ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಒತ್ತಾಯಿಸಿ ಫೆ.20ರಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಹೇಳಿದರು.
ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಒತ್ತಾಯಿಸಿ ಫೆ.20ರಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಹೇಳಿದರು.
ಹನಕೆರೆ ಸಮೀಪ ಅಂಡರ್‌ಪಾಸ್ ನಿರ್ಮಾಣಕ್ಕೆ ಹಲವು ಬಾರಿ ಒತ್ತಾಯಿಸಿದ್ದು, ಗ್ರಾಮದಿಂದ ಸುಮಾರು 600 ಮೀಟರ್ ದೂರದಲ್ಲಿ ನಿರ್ಮಾಣ ಮಾಡಿರುವುದರಿಂದ 25ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಶಾಲೆ, , ಆಸ್ಪತ್ರೆ ಸೇರಿದಂತೆ ದಿನನಿತ್ಯದ ಕೆಲಸಕ್ಕೆ ಹೋಗಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದಾಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಸಮಸ್ಯೆಗೆ ಪರಿಹಾರ ದೊರಕಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
undefined
ಹನಕೆರೆ ಸೇರಿದಂತೆ ಅಕ್ಕಪಕ್ಕದ ಗ್ರಾಮಕ್ಕೆ ಹೋಗುವವರು ಬಳಿಗೆ ಹೋಗಿ ಬರಬೇಕು. ಈ ಸಮಯದಲ್ಲಿ ಕಳ್ಳತನ, ದರೋಡೆ ನಡೆಯುವ ಆತಂಕ ಜನರಲ್ಲಿ ಎದುರಾಗಿದೆ. ಇತ್ತೀಚೆಗೆ ಮಲ್ಲಯ್ಯನ ಬೋರೆ ಸಮೀಪ ದರೋಡೆ ನಡೆದಿತ್ತು. ಇದರಿಂದಾಗಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಅಂದು ಹೆದ್ದಾರಿಯಲ್ಲಿ ಜಾನುವಾರುಗಳು, ಎತ್ತಿನಗಾಡಿಗಳೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ. ಸುಮಾರು 20 ಗ್ರಾಮದ ಜನರು ಭಾಗವಹಿಸಲಿದ್ದಾರೆ. ಸಮಸ್ಯೆ ಪರಿಹರಿಸುವವರೆಗೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಂದಿನ ಬೆಳವಣಿಗೆ ಗಮನಿಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದೇಗೌಡ ಮಾತನಾಡಿ, ಇದು ಪಕ್ಷಾತೀತವಾಗಿ ನಡೆಯುತ್ತಿರುವ ಪ್ರತಿಭಟನೆ. ನಮಗೆ ಸಮಸ್ಯೆ ಬಗೆಹರಿಸಬೇಕು. ಮೇಲ್ಸೆತುವೆ ಪ್ರಾರಂಭಿಸುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಹೇಶ್, ರವಿ, ಸತೀಶ್, ಶಶಿ, ನಾಗರಾಜು, ವಿಶ್ವನಾಥ್ ಇದ್ದರು.
ಟೋಲ್ ನಿಗದಿ
ಮೈಸೂರು (ಫೆ.13): ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬಹುತೇಕ ಪೂರ್ಣವಾಗುವ ಸ್ಥಿತಿಯಲ್ಲಿದೆ. ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ರಸ್ತೆ ಲೋಕಾರ್ಪಣೆ ಆಗಲಿದೆ. ಬೆಂಗಳೂರು - ಮೈಸೂರು ಹೈವೆ ಲೋಕಾರ್ಪಣೆ ವೇಳೆಯೆ ಪ್ರಧಾನಿಗಳು ಕುಶಾಲನಗರ - ಮೈಸೂರು ನಡುವಿನ ಹೆದ್ದಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೆ ನಿರ್ಮಾಣ ಮಾಡಲಿದ್ದು, ಶಂಕು ಸ್ಥಾಪನೆಯಾದ 24 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣವಾಗಲಿದೆ ಎಂದು ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಮೈಸೂರು - ಬೆಂಗಳೂರು ಹೈವೇ ಟೋಲ್ ನಿಗದಿ ವಿಚಾರ: ಮೈಸೂರು - ಬೆಂಗಳೂರು ಹೈವೇ ಟೋಲ್ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಂಹ, ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದು. ಅಂದಾಜಿನ ಟೋಲ್ ಫ್ಹೀಜ್ ಪಟ್ಟಿ. ನನ್ನ ಪ್ರಕಾರ ಎರಡು ಕಡೆ ಸೇರಿ ಬೆಂಗಳೂರಿನಿಂದ ಮೈಸೂರಿಗೆ 250 ರೂ. ಟೋಲ್ ನಿಗದಿ ಆಗಬಹುದು. ಫ್ಲೈ ಓವರ್ ಗಳು ಬಂದಾಗ ಸಾಮಾನ್ಯವಾಗಿ ಟೋಲ್ ದರ ಕೊಂಚ ಹೆಚ್ಷಾಗುತ್ತದೆ. ಈ ರಸ್ತೆಯಲ್ಲೂ ಫ್ಲೈ ಓವರ್ ಗಳು ಇರುವ ಕಾರಣ 250 ಟೋಲ್ ನಿಗದಿ ಆಗಬಹುದು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್ ಆಟೋಗೆ ಪ್ರವೇಶವಿಲ್ಲ!
ಬೆಂಗಳೂರು - ಮೈಸೂರು ಹೈ ವೆ ಗೆ ಹೆಸರು ಇಡುವ ವಿಚಾರ: ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಗೆ ವ್ಯಕ್ತಿಗಳ ಹೆಸರಿಡುವ ಪದ್ಧತಿ ಇಲ್ಲ. ಕರ್ನಾಟಕದಲ್ಲಿ ಜಿಲ್ಲೆಗಳಿಗೂ ಹೆಸರು ಇಡುವ ಪದ್ಧತಿ ಇಲ್ಲ. ವ್ಯಕ್ತಿಗಳ ಹೆಸರು ಇಡಿ ಎಂದು ಸಲಹೆ ಕೊಡುವವರು ಇದನ್ನು ತಿಳಿದು ಮಾತಾಡಲಿ. ಎಲ್ಲಾ ಜಿಲ್ಲೆಗಳ ಜನರು ಭಕ್ತಿಯಿಂದ ನೋಡುವುದು ಕಾವೇರಿ ತಾಯಿಯನ್ನು. ಕಾವೇರಿ ನದಿಯ ಈ ಭಾಗದ ಜನರಲ್ಲಿ ಪೂಜ್ಯ ಭಾವನೆ ಇದೆ. ಮಗ ದೊಡ್ಡನಾ ತಾಯಿ ದೊಡ್ಡೋರಾ ಅನ್ನೋ ರೀತಿ ಚರ್ಚೆ ಬೇಡ. ತಾಯಿಯೆ ದೊಡ್ಡವಳು. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಟ್ಟಿದ್ದೇವೆ. ರೈಲು ಗಳಿಗೆ ಒಡೆಯರ್ ಹೆಸರು ಇಟ್ಟಿದ್ದೇವೆ. ರಾಜ ಕುಟುಂಬಕ್ಕೆ ಏನೂ ಗೌರವ ಕೊಡಬೇಕೋ ಎಲ್ಲವನ್ನೂ ನಾವು ನೀಡಿದ್ದೇವೆ. ಈಗ ರಸ್ತೆಯ ನಾಮಕರಣ ವಿಚಾರದಲ್ಲಿ ಅನಗತ್ಯ ವಿವಾದ ಬೇಡ.