ಜಿಲ್ಲೆಯ ವಿವಾದಿತ ದತ್ತಪೀಠದಲ್ಲಿ ಮತ್ತೊಂದು ವಿವಾದದ ಕಿಚ್ಚು ಹೊತ್ತಿದೆ. ಮಾಂಸದೂಟ, ಗೋರಿಗಳಿಗೆ ಪೂಜೆ ಸಲ್ಲಿಸಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದ ಸೃಷ್ಠಿಯಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.22): ಜಿಲ್ಲೆಯ ವಿವಾದಿತ ದತ್ತಪೀಠದಲ್ಲಿ ಮತ್ತೊಂದು ವಿವಾದದ ಕಿಚ್ಚು ಹೊತ್ತಿದೆ. ಮಾಂಸದೂಟ, ಗೋರಿಗಳಿಗೆ ಪೂಜೆ ಸಲ್ಲಿಸಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದ ಸೃಷ್ಠಿಯಾಗಿದೆ. ಮುಜರಾಯಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ದತ್ತಪೀಠದ ಆವರಣದಲ್ಲೇ ಮುಸ್ಲಿಮರು ನಮಾಜ್ ಮಾಡಿ ಕಾನೂನನ್ನು ಗಾಳಿ ತೂರಿದ್ದಾರೆ. ಆವರಣ ಮಾತ್ರವಲ್ಲ ಗುಹೆಯ ಒಳಗೂ ಮುಸ್ಲಿಮರಿಂದ ನಮಾಜ್ ಮಾಡಿರುವ ವಿಡಿಯೋ ಇದೀಗ ವಿವಾದ ಕಿಚ್ಚು ಹೊತ್ತಿಸಿದೆ.
ಶ್ರೀ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಕಾನೂನು ಗಾಳಿಗೆ: ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಕಾನೂನು ಗಾಳಿಗೆ ತೂರಲಾಗಿದೆ. ಒಂದು ಮೇಲೆ ಒಂದು ವಿವಾದ ಹೊರಬರುತ್ತಿದೆ. ವಿವಾದಿತ ಜಾಗದಲ್ಲಿ ಕೆಲ ಮುಸ್ಲಿಮರು ನಡೆಸಿರುವ ನಮಾಜ್ ವಿಡಿಯೋ ವಿವಾದ ಕಿಡಿ ಹೊತ್ತಿಸಿದ್ರೆ ಮುಸ್ಲಿಮರು ಇದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಅದು ವಿವಾದಿತ ಪ್ರದೇಶವೇ ಅಲ್ಲ ಅಂತಿದ್ದಾರೆ. ಹಿಂದೂಗಳು ಹಾಗಾದ್ರೆ ಅಂದು ನಮ್ಮ ಮೇಲೇಕೆ ಕೇಸ್ ಹಾಕಿದ್ರು ಅಂತ ಪ್ರಶ್ನಿಸಿ ಜಿಲ್ಲಾಡಳಿತ ವಿರುದ್ದ ಗರಂ ಆಗಿದ್ದಾರೆ.
Chikkamagaluru ರಸ್ತೆಗೆ ಬಂಡೆ ಹಾಕಿ ಬೀಗ ಜಡಿದಿದ್ದ ಪ್ರಕರಣ, ಸ್ಥಳಿಯರಿಂದ ಬಂಡೆ ತೆರವು
ದತ್ತಪೀಠದ ಧರ್ಮ ದಂಗಲ್‌ನ ಆರಂಭವೂ ಅಂತ್ಯವೂ ಎನ್ನುವುದೇ ಇದೀಗ ಯಕ್ಷ ಪ್ರಶ್ನೆ: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ಚಿಕ್ಕಮಗಳೂರು ದತ್ತಪೀಠದಲ್ಲಿ ಒಂದಾದ ಮೇಲೊಂದು ವಿವಾದ ಹೊರಬರ್ತಿದ್ದು, ವಿವಾದವೂ ದೊಡ್ಡದ್ದಾಗ್ತಿದೆ. ಸಂಘಪರಿವಾರ, ಶ್ರೀರಾಮ ಸೇನೆದಿಂದ ದತ್ತಜಯಂತಿ ಸಮಯದಲ್ಲಿ ಪ್ರತಿವರ್ಷ ನಡೆಯುವ ತಾತ್ಕಲಿಕ ಶೆಡ್‌ನಲ್ಲಿ ಮಾಂಸದೂಟ ನಡೆದಿತ್ತು. ಇದೇ ತಿಂಗಳು 16ರಂದು ಹೋಮ ಮಂಟಪದಲ್ಲಿ ಮಾಂಸದೂಟದ ವಿಡಿಯೋ ವೈರಲ್ ಆಗಿತ್ತು. ಅದರ ಜೊತೆಗೆ ಗುಹೆಯಲ್ಲಿ ಗೋರಿ ಪೂಜೆಯನ್ನು ನಡೆಸಲಾಗಿತ್ತು.
