ಮಂಗಳೂರು ಹಿಂಸಾಚಾರ : ಅಸಲಿ ದೃಶ್ಯದಿಂದ ಬಯಲಾಯ್ತು ಸಂಚು !

Suvarna News   | Asianet News
Published : Dec 24, 2019, 11:26 AM IST
ಮಂಗಳೂರು ಹಿಂಸಾಚಾರ : ಅಸಲಿ ದೃಶ್ಯದಿಂದ ಬಯಲಾಯ್ತು ಸಂಚು !

ಸಾರಾಂಶ

ಮಂಗಳೂರು ಗಲಭೆ ಪೂರ್ವ ನಿಯೋಜಿತ ಎನ್ನುವುದು ಈಗ ಲಭ್ಯವಾಗಿರುವ ದೃಶ್ಯಾವಳಿಗಳಿಂದ ಬಯಲಾಗಿದೆ. ಈ ದೃಶ್ಯ ಬಲಯ ಮಾಡಿದವರಿಗೆ ಅಭಿನಂದನೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. 

ಬೆಳಗಾವಿ (ಡಿ.24): ಮಂಗಳೂರಿನಲ್ಲಿ ನಡೆದ ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸಿದ್ದಕ್ಕೆ ಸುವರ್ಣ ನ್ಯೂಸ್ ಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. 

ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಅಂಗಡಿ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿರುವ ಅಲ್ಪ ಸಂಖ್ಯಾತರಿಗಾಗಿ ಈ ಕಾನೂನು ಜಾರಿ ಮಾಡಿದ್ದು, ಆದರೆ ವಿಪಕ್ಷಗಳು ಕೆಲ ಸಂಘಟನೆಗಳನ್ನು ಎತ್ತಿಕಟ್ಟಿದರು ಎಂದರು. 

ಇದೊಂದು ಪೂರ್ವ ನಿಯೋಜಿತ ಗಲಭೆ ಎನ್ನುವುದಕ್ಕೆ ಈಗ ಪ್ರಸಾರವಾದ ಸಿಸಿಟಿವಿ ದೃಶ್ಯಾವಳಿಗಳೇ ಇದಕ್ಕೆ ಸಾಕ್ಷಿಯಾಗಿದೆ. ಅನೇಕರು ಇಂತಹ ದೃಶ್ಯಾವಳಿಗಳನ್ನು ತೋರಿಸಿದ್ದರು. ಇದನ್ನು ನೋಡಿ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೆ ಎಂದರು. 

ಮಂಗಳೂರು ಹಿಂಸಾಚಾರದ ಹಿಂದಿನ Exclusive ದೃಶ್ಯಾವಳಿಗಳು!...

ಇದೀಗ ವಿಡಿಯೋಗಳು ಪ್ರಸಾರವಾಗಿದ್ದರಿಂದ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳ ಸಂಚು ಬಯಲಾಗಿದೆ. ಇವರ್ಯಾರಿಗೂ ಕೂಡ ದೇಶ ಮುಖ್ಯವಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿಯೂ ಮುಖ್ಯವಲ್ಲ ಎಂದು ಸುರೇಶ್ ಅಂಗಡಿ ಹೇಳಿದರು. 

ವಿರೋಧ ಪಕ್ಷಗಳಿಗೆ ಬೇಕಾಗಿರುವುದು ಕೇವಲ ವೋಟ್ ಬ್ಯಾಂಕ್. ವಾಸ್ತವ ಸ್ಥಿತಿ ತೋರಿಸಿದ ಸುವರ್ಣ ನ್ಯೂಸ್ ಗೆ ಸಾವಿರ ಅಭಿನಂದನೆ. ಇನ್ನಾದರೂ ಶಾಂತಿ ಕಾಪಾಡೋಣ ಎಂದು ಮನವಿ ಮಾಡುತ್ತೇನೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು. 

PREV
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