ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಿರ್ಮಾಣವಾಗಿರೋ ಹೈಟೆಕ್ ಗ್ರಂಥಾಲಯ ನೋಡುಗರಿಗೆ ಗಮನ ಸೆಳೀತಿದೆ. ಸುಮಾರು 6 ಸಾವಿರಕ್ಕೂ ಹೆಚ್ಚು ಗ್ರಂಥಗಳ ಬಂಡಾರ ಹೊಂದಿರೋ ಗ್ರಾಮದ ಲೈಬ್ರರಿ ಓದುಗ ವರ್ಗ ಸೃಷ್ಟಿ ಮಾಡುವಲ್ಲಿ ಮಹತ್ತರ ಪಾತ್ರ ವಹಿಸ್ತಿದೆ.
ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಮೇ.28): ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಿರ್ಮಾಣವಾಗಿರೋ ಹೈಟೆಕ್ ಗ್ರಂಥಾಲಯ ನೋಡುಗರಿಗೆ ಗಮನ ಸೆಳೀತಿದೆ. ಸುಮಾರು 6 ಸಾವಿರಕ್ಕೂ ಹೆಚ್ಚು ಗ್ರಂಥಗಳ ಬಂಡಾರ ಹೊಂದಿರೋ ಗ್ರಾಮದ ಲೈಬ್ರರಿ ಓದುಗ ವರ್ಗ ಸೃಷ್ಟಿ ಮಾಡುವಲ್ಲಿ ಮಹತ್ತರ ಪಾತ್ರ ವಹಿಸ್ತಿದೆ. ಗ್ರಾಮದಲ್ಲಿ ಕಟ್ಟೆ ಪುರಾಣ ಹೇಳ್ತಾ ಕೂರುವವ ಸಂಖ್ಯೆ ಸಂಪೂರ್ಣ ಕಡಿಮೆಯಾಗಿದ್ದು, ಟೈಮ್ ಸಿಕ್ಕಾಗಲೆಲ್ಲ ಜನ ಲೈಬ್ರರಿಗೆ ಬಂದು ಓದುತ್ತಾರೆ.
ಸುಸಜ್ಜಿತ ಬಿಲ್ಡಿಂಗ್-ಆಕರ್ಷಕ ಪೇಂಟಿಂಗ್: ಗ್ರಾಮದ ಮಧ್ಯ ಭಾಗದಲ್ಲಿರೋ ಲೈಬ್ರರಿಗೆ ಗ್ರಾಮ ಪಂಚಾಯ್ತಿ ಸುಸಜ್ಜಿತ ಬಿಲ್ಡಿಂಗ್ ನೀಡಿದೆ. ಅಲ್ದೆ, ಲೈಬ್ರರಿ ಸುತ್ತ ತಂಪು ವಾತಾವರಣ ಇರ್ಲಿ ಅನ್ನೋ ಕಾರಣಕ್ಕೆ ಲಾನ್, ಹಾಗೂ ಗಿಡಗಳನ್ನ ಹಾಕಲಾಗಿದೆ. ಗ್ರಂಥಾಲಯದ ಒಳಗಡೆ ಚೇರ್ ಫುಲ್ ಆಗಿದ್ರೆ ಗಾರ್ಡನ್‌ನಲ್ಲೂ ಮಕ್ಕಳು ಕೂತು ಓದಲು ವ್ಯವಸ್ಥೆ ಮಾಡ್ಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್ ವೆಲ್ ಇದೆ. ಮೂರು ರೂಮ್ ಗಳ ಗ್ರಂಥಾಲಯದಲ್ಲಿ ಓದಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ರೀಡಿಂಗ್ ರೂಮ್ ನ ಗೋಡೆಗಳನ್ನ ಚೆಂದದ ಚಿತ್ತಾರದಿಂದ ಚಿತ್ರಿಸಲಾಗಿದ್ದು, ಓದುಗ ವಾತಾವರಣ ಸೃಷ್ಟಿಸಿದೆ.. ಮತ್ತೊಂದು ಕೊಠಡಿಯಲ್ಲಿ ಪುಸ್ತಕಗಳನ್ನ ನೀಟಾಗಿ ಜೋಡಿಸಿಡಲಾಗಿದೆ. ಇನ್ನೊಂದು ರೂಮ್ ನಲ್ಲಿ ಕಂಪೂಟರ್ ಇರಿಸಲಾಗಿದ್ದು ಮಕ್ಕಳಿಗೆ ತಂತ್ರಜ್ಞಾನದ ಪರಿಚಯಕ್ಕೆ ಸಹಾಯಕವಾಗ್ತಿದೆ.
Gadag: ಎಸಿಬಿ ಅಧಿಕಾರಿಗಳ ಹೆಸರಲ್ಲಿ ದೋಖಾ ಮಾಡ್ತಿದ್ದ ಆನ್‌ಲೈನ್ ಖದೀಮರು ಲಾಕ್!
