ದೇಶ ಮೊದಲು, ದೇಶಕ್ಕಾಗಿ ನಾನಿದ್ದೇನೆ ಎಂಬ ಭಾವನೆ ಮೂಡಲಿ: ಕಾಗೇರಿ

By Suvarna News  |  First Published May 28, 2022, 10:45 PM IST

* ದೇಶ ಮೊದಲು, ದೇಶಕ್ಕಾಗಿ ನಾನಿದ್ದೇನೆ ಎಂಬ ಭಾವನೆ ಮೂಡಲಿ
* ಭಾರತ ದೇಶವು ವಿಶ್ವಗುರುವಿನ ಸ್ಥಾನ ಅಲಂಕರಿಸುವಂತಾಗಬೇಕು
* ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ


ಚಿಕ್ಕಬಳ್ಳಾಪುರ, (ಮೇ.28): ದೇಶದ ಪ್ರತಿಯೊಬ್ಬರಲ್ಲೂ ದೇಶ ಮೊದಲು ದೇಶಕ್ಕಾಗಿ ನಾನಿದ್ದೇನೆ ಎಂಬ ಭಾವನೆ ಮೂಡಬೇಕು. ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತ ದೇಶವು ವಿಶ್ವಗುರುವಿನ ಸ್ಥಾನ ಅಲಂಕರಿಸುವಂತಾಗಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ವಿಧುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿಆಯೋಜಿಸಲಾಗಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ 75ಸ್ಥಳಗಳಲ್ಲಿ ಸರ್ಕಾರ ಆಚರಿಸುತ್ತಿರುವ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವು ನಮ್ಮ ನಾಡಿನ ನೆಲ,ಜಲ, ಭಾಷೆ, ಸಂಸ್ಕೃತಿ ಕುರಿತು ಸದ್ಭಾವನೆಯನ್ನು ಮೂಡಿ ಸುವುದಲ್ಲದೆ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನವನ್ನು ಸಹ ಮೂಡಿಸುತ್ತದೆ ಎಂದರು. 

Tap to resize

Latest Videos

ದೇಶಕ್ಕೆ ಬೆರಳೆಣಿಕೆ ಜನರಿಂದ ಸ್ವಾತಂತ್ರ ಲಭಿಸಿಲ್ಲಾ ಕೋಟ್ಯಾನುಕೋಟಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ ಮಹಾತ್ಮಾ ಗಾಂಧಿಯವರ ಅಹಿಂಸಾ ತತ್ವ,ಲಾಲಾ ಲಜಪತ್ ರಾಯ್, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್,ಝಾನ್ಸಿ ರಾಣಿ ಲಕ್ಷ್ಮಿಬಾಯಿ, ರಾಣಿ ಚನ್ನಮ್ಮ ಧೋಂಡಿಯವಾಘ್ ಸೇರಿದಂತೆ ಇನ್ನೂ ಅನೇಕ ಮಹನೀಯರು ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡುಪಾಗಿಟ್ಟಿದ್ದಾರೆ ಎಂದು ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಮಜಲುಗಳನ್ನು ಹಾಗೂಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆಯನ್ನು ವಿಸ್ತಾರವಾಗಿ ತಿಳಿಸಿಕೊಟ್ಟರು. 

ಚಿತ್ರದುರ್ಗದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ

ವೀರಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ
 ವೀರಸಾವರ್ಕರ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಇಡೀ ಸಾವರ್ಕರ್  ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಆದ್ರೆ ಅವರ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಜನರಿಗೆ ದೇಶಭಕ್ತಿಯ ಜಾಗೃತಿ ಮೂಡಿಸಿದವರು ವೀರಸಾವರ್ಕರ್, ಅಂತವರ  ಬಗ್ಗೆ ಹಗುವಾಗಿ ಮಾತನಾಡಿದ ಮಾತ್ರಕ್ಕೆ ದೇಶದ ಸಮಗ್ರತೆ, ಏಕತೆಯನ್ನು ಘಾಸಿಗೊಳಿಸಲು ಸಾಧ್ಯವಿಲ್ಲ ಎಂದರು, ಇದೇ ವೇಳೆ ವೀರಸಾವರ್ಕರ್ ಅವರನ್ನು ಎಷ್ಟು ಸ್ಮರಿಸಿದರು ಸಾಲದು ಎಂದರು. 

