ಭಾನುವಾರದ ಬಾಡೂಟ: ಚಿಕ್ಕಮಗಳೂರಿನಲ್ಲೂ ಹಲಾಲ್ ವಿರುದ್ಧ ಝಟ್ಕಾ ದಂಗಲ್

By Suvarna News  |  First Published Apr 2, 2022, 7:21 PM IST

* ಚಿಕ್ಕಮಗಳೂರು ನಗರದ ಕೆಲ ಮಾಂಸದ  ಅಂಗಡಿಗಳಲ್ಲಿ ಝಟ್ಕಾ ಕಟ್ ಸ್ಟಿಕರ್ 
* ಹಿಂದೂಗಳ ಅಂಗಡಿಗಳಲ್ಲೇ ಮಾಂಸ ಖರೀದಿಗೆ ಸಂಘಟನೆ ಮುಖಂಡರ ಕರೆ
* ಸಾಮಾಜಿಕ ಜಾಲಗಳಲ್ಲಿ ಅಂಗಡಿಗಳ ಹೆಸರು ಹಾಕಿ ವ್ಯಾಪಾರ ಮಾಡುವಂತೆ ಮನವಿ
* ಆನ್ ಲೈನ್ ನಲ್ಲೂ  ಅರ್ಡರ್ ಮಾಡಲು ನಗರದ ಜನರಿಗೆ ಅವಕಾಶ 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು, (ಏ.02) : ಮಲೆನಾಡ ಭಾಗವಾದ ಚಿಕ್ಕಮಗಳೂರಿನಲ್ಲಿ ಹಿಜಾಬ್ ವಿವಾದದ ಉಂಟಾಗಿರುವ ಕಿಚ್ಚು ತಣ್ಣಗಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ, ಹಿಜಾಬ್ ವಿವಾದದಿಂದ ಉಂಟಾದ ವ್ಯಾಪಾರ ಸಂಘರ್ಷದ ಕಿಚ್ಚು  ಮಲೆನಾಡಿನಲ್ಲಿ ವ್ಯಾಪಕವಾಗಿ ಪ್ರತಿಧ್ವನಿಸುತ್ತಿದೆ. ಇದೀಗ ನಾಳೆ ನಡೆಯುವ ಹೊಸತೊಡಕಿಗೆ ಹಿಂದೂಗಳ ಅಂಗಡಿಗಳಲ್ಲೇ ಮಾಂಸ ಖರೀದಿಗೆ ಸಂಘಟನೆ ಮುಖಂಡರ ಕರೆ ನೀಡಿದ್ದು ಕೆಲ ಅಂಗಡಿಗಳ ಮುಂದೆ ಝಟ್ಕಾ ಕಟ್ ಸಿಕ್ಟರ್ ಹಾಕಲಾಗಿದೆ

Latest Videos

undefined

 ಕೆಲ ಮಾಂಸದ  ಅಂಗಡಿಗಳಲ್ಲಿ ಝಟ್ಕಾ ಕಟ್ ಸ್ಟಿಕರ್ 
ಚಿಕ್ಕಮಗಳೂರಿನಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧದ ಮುಂದುವರಿಯುತ್ತಲೇ ಈಗ ಹಲಾಲ್ ಬ್ಯಾನ್ ಅಭಿಯಾನವು ಕೂಡ ಕಾವು ಪಡೆದುಕೊಂಡಿದೆ. ಹಲಾಲ್ ಬ್ಯಾನ್ ಅಭಿಯಾನಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕರೆಕೊಟ್ಟಿದೆ. ನಾಳೆ(ಏ.03) ನಡೆಯುವ  ಹೊಸತೊಡಕಿನಂದು ಮುಸ್ಲಿಂ  ಬಳಿ ಮಾಂಸ ಖರೀದಿಸುವುದು ಬೇಡ ಎಂದು ಕರೆ ನೀಡಲಾಗಿದ್ದು,  ಹಿಂದೂ  ಓಪನ್ ಮಾಡಿರುವ ಮಾಂಸದ ಅಂಗಡಿಗಳಲ್ಲಿ ಮಾಂಸ ಖರೀದಿಗೆ ಮನವಿ ಮಾಡಿದ್ದಾರೆ. 