ಇದರಿಂದ ಹಿಂದೂ ಪರ ಸಂಘಟನೆ ಮುಖಂಡರು ಜಿಲ್ಲಾಡಳಿತದ ವಿರುದ್ದ ಕಿಡಿಕಾರಿದ್ದರು.ಇದರಿಂದ ಎಚ್ಚೇತಗೊಂಡ ಜಿಲ್ಲಾಡಳಿತ ತಾತ್ಕಲಿಕ ಶೆಡ್‌ನ್ನು ಕ್ಲೀನ್ ಮಾಡಿ ಯಾರು ಹೋಗದಂತೆ ತಾತ್ಕಲಿಕವಾಗಿ ಬಂದ್ ಮಾಡಿತ್ತು. ಇದರ ಬಳಿಕ ಇದೀಗ ಪೀಠದ ಆವರಣದಲ್ಲಿ ನಮಾಜ್ ಮಾಡುವ ದ್ರಶ್ಯ ಹಿಂದೂ ಸಂಘಟಕರ ಕಣ್ಣನ್ನ ಕೆಂಪಾಗಿಸಿದೆ. ಮಾಂಸದೂಟ, ಪೂಜೆ ಮಾಡಿದ ವಿಡಿಯೋ ನೋಡಿದ ಹಿಂದೂ ಪರ ಸಂಘಟನೆ ಮುಖಂಡರು ಜಿಲ್ಲಾಡಳಿತದ ವಿರುದ್ದ ಕಿಡಿಕಾರಿದ್ದರು. ಇದರ ಜೊತೆಗೆ ನಮಾಜ್ ಮಾಡುವ ದ್ರಶ್ಯವೂ ಹಿಂದೂ ಪರ ಸಂಘಟನೆ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದೊಂದು ವಾರದಿಂದ ಕಾನೂನು-ಕಟ್ಟಲೆಗಳಿಗೂ ಮೀರಿದ ಇಲ್ಲಿನ ಬೆಳವಣಿಗೆ: ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ. ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೊ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರ. ಆದ್ರೆ, ಕಳೆದೊಂದು ವಾರದಿಂದ ಕಾನೂನು-ಕಟ್ಟಲೆಗಳಿಗೂ ಮೀರಿದ ಇಲ್ಲಿನ ಬೆಳವಣಿಗೆಯಿಂದ ಕಾಫಿನಾಡಲ್ಲಿ ಧರ್ಮದ ಗೋಡೆ ದೊಡ್ಡದ್ದಾಗ್ತಿರುವಂತೆ ಕಾಣುತ್ತಿದೆ. ನಿಷೇಧಿತ ಹಾಗೂ ಹಿಂದೂಗಳ ಹೋಮ ಮಂಟಪದಲ್ಲಿ ಮಾಂಸದೂಟ, ಗೋರಿಪೂಜೆ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿ ಸರ್ಕಾರ ಹಾಗೂ ಮುಸ್ಲಿಮರ ವಿರುದ್ಧ ಕಿಡಿಕಾರಿದ್ದರು. ಅದರ ಬೆನ್ನಲ್ಲೇ ಇಂದು ಅದೇ ನಿಷೇಧಿತ ಪ್ರದೇಶದಲ್ಲಿ ನಮಾಜ್ ಮಾಡುವ ವಿಡಿಯೋ ಕೂಡ ವಿವಾದ ಕಿಡಿ ಹೊತ್ತಿಸಿದೆ.
ಅದನ್ನ ಮುಸ್ಲಿಮರು ಸಮರ್ಥಿಕೊಳ್ತಿದ್ದಾರೆ. 1975ರ ಹಿಂದಿನ ಆಚರಣೆಯ ಜಾರಿಯಲ್ಲಿರಬೇಕು. ಹೊಸ ಆಚರಣೆಗೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಹಾಗಾದ್ರೆ, ನೀವು ಹೇಗೆ ದತ್ತಜಯಂತಿ, ದತ್ತಮಾಲೆ, ಅನುಸೂಯ ಜಯಂತಿ, ಹುಣ್ಣಿಮೆ ಪೂಜೆ ಮಾಡುತ್ತೀರಾ ಎಂದು ಮುಸ್ಲಿಮರು ಪ್ರಶ್ನಿಸಿದ್ದಾರೆ.ಸುಪ್ರಿಂಕೋರ್ಟ್ ಆಹಾರದ ಪದ್ಧತಿ ಮೇಲಾಗಲಿ, ನಮಾಜ್ ಮೇಲಾಗಲಿ ನಿರ್ಬಂಧ ಹೇರಿಲ್ಲ. ಈ ವಿವಾದಕ್ಕೆ ಜಿಲ್ಲಾಡಳಿತವೇ ನೇರ ಕಾರಣ. ಹೊರಗಿನ ಭಕ್ತರು ಬರುತ್ತಾರೆ. ಅವರಿಗೆ ಗೊತ್ತಿರುತ್ತೋ-ಗೊತ್ತಿರಲ್ವೋ. ನ್ಯಾಯಾಲಯದ ಆದೇಶವನ್ನ ದತ್ತಪೀಠದಲ್ಲಿ ಬೋರ್ಡ್ ಹಾಕಿಸಬೇಕೆಂದು ಸರ್ಕಾರದ ವಿರುದ್ಧವೇ ಕೋಮು ಸೌಹಾರ್ದ ವೇದಿಕೆ ಮುಖಂಡ ಗೌಸ್ ಮೊಹಿನುದ್ದಿನ್ ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲಾಡಳಿತದಿಂದ ಸಮಗ್ರ ತನಿಖೆ: ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವಿವಾದಿತ ಜಾಗದಲ್ಲಿ ನಮಾಜ್ ಮಾಡಿರುವ ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಗೊಂಡ ಜಿಲ್ಲಾಡಳಿತ ತುರ್ತು ಸಭೆ ನಡೆಸಿತ್ತು. ಜಿಲ್ಲಾಧಿಕಾರಿ ಕೆ ಎನ್ ರಮೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಮುಜಾರಾಯಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪ ,ಎಸ್ ಪಿ ಅಕ್ಷಯ್ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಭಾಗಿಯಾಗಿದ್ದರು. ಮುಜಾರಾಯಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಎಸ್ ರಮೇಶ್ ಎಲ್ಲ ಕಡತಗಳನ್ನು ಕಚೇರಿಗೆ ತರೆಸಿಕೊಂಡರು.
ಮಾಂಸದೂಟದ ವಿಡಿಯೋ ನಂತ್ರ ನಮಾಜ್ ಮಾಡೋ ವಿಡಿಯೋ ಬಗ್ಗೆ ಮುಜಾರಾಯಿ ಇಲಾಖೆಯ ಅಧಿಕಾರಿಗಳಿಂಧ ಮಾಹಿತಿಯನ್ನು ಪಡೆದರು. ಸಂಪೂರ್ಣ ಮಾಹಿತಿ ಕಲೆಹಾಕಿದರು. ನಂತರ ಮಾತಾಡಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಎಲ್ಲಾ ಧರ್ಮದವರಿಗೂ ಪ್ರಾರ್ಥನೆ ಮಾಡಲು ಹಾಲ್ ಇದೆ. ಅಲ್ಲೇ ಮಾಡಬೇಕು.ಇದೀಗ ನಮಾಜ್ ಮಾಡಿರುವ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದಿದ್ದು, ಗರ್ಭಗುಡಿ, ಪೂಜೆ ಹಾಗೂ ಉಮೇದುವಾರಿಕೆ ವಿಷಯ ಮಾತ್ರ ಕೋರ್ಟ್ ಮುಂದಿರೋ ವಿವಾದ ಎಂದಿದ್ದಾರೆ. ಈಗಿನ ನಮಾಜ್ ವಿಡಿಯೋ ನಿಷೇಧಿತ ಪ್ರದೇಶದ ಒಳಗೆ ಬರೋದಿಲ್ಲ, ಈ ಜಾಗ ದೂರ ಇದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳ ಹೇಳಿಕೆ ಹಿಂದೂ ಸಂಘಟನೆ ಮುಖಂಡರ ಗರಂ: ನಿಷೇಧ ಪ್ರದೇಶದಲ್ಲಿ ನಮಾಜ್ ಮಾಡಿಲ್ಲ ಎನ್ನುವ ಜಿಲ್ಲಾಧಿಕಾರಿಗಳ ಹೇಳಿಕೆ ಹಿಂದೂ ಪರ ಸಂಘಟನೆ ಮುಖಂಡರು ಖಂಡಿಸಿದರು. ಈ ಬಗ್ಗೆ ಮಾತಾಡಿದ ಬಜರಂಗದಳ ಮುಖಂಡ ಶಾಮ್ ವಿ ಗೌಡ ಇದೀಗ ಜಾಗಕ್ಕೆ ಕಳೆದ ಎರಡ್ಮೂರು ವರ್ಷಗಳ ಹಿಂದೆ ಬೇಲಿ ಹಾರಿ ನಿಷೇಧಿತ ಪ್ರದೇಶಕ್ಕೆ ಹೋಗಿದ್ದಾರೆಂದು ಹಿಂದೂ ಕಾರ್ಯಕರ್ತರ ಮೇಲೆ ಏಕೆ ಕೇಸ್ ಮಾಡಿದ್ರಿ ಎಂದು ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ. ಮುಜರಾಯಿ ಇಲಾಖೆ ಕೀ ಯಾರ ಬಳಿ ಇರುತ್ತೆ. ಮುಜರಾಯಿ ಇಲಾಖೆ ಅಧಿಕಾರಿಗಳ ಸಹಾಯವಿಲ್ಲದೆ ಅಲ್ಲಿಗೆ ನಮಾಜ್ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದನ್ನೆಲ್ಲಾ ಸಹಿಸಿಕೊಂಡು ಸಾಕಾಗಿದೆ.
Chikkamagaluru: ಮಲೆನಾಡಿನ ಭಾಗದಲ್ಲಿ ಮುಂದುವರಿದ ಮಳೆ: ಮಳೆಯಿಂದ ಜನಜೀವನ ಅಸ್ತವ್ಯಸ್ತ
ಮುಂದಿನ ದತ್ತಜಯಂತಿಯಲ್ಲಿ 2004ರ ಹಿಂದಿನ ತುಳಸಿಕಟ್ಟೆ ಇದ್ದ ಜಾಗದಲ್ಲೇ ಹೋಮ ಮಾಡೋದು ಶತಸಿದ್ಧ ಎಂದು ಜಿಲ್ಲಾಡಳಿತಕ್ಕೆ ಸವಾಲ್ ಹಾಕಿದ್ದಾರೆ.ದತ್ತಪೀಠದ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯವೇ ಈ ವಾದ-ವಿವಾದ-ವೈಮನಸ್ಸಿಗೆ ಕಾರಣವಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಅತ್ತ ಹಿಂದೂಗಳು ಜಿಲ್ಲಾಡಳಿತ-ಮುಜಾರಾಯಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಇತ್ತ ಮುಸ್ಲಿಮರು ಇದಕ್ಕೆಲ್ಲಾ ಜಿಲ್ಲಾಡಳಿತವೇ ಕಾರಣ ಅಂತಿದ್ದಾರೆ. ಜಿಲ್ಲಾಡಳಿತ ಮಾತ್ರ ಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ. ಆಗೋಕೆ ಬಿಡೋದಿಲ್ಲ ಅಂತಿದ್ದಾರೆ. ಹಾಗಾದ್ರೆ, ಈ ವಿವಾದಕ್ಕೆ ಕಾರಣ-ಮೂಲ ಏನು ಮತ್ತೊಂದು ಪ್ರಶ್ನೆಯೂ ಮೂಡೋದು ಸಹಜ. ಹಾಗಾಗಿ, ಜಿಲ್ಲಾಡಳಿತ ದತ್ತಪೀಠದ ವಿಚಾರವಾಗಿ ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಅನ್ಸತ್ತೆ. ಜಿಲ್ಲೆಯ ಜನ ಕೂಡ ಅದನ್ನೇ ಬಯಸುತ್ತಿದ್ದಾರೆ.