ಮೀಸಲಾತಿ ಹೋರಾಟಕ್ಕೆ ಸಮುದಾಯದ ಮಹಾನ್‌ ವ್ಯಕ್ತಿಯೊಬ್ಬರು ಅಡ್ಡಿ, ಕೂಡಲ ಸಂಗಮ ಸ್ವಾಮೀಜಿ ಆರೋಪ!

By Gowthami K  |  First Published Sep 19, 2022, 4:14 PM IST

ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರದಲ್ಲಿ ಮಹಾನ್ ರಾಜಕೀಯ ಮುಖಂಡರೊಬ್ಬರು ಅಡ್ಡಿಪಡಿಸುತ್ತಿದ್ದು,  ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ  ಅವರ ಹೆಸರನ್ನು ಶೀಘ್ರ ಬಹಿರಂಗ ಪಡಿಸುವುದಾಗಿ ಕೂಡಲಸಂಗಮ  ಸ್ವಾಮೀಜಿ ಆರೋಪಿಸಿದ್ದಾರೆ.


ಹುಬ್ಬಳ್ಳಿ (ಸೆ.19): ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರದಲ್ಲಿ ಮಹಾನ್ ರಾಜಕೀಯ ಮುಖಂಡರೊಬ್ಬರು ಅಡ್ಡಿಪಡಿಸುತ್ತಿದ್ದು, ಮುಖ್ಯಮಂತ್ರಿಗಳ‌ ಮೇಲೆ ಒತ್ತಡ ಹಾಕಿ ಮೀಸಲಾತಿ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ  ಅವರ ಹೆಸರನ್ನು ಶೀಘ್ರ ಬಹಿರಂಗ ಪಡಿಸುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದ ಅವರು, ಮೀಸಲಾತಿಗೆ ಸಂಬಂಧಪಟ್ಟಂತೆ ನಾಲ್ಕು ಬಾರಿ ಕೊಟ್ಟ ಮಾತಿಗೆ ಸರ್ಕಾರ ತಪ್ಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಮುಖಂಡರೊಬ್ಬರು ಒತ್ತಡ ಹೇರುತ್ತಿದ್ದಾರೆ. ಅವರ ಹೆಸರನ್ನು ಶಿಗ್ಗಾಂವಿ ಹೋರಾಟದಲ್ಲಿ ಬಹಿರಂಗಪಡಿಸಲಾಗುವುದು ಎಂದರು. ಸರ್ಕಾರ ಮತ್ತೆ ಗಡುವು ಕೇಳಿದರೇ ನಾವು ಒಪ್ಪುವುದಿಲ್ಲ. ಹಿಂದೂಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದಿಲ್ಲ. ಸರ್ವೇ ಕೂಡಾ ನಡೆಸುತ್ತಿಲ್ಲ. ಸರ್ಕಾರದ ಈ ನಡೆಗೆ ಪಂಚಮಸಾಲಿ ಸಮುದಾಯ ಬೇಸತ್ತಿದ್ದಾರೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಅಕ್ಟೋಬರ್, ಇಲ್ಲವೇ ನವೆಂಬರ್ ತಿಂಗಳಲ್ಲಿ 25 ಲಕ್ಷ ಜನರೊಂದಿಗೆ ವಿಧಾನಸಭೆಗೆ ಮುತ್ತಿಗೆ ಹಾಕಿ, ಮಾಡು ಇಲ್ಲವೇ ಮಡಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಇದು ಪಕ್ಷಾತೀತ ಹೋರಾಟ ಆಗಿದ್ದು, ಬಿಜೆಪಿಯ ಶಾಸಕರು, ಸಚಿವರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಚರ್ಚೆಗೆ ಸಮುದಾಯದ ಹದಿನೈದು ಶಾಸಕರು ಸಭಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಕಾದುನೋಡಬೇಕಿದೆ ಎಂದರು. ಇನ್ನೂ ಹೋರಾಟಗಾರರ ಮೇಲೆ ಇಡಿ ದಾಳಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿಸ ಕಾಶಪನವರ್ ಯಾವ ಇಡಿ, ಐಟಿ ಬಂದರೂ ಹೆದರುವದಿಲ್ಲ ಎಂದರು.

Latest Videos

undefined

ಮೀಸಲಾತಿ ಕೊಡಿಸುವುದು ಪೀಠದ ಜವಾಬ್ದಾರಿ; ವಚನಾನಂದ ಸ್ವಾಮೀಜಿ

ನಾಳೆ ಶಿಗ್ಗಾಂವಿ ಸಿಎಂ ಮನೆಗೆ ಮುಂದೆ ಧರಣಿ ಸತ್ಯಾಗ್ರಹ: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಹೋರಾಟದ ವೇಳೆ ಕೊಟ್ಟ ಮಾತಿಗೆ ಸರ್ಕಾರ  ತಪ್ಪಿದೆ. ಈ ಹಿನ್ನಲೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ  ನಾಳೆ ಬೆಳಗ್ಗೆ 9 ಗಂಟೆಗೆ  ಮುಖ್ಯಮಂತ್ರಿ ಬೊಮ್ಮಾಯಿ ಅವರ  ಶಿಗ್ಗಾವಿಯ ನಿವಾಸದ ಮುಂದೆ ಒಂದು ದಿನದ ಬೃಹತ್  ಧರಣಿ ಸತ್ಯಾಗ್ರಹ ಮಾಡಲಾಗುವುದು.  ನಾಳೆ ಬೆಳಿಗ್ಗೆ ಶಿಗ್ಗಾಂವಿಯ ಚೆನ್ನಮ್ಮನ ವೃತ್ತದಿಂದ ರ್ಯಾಲಿ ಮೂಲಕ ಒಂದು ಲಕ್ಷ ಪಂಚಮಸಾಲಿಗರೊಂದಿಗೆ  ಮುಖ್ಯಮಂತ್ರಿಗಳ ಮನೆ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.

2ಎ ಮೀಸಲಿಗಾಗಿ ಸೆ.20ಕ್ಕೆ ಸಿಎಂ ಮನೆ ಮುಂದೆ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ

‘ಸ್ವಾಮೀಜಿ ಯಾಕೆ ಸಿಎಂರನ್ನೇ ಟಾರ್ಗೆಟ್‌ ಮಾಡ್ತಿದ್ದಾರೆ?’: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌, ಸ್ವಾಮೀಜಿ ಅದ್ಯಾವ ಕಾರಣಕ್ಕೆ ಸಿಎಂ ಅವರನ್ನೇ ಟಾರ್ಗೆಟ್‌ ಮಾಡಿ ಹೋರಾಟ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಮಾಡಲಿ ಅದಕ್ಕೆ ನನ್ನ ಬೆಂಬಲವಿದೆ. ಆದರೆ, ಶಿಗ್ಗಾಂವಿಯಲ್ಲಿಯೇ ಸ್ವಾಮೀಜಿ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಮೀಸಲಾತಿ ವಿಷಯದಲ್ಲಿ ಈಗಾಗಲೇ ನಮ್ಮ ಸರ್ಕಾರ ಶಾಶ್ವತ ಸಮಗ್ರ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಈ ವಿಷಯದಲ್ಲಿ ಮತ್ತೆ ಯಾವುದೇ ಗೊಂದಲ ಉಂಟಾಗದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

click me!