಅಮೃತ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಬಸನಗೌಡ ಸ್ವಾಗತಿಸಿದರು.ವೀರೇಶ ಅಂಗಡಿ ಪ್ರಸ್ತಾವಿಕವಾಗಿ ಮಾತನಾಡಿದರು.ಚಂದ್ರು ಕುಂಬಾರ ನಿರೂಪಿಸಿದರು.

click me!