ಹಲಾಲ್ v/s ಝಟ್ಕಾ ಕಟ್, ಸ್ಟನ್ನಿಂಗ್ ಕಡ್ಡಾಯ ಆದೇಶ ಹೊರಡಿಸಿಲ್ಲ: ಪ್ರಭು ಚವ್ಹಾಣ್ ಸ್ಪಷ್ಟನೆ

ಹಲಾಲ್ ಎಂದರೆ ಅಲ್ಲಾ ಹೆಸರಿನಲ್ಲಿ ನೈವೇದ್ಯಯಾದ ಮಾಂಸವಾಗಿದ್ದು ಬೇರೆ ದೇವರಿಗೆ ಒಪ್ಪಿಸಿದ ಮಾಂಸವನ್ನ ನಾವೇಕೆ ಸ್ವೀಕರಿಸಬೇಕೆಂದು ಕರ ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ .ಜೊತೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹಿಂದೂಗಳ ಓಪನ್ ಮಾಡಿರುವ ಮಾಂಸದ ಅಂಗಡಿಗಳ ಹೆಸರನ್ನ ಹಾಕಿದ್ದಾರೆ. ಚಿಕ್ಕಮಗಳೂರು ನಗರದ ಕೆಲ ಮಾಂಸದ  ಅಂಗಡಿಗಳಲ್ಲಿ ಝಟ್ಕಾ ಕಟ್ ಸ್ಟಿಕರ್ ಹಾಕಲಾಗಿದ್ದು ಅಲ್ಲಿ ಮಾಂಸವನ್ನು ಖರೀದಿ ಮಾಡಬೇಕೆಂದು ಕೆಲ ಸಂಘಟನೆ ಮುಖಂಡರು ಜನರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ನಾಳೆ(ಭಾನುವಾರ) ನಡೆಯುವ ಹೊಸತೊಡಕಿಗೆ ಹಿಂದೂಗಳ ಅಂಗಡಿಗಳಲ್ಲೇ ಮಾಂಸ ಖರೀದಿಗೆ ಸಂಘಟನೆ ಮುಖಂಡರ ಕರೆ ನೀಡಿದ್ದಾರೆ. 

ಅಂಗಡಿಗಳ ಹೆಸರು ಹಾಕಿ ವ್ಯಾಪಾರ ಮಾಡುವಂತೆ ಮನವಿ 
ಮಾಂಸ ಖರೀದಿಯನ್ನು ಹಿಂದೂಗಳ ಅಂಗಡಿಯಲ್ಲೇ ಖರೀದಿಸುವಂತೆ ಕರಪತ್ರವನ್ನು ಹಂಚಿದ್ದ ಬಜರಂಗದಳ  ಇದೀಗ ಸಾಮಾಜಿಕ ಜಾಲ ತಾಣವನ್ನು ಕೂಡ ಬಳಕೆ ಮಾಡಕೊಳ್ಳುತ್ತಿದೆ. ನಗರದ ಜನರು ಆನೈ ಲೈನ್ ಮೂಲಕ ಅಥವಾ ಪೋನ್ ಮಾಡಿ ಅರ್ಡರ್ ನೀಡಬಹುದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲಾದ್ಯಾಂತ ಕೆಲ ಮಾಂಸದ ಅಂಗಡಿಗಳಲ್ಲಿ  ಝಟ್ಕಾ ಕಟ್ ಸ್ಟಿಕರ್ ಹಾಕಲಾಗಿದ್ದು ಇಲ್ಲಿ ಮಾಂಸ ಖರೀದಿ ಮಾಡುವಂತೆ ವಿನಂತಿಸಿದ್ದಾರೆ. 

ಗೋವನ್ನು ಕಡಿದು ತಿನ್ನುವವರ ಬಳಿ ವ್ಯಾಪಾರ ನಿಲ್ಲಿಸೋಣ
 ಹಲಾಲ್ ಬ್ಯಾನ್ ಅಭಿಯಾನದಲ್ಲಿ ನಾವು ಪೂಜಿಸುವ ಗೋವನ್ನ ಕಡಿದು ತಿನ್ನುವವರ ಬಳಿ ವ್ಯಾಪರ ನಿಲ್ಲಿಸೋಣ ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳ ಕರೆ ನೀಡಿದೆ. ಸಂಘಪರಿಹಾರದಿಂದ ಬಿಡುಗಡೆ ಆಗಿರುವ ಕರಪತ್ರ ದಲ್ಲಿಹಿಂದೂಗಳು ಜಟ್ಕಾಕಟ್ ವಿಧಾನ ವೈಜ್ಞಾನಿಕವಾಗಿದೆ,  ಹಲಾಲ್ ಮಾಂಸ ಎಂದರೆನೂ?ಹಲಾಲ್ ಮಾಂಸ ಸೇವನೆಯಿಂದ ಅಗುವ ಪರಿಣಾಮದ ಬಗ್ಗೆ  ಪ್ರಿಂಟ್ ಮಾಡಲಾಗಿದೆ.ಒಟ್ಟಾರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಜಾಬ್ ವಿವಾದದಿಂದ ಉಂಟಾಗಿರುವ ವ್ಯಾಪಾರ ಸಂಘರ್ಷದ ಪರಿಣಾಮ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಇದರ ನಡುವೆ ಈಗ ಯುಗಾದಿ ಹಬ್ಬದ ಮರುದಿನ ನಡೆಯುವಂತಹ ಹಬ್ಬದ ಮೇಲೆ ಪರಿಣಾಮ ಬೀರಿದೆ ಹಲಾಲ್ ಕಟ್ ಅಭಿಯಾನದ ಕಾವು ಪಡೆದಿದೆ .

click me!