ಹಲಾಲ್ v/s ಝಟ್ಕಾ ಕಟ್, ಸ್ಟನ್ನಿಂಗ್ ಕಡ್ಡಾಯ ಆದೇಶ ಹೊರಡಿಸಿಲ್ಲ: ಪ್ರಭು ಚವ್ಹಾಣ್ ಸ್ಪಷ್ಟನೆ
* ಹಲಾಲ್ v/s ಝಟ್ಕಾ ಕಟ್ ವಿವಾದಕ್ಕೆ ಪಶುಸಂಗೋಪನಾ ಇಲಾಖೆ ಎಂಟ್ರಿ,
* ಪಶುಪಾಲನಾ ಇಲಾಖೆಯ ಆದೇಶ ಪ್ರತಿಯೊಂದು ವರಲ್
* ಸ್ಟನ್ನಿಂಗ್ ಕಡ್ಡಾಯ ಆದೇಶ ಹೊರಡಿಸಿಲ್ಲ ಎಂದ ಸಚಿವ ಪ್ರಭು ಚವ್ಹಾಣ್
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಏ.2): ಹಲಾಲ್ ಕಟ್ v/s ಝಟ್ಕಾ ಕಟ್ ನಡುವಿನ ವಿವಾದದ ಮಧ್ಯೆ ಪಶುಪಾಲನಾ ಇಲಾಖೆ ಎಂಟ್ರಿ ಕೊಟ್ಟಿದ್ದು, ಆದೇಶ ಪ್ರತಿಯೊಂದು ವರಲ್ ಆಗುತ್ತಿದೆ. ಇನ್ಮುಂದೆ ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವಾಗ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವವರು ಇನ್ಮುಂದೆ ಸ್ಟನ್ನಿಂಗ್ (Stunning) ವಿಧಾನ ಕಡ್ಡಾಯಗೊಳಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಆದೇಶಿಸಿದ್ದಾರೆ. ಆದ್ರೆ, ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.
ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ. ನಮ್ಮ ಇಲಾಖೆಯಿಂದ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಪ್ರಭು ಚವ್ಹಾಣ್ ಹೇಳಿಕೆ ನೀಡಿದ್ದಾರೆ. ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ಪತ್ರ ಬರೆದಿದ್ದಾರೆ ಅಷ್ಟೇ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಪ್ರಭು ಚವ್ಹಾಣ್ ಸ್ಪಷ್ಟನೆ ನೀಡಿದರು.
Halal Row: ಕರ್ನಾಟಕದ ಮತ್ತಷ್ಟು ಕಡೆ ಹಲಾಲ್ ಬಾಯ್ಕಾಟ್ ಕೂಗು: ಕರಪತ್ರ, ವಿಡಿಯೋ ಅಭಿಯಾನ
2001 ರ PCA (Prevention of Cruelty to Animals Act) ಕಾಯ್ದೆಯ ಸೆಕ್ಷನ್ 6 ಸಬ್ ಸೆಕ್ಷನ್ 4 ರ ಪ್ರಕಾರ ಅಧಿಕೃತ ವಧಾಗಾರ/ಕೋಳಿ ಅಂಗಡಿಗಳಲ್ಲಿ ಸ್ಟನ್ನಿಂಗ್ ಮಾಡಿ ಪ್ರಜ್ಞೆ ತಪ್ಪಿಸಿ ವಧೆ ಮಾಡಬೇಕು. ಅಲ್ಲದೇ ಪರವಾನಗಿ ನೀಡುವಾಗ ಸ್ಟನ್ನಿಂಗ್ ಫೆಸಿಲಿಟಿ ಇರುವುದನ್ನ ಪರಿಶೀಲಿಸಿ ಪರವಾನಗಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ರೂಲ್ಸ್ ಬ್ರೇಕ್ ಮಾಡೋರಿಗೆ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸುವ ಅವಕಾಶವೂ ಇದೆ. ಅಲ್ಲದೇ ಕಾಯ್ದೆಯಡಿ ಪ್ರಾಣಿ ಹಿಂಸೆಯ ಕೇಸ್ ಕೂಡಾ ದಾಖಲು ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಹೀಗಾಗಿ ಆಹಾರಕ್ಕಾಗಿ ಕೋಳಿ ಕುರಿ ವಧೆ ಮಾಡೋವ್ರು ಈ ನಿಯಮ ಅನುಸರಿಸಬೇಕು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಆದೇಶ ಪತ್ರದಲ್ಲಿ ಹೇಳಿದ್ದಾರೆ.
ಏನಿದು ಸ್ಟನ್ನಿಂಗ್ ಪ್ರಾಣಿ ವಧೆ ವಿಧಾನ..?
ಇದು ಎಲೆಕ್ಟ್ರಿಕ್ ಸ್ಟನ್ನಿಂಗ್ ಮಷಿನ್ ಬಳಸಿ ಪ್ರಾಣಿ ವಧೆ ಮಾಡುವ ವಿಧಾನ. ಕುರಿ, ಕೋಳಿಯ ತಲೆಗೆ ಸ್ಟನ್ನಿಂಗ್ ಮಷಿನ್ ಬಳಸಿದಾಗ ಮೆದುಳು ನಿಷ್ಕ್ರಿಯಗೊಳ್ಳುತ್ತವೆ. ಒಂದು ರೀತಿ ಎಲೆಕ್ಟ್ರಿಕ್ ಶಾಕ್ ಕೊಟ್ಟ ಹಾಗೆ. ಈ ವೇಳೆ ಕುರಿ, ಕೋಳಿಯ ಪ್ರಜ್ಞೆ ತಪ್ಪುತ್ತದೆ. ಈ ವೇಳೆ ವಧೆ ಮಾಡುವುದರಿಂದ ಪ್ರಾಣಿಗಳಿಗೆ ನೋವಾಗುವುದಿಲ್ಲ. ಯಾವುದೇ ಮಾಂಸದ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ, ಅನೇಕ ದೂರುಗಳು ಪಶುಪಾಲನಾ ಇಲಾಖೆಗೆ ಬಂದಿತ್ತು.
ಹಲಾಲ್ ನಿಷೇಧಕ್ಕೆ ಮೊದಲ ಹೆಜ್ಜೆ..?
ರಾಜ್ಯದಲ್ಲಿ ಹಲಾಲ್ ನಿಷೇಧಕ್ಕೆ ಸರ್ಕಾರ ಕಾನೂನಿನ ಅಸ್ತ್ರ ಪ್ರಯೋಗಿಸಿತಾ ಎಂಬ ಗುಮಾನಿ ಎದ್ದಿದೆ. Prevention of Cruelty to Animals Act ಕಾಯ್ದೆಯ ಅಂಶಗಳನ್ನ ಇಟ್ಟುಕೊಂಡು ಈ ಆದೇಶ ಮಾಡಲಾಗಿದೆ. ಪ್ರಾಣಿಗಳಿಗೆ ಹಿಂಸೆಯಾಗದಂತೆ ವಧೆ ಮಾಡಬೇಕು ಎಂದು PCA ಕಾಯ್ದೆಯಲ್ಲಿದೆ. ಇದನ್ನೇ ಬಳಸಿ ಹಾಲಾಲ್ ನಿಷೇಧ ಮಾಡಲು ಸರ್ಕಾರ ಮುಂದಾಗಿದೆ ಎಂಬ ಟೀಕೆ ಕೂಡ ವ್ಯಕ್ತವಾಗಿದೆ.