ಬ್ರಿಟೀಷರ ವಿರುದ್ಧ ಮಾತ್ರ ನಮ್ಮ ಹೋರಾಟವಿರಲಿಲ್ಲ
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರೊಂದಿಗೆ ಹೋರಾಡಿದ ಘಟನೆಗಳನ್ನು ತಿಳಿಯುವುದರ ಜೊತೆಗೆ ಅದಕ್ಕಿಂತ ಹಿಂದಿನ ಕಾಲಘಟ್ಟದಲ್ಲಿ ಫ್ರೆಂಚರು,ಪೋರ್ಚುಗೀಸರು, ಡಚ್ಚರು, ಮೊಘಲರು ಹೂಣರು, ಶಕರು, ಅಲೆಗ್ಸಾಂಡರ್ ಹೀಗೆ ಅನೇಕರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ಸಂಪತ್ತನ್ನು ಲೂಟಿ ಮಾಡಿದರೂ ಕೂಡ ನಮ್ಮ ಸಾಂಸ್ಕೃತಿಕ ಭಾವನೆಗೆ ಧಕ್ಕೆ ತರಲು ಸಾಧ್ಯವಾಗಲಿಲ್ಲ. ಈ ಎಲ್ಲ ವಿಚಾರಗಳನ್ನು ತಿಳಿಯುವ ಅಗತ್ಯವಿದೆ ಇದು ನಮಗೆ ಪಾಠವಾಗಲಿದೆ.ಭಾರತೀಯರೆಲ್ಲರೂ ಒಗ್ಗಟ್ಟಾಗಿದ್ದರೆ ಯಾವುದೇ ಸವಾಲುಗಳು,ಸಮಸ್ಯೆಗಳು ಎದುರಾಗಲು ಸಾಧ್ಯವಿಲ್ಲ ಎಂದರು .

ಭವಿಷ್ಯದ ಸವಾಲುಗಳನ್ನು ತಿಳಿದುಕೊಳ್ಳಬೇಕು
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿವೆ, ಆದ್ರೆ ಮುಂಬರುವ ಸವಾಲುಗಳ ಬಗ್ಗೆ ತಿಳಿದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನಮ್ಮದೇ ದೇಶದಲ್ಲಿ ನಮ್ಮ ವಿರೋಧಿಗಳು ಇದ್ದಾರೆ. ಭಯೋತ್ಪಾದನೆ, ಮಾವೋವಾದಿ ಹೆಸರಿನಲ್ಲಿ ನಮ್ಮನ್ನು ಮಟ್ಟಹಾಕುವ ಪ್ರಯತ್ನದಲ್ಲಿದ್ದಾರೆ. ಅಂತಹ ಹಿತ ಶತ್ರುಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.

ಭಾರತ ಅನಾದಿಕಾಲದಿಂದಲೂ ನಂಬಿಕೊಂಡು ಬಂದಿರೋ ಸಂಸ್ಕ್ರತಿ ಮೇಲೆ ಅವಲಂಬಿತವಾಗಿದೆ. ಆದ್ರೆ ಇತ್ತೀಚೆಗೆ ಕೆಲವರು ರಾಮ ಹಾಗೂ ಕೃಷ್ಣನ ಬಗ್ಗೆ ಹಿಯಾಳಿಸಿ ಮಾತನಾಡುತ್ತಿದ್ದಾರೆ. ಇಂತಹ ಕೆಲವೊಂದು ಜನರು ಜಾಗೃತರಾಗುತ್ತಿದ್ದಾರೆ ಎಂದರು. 

ಬಾಬಾ ಸಾಹೇಬ್ ಅಂಬೇಡ್ಕರ್ ಮಹಾನ್ ಪುರುಷ
 ಸಂವಿಧಾನ ಶಿಲ್ಪಿ ಡಾ., ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹಾಡುಹೊಗಳಿದ ವಿಶ್ವೇಶ್ವರ ಹೆಗೆಡೆ ಕಾಗೇರಿ, ಅಂಬೇಡ್ಕರ್ ಅವರು ಪೂನಾ ಒಪ್ಪಂದವನ್ನು ಒಪ್ಪಿರಲಿಲ್ಲ ಎಂದಿದ್ದರೇ ದೇಶ ಬೇರೆ ದಿಕ್ಕಿನತ್ತ ಸಾಗುತಿತ್ತು. ಅವರು ಕೊಟ್ಟ ಸಂವಿಧಾನ ಅತ್ಯಂತ ಪವಿತ್ರ ಗ್ರಂಥ, ಚಹಾ ಮಾರುತಿದ್ದ ಮೋದಿ ಪ್ರಧಾನಿ ಆಗಬೇಕಾದರೆ ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿ ಎಂದ್ರು. ಇದೇ ವೇಳೆ ಭಾರತ ರತ್ನ ಇನ್ನೂ ಮುಂಚೇಯೆ ಸಿಗಬೇಕಾಗಿತ್ತು. ತಡವಾಗಿಯಾದ್ರು ಸಿಕ್ಕಿತಲ್ಲ ಎಂಬ ಸಂತೋಷವಿದೆ ಎಂದು ತಿಳಿಸಿದರು.

click me!