ಅಮೆರಿಕದ ಎಂಜಿನಿಯರ್ ಒಬ್ಬರ ಅದ್ಭುತ ಸಂಶೋಧನೆಯಿಂದ ಹೈಟೆಕ್ ದೋಂಟಿ ರೈತರ ಕೈ ಸೇರಲಿದೆ. ಈ ದೋಂಟಿಯಲ್ಲಿ ಅಡಕೆ ಮರ ಏರದೆ ಕೊಯ್ಲು ಹಾಗೂ ಔಷಧಿ ಸಿಂಪಡಣೆ ಮಾಡಬಹುದಾಗಿದ್ದು, ರೈತರಿಗೆ ಕೆಲಸಗಾರರನ್ನು ಹುಡುಕೋ ಕಿರಿಕಿರಿ ತಪ್ಪಲಿದೆ.
ಮಂಗಳೂರು(ಜ.05): ಅಡಕೆ ಕೊಯ್ಲು ಮತ್ತು ಬೋರ್ಡೊ ದ್ರಾವಣ ಸಿಂಪಡಣೆಗೆ ಅಮೆರಿಕದಲ್ಲಿರುವ ಹಾಸನ ಮೂಲದ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಸುಧಾರಿತ ಹೈಟೆಕ್ ದೋಂಟಿ ಸಂಶೋಧನೆ ಮಾಡಿದ್ದು ಅವರು ಶುಕ್ರವಾರ ಬೆಳ್ತಂಗಡಿ ಧರ್ಮಸ್ಥಳದಲ್ಲಿರುವ ಹರ್ಪಾಡಿ ತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಸವಿವರ ಮಾಹಿತಿ ನೀಡಿದ್ದಾರೆ.
ಪ್ರಾತ್ಯಕ್ಷಿಕೆ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಈ ವರೆಗೆ ಲಭ್ಯ ಇರುವ ಕೊಯ್ಲು ದೋಂಟಿಗಳಿಂದ ಇದು ವಿಭಿನ್ನವಾಗಿದ್ದು, ಯಾವುದೇ ಇಂಧನ ಅಥವಾ ವಿದ್ಯುತ್ ಬಳಸದೆ ಸುಲಭದಲ್ಲಿ ಉಪಯೋಗಿಸಬಹುದು.
ವಿಮಾನ ನಿಲ್ದಾಣದಲ್ಲಿ ತುಳು ನಾಡಿನ ಸಂಸ್ಕೃತಿ..! ಇಲ್ಲಿವೆ ಕಣ್ಮನ ಸೆಳೆಯೋ ಕಲಾಕೃತಿ
ಕ್ಯಾಂಪ್ಕೋ ಅಡಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ದೋಂಟಿ ಬಳಕೆಗೆ ಸೂಕ್ತ ಪೋತ್ಸಾಹ ನೀಡಲು ಪ್ರಯತ್ನಿಸಲಾಗುವುದು. ರೈತರಿಗೆ ಇದು ವರದಾನವಾಗಿದೆ ಎಂದು ಹೆಗ್ಗಡೆ ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದರು.
ದೋಂಟಿ ಸಂಶೋಧಕ ಹಾಗೂ ಎಂಜಿನಿಯರ್ ಬಾಲಸುಬ್ರಹ್ಮಣ್ಯ, ಮಲೆನಾಡು ಪ್ರದೇಶದ ತೋಟಗಳಲ್ಲಿ ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಇಂತಹ ದೋಂಟಿಗಳು ಬಳಕೆಯಲ್ಲಿವೆ. ಇದರಿಂದಾಗಿ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗುವುದಲ್ಲದೆ ತಿಂಗಳಿಗೆ 70, 000 ರು. ಉಳಿತಾಯವಾಗುತ್ತದೆ ಎಂದು ಹೇಳಿದ್ದಾರೆ.
ಮಂಗಳೂರು ಗೋಲಿಬಾರ್ ಸಂತ್ರಸ್ತರ ನೆರವಿಗೆ 2 ಕೋಟಿ ಸಂಗ್ರಹ?
ಪ್ರಸಕ್ತ ದೋಂಟಿಯ ಬೆಲೆ 80, 000 ರು. ಆಗಿದ್ದು ಮುಂದೆ ರೈತರಿಗೆ ಕೈಗೆಟಕುವ ಮಿತದರದಲ್ಲಿ ಸಾಧಾರಣ ಹತ್ತು ಸಾವಿರ ರು. ಗೆ ದೊರಕುವಂತೆ ಮಾಡಲಾಗುವುದು ಎಂದು ಬಾಲಸುಬ್ರಹ್ಮಣ್