ಮಂಗಳೂರು ಗಲಭೆ: ಪೊಲೀಸ್‌ ಪ್ರವೇಶ ಸಮರ್ಥಿಸಿಕೊಂಡ ಮೆಡಿಕಲ್ ಕನ್ಸಲ್ಟೆಂಟ್ ಸಂಘ

By Suvarna NewsFirst Published Dec 24, 2019, 11:32 AM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಸಂದರ್ಭ ಪೊಲೀಸರು ಆಸ್ಪತ್ರೆಗೆ ಪ್ರವೇಶಿಸಿರುವ ಬಗ್ಗೆ ಅಸೊಶಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಸ್ಪಷ್ಟನೆ ನೀಡಿ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಮಂಗಳೂರು(ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಸಂದರ್ಭ ಪೊಲೀಸರು ಆಸ್ಪತ್ರೆಗೆ ಪ್ರವೇಶಿಸಿರುವ ಬಗ್ಗೆ ಅಸೊಶಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಸ್ಪಷ್ಟನೆ ನೀಡಿ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಮಂಗಳೂರು ಆಸ್ಪತ್ರೆಯಲ್ಲಿ ಪೊಲೀಸ್ ಪ್ರವೇಶವನ್ನು ಸಮರ್ಥಿಸಿದ ಅಸೊಶಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಪೊಲೀಸರ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಮಂಗಳೂರು ಗಲಭೆ: 148 ಮಂದಿ ವಿರುದ್ಧ FIR

ಸಂಘದ ಮೆಡಿಕೋ ಅಧ್ಯಕ್ಷ ಡಾ.ಸಂದೀಪ್ ರೈ ಪತ್ರಿಕಾ ಹೇಳಿಕೆ ನೀಡಿದ್ದು, ಪ್ರತಿಭಟನಾಕಾರರು ಬೀದಿಯಲ್ಲಿ ಅಶಾಂತಿ ಸೃಷ್ಟಿಸಿ ಆಸ್ಪತ್ರೆಯೊಳಗೆ ಅವಿತಿದ್ದರು. ವೈದ್ಯರಿಗೆ ಸಮಸ್ಯೆಯಾದಾಗ ನಾವು ಪೊಲೀಸರ ಸಹಾಯ ಪಡೆಯುತ್ತೇವೆ, ಇಲ್ಲೂ ಹಾಗೇ ಆಗಿದೆ. ಇದನ್ನ ಪೊಲೀಸರ ಅತಿರೇಕ ಎಂದು ಹೇಳಲು ಆಗಲ್ಲ ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಮಂಗಳೂರು ಗಲಭೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸರು ಶಾಂತಿ ಕಾಪಾಡಲು ಕರ್ಪ್ಯೂ ವಿಧಿಸಿದ್ದು ಅಭಿನಂದನಾರ್ಹ. ಹೊರಗೆ ಕಲ್ಲು ತೂರಿ ಆಸ್ಪತ್ರೆ ಒಳಗೆ ಬಂದು ಕೂತಿದ್ದಾರೆ. ಆಗ ಪೊಲೀಸರು ಆಸ್ಪತ್ರೆ ಒಳಗೆ ಬರೋದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.

ಮಂಗಳೂರು ಗಲಭೆ: ವಿಡಿಯೋ ಇದ್ರೆ ಕಳಿಸಿ ಎಂದ ಕಮಿಷನರ್ ಹರ್ಷ

click me!