ಗ್ರಾಮ ಪಂಚಾಯ್ತಿ ಅನುದಾನ, ದಾನಿಗಳ ಸಹಾಯದಿಂದ ಗ್ರಂಥಾಲಯ ಅಭಿವೃದ್ಧಿ: ಸುಮಾರು ಮೂರು ಲಕ್ಷ ಅನುದಾನದಲ್ಲಿ ಗ್ರಂಥಾಲಯದ ಉನ್ನತೀಕರಣ ಮಾಡ್ಲಾಗಿದೆ. ಜೊತೆಗೆ ಕೆಲ ಗ್ರಾಮಸ್ಥರು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪುಸ್ತಕಗಳು, ವೃತ್ತಪತ್ರಿಕೆಗಳನ್ನ ದಾನದ ರೂಪದಲ್ಲಿ ನೀಡ್ತಿದಾರೆ. ಗ್ರಂಥಾಲಯ ನಿರ್ವಹಣೆಗೆ ತಿಂಗಳಿಗೆ 12 ಸಾವಿರ ರೂಪಾಯನ್ನ ಪಂಚಾಯ್ತಿ ನೀಡ್ತಿದೆ. ಹೀಗಾಗಿ ಲೈಬ್ರರಿ ಅವಶ್ಯಕ ಪುಸ್ತಕಗಳಿಂದ ಸಂಮೃದ್ಧವಾಗಿದೆ.
ಗ್ರಂಥಾಲಯದ ಮೂಲಕ ಉದ್ಯೋಗ ಮಾಹಿತಿ: ಗಂಥಪಾಲಕ ಶಂಭುಲಿಂಗಯ್ಯ ಅವರು ವಿದ್ಯಾರ್ಥಿಗಳಿಗೆ ಅನುಕೂಲ ಆಗ್ಲಿ ಅಂತಾ ಉದ್ಯೂಗ ಮಾಹಿತಿಯನ್ನ ಗ್ರಂಥಾಲಯದ ನೋಟಿಸ್ ಬೊರ್ಡ್ ಗೆ ಅಂಟಿಸ್ತಾರೆ. ಅಲ್ದೆ, ನಮ್ಮ ವಾಟ್ಸಾಪ್ ಸ್ಟೇಟಸ್ ಗೆ ಪ್ರತಿದಿನ ಉದ್ಯೋಗ ಮಾಹಿತಿ ಹಾಕ್ತಾರೆ. ಇದ್ರಿಂದ ಯಾವ ಇಲಾಖೆಯಿಂದ ಜಾಬ್ ನೋಟಿಫಿಕೆಷನ್ ಹೊರ ಬಂದಿದೆ ಅನ್ನೋದು ಉದ್ಯೋಗಾಕಾಂಶಿಗಳಿಗೆ ತಿಳಿಯುತ್ತೆ. ಹೀಗಾಗಿ ಗ್ರಾಮದ ಗ್ರಂಥಾಲಯ ಉದ್ಯೋಗಾಕಾಂಶಿಗಳಿಗೂ ಅನುಕೂಲವಾಗಿದೆ.
ಮಕ್ಕಳ ಆಕರ್ಷಣೆಗೆ ವಿವಿಧ ಕಾರ್ಯಕ್ರಮ: ಗ್ರಂಥಾಲಯಕ್ಕೆ ಮಕ್ಕಳನ್ನ ಆಕರ್ಷಿಸುವ ನಿಟ್ಟಿನಲ್ಲಿ ಗ್ರಂಥಾಲಯದಲ್ಲಿ ಆಟಿಕೆ ಇಡಲಾಗಿದೆ. ಚೆಸ್ ಬೋರ್ಡ್ ಲೂಡೋ ಗೇಮ್ ಇರಿಸಲಾಗಿದೆ.. ಮಕ್ಕಳು ಆಡ್ತಾ ಆಡ್ತಾ ಓದಿನತ್ತ ಆಸಕ್ತ ತಾಳಲಿ ಅನ್ನೋದು ಗ್ರಂಥಪಾಲಕರ ಐಡಿಯಾ ಆಗಿದೆ.. ಮಕ್ಕಳು ತಯಾರಿಸಿದ ಮಣ್ಣಿನ ಕಲಾಕೃತಿಗಳು, ಪೇಂಟಿಂಗ್ ಗಳನ್ನ ಗ್ರಂಥಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದ್ರಿಂದ ಮಕ್ಕಳ ಹಾಗೂ ಗ್ರಂಥಾಲಯದ ಹತ್ತಿರ ಇರುವಂತಾಗಿದೆ.. ಅಲ್ದೆ, ಕಂಪ್ಯೂಟರ್ ಗಳಲ್ಲಿ ಎಜ್ಯೂಕೇಷನ್ ವಿಡಿಯೋ ಇರಿಸಲಾಗಿದ್ದು ಮಕ್ಕಳಿಗೆ ಹೆಚ್ಚಿಗೆ ಆಕರ್ಷಣೆಯಾಗ್ತಿದೆ.
Gadag: ಭಾರತೀಯ ಸೇನೆ ಸೇರಬೇಕೆಂಬ ಕನಸು ಕಂಡವರ ಕಣ್ಣಲ್ಲೀಗ ಆತಂಕ
ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ಆಗಿರೋದ್ರಿಂದ ಹೊಸ ಓದುಗ ವರ್ಗವೆ ಸೃಷ್ಟಿಯಾಗಿದೆ. ಮೊಬೈಲ್ ಟ್ಯಾಬ್ ಅಂತಾ ಬ್ಯೂಸಿ ಇರ್ತಿದ್ದ ಮಕ್ಕಳು ಲೈಬ್ರರಿಯತ್ತ ಮುಖ ಮಾಡಿದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಯುವಕರಿಗೂ ಲೈಬ್ರರಿ ಸಹಾಯಕವಾಗಿದೆ. ಊರ ಜನರ ಸಹಾಯ ಸಹಕಾರದಿಂದ ಹೈಟೆಕ್ ಲೈಬ್ರರಿ ಸರಾಗವಾಗಿ ನಡೀತಿದೆ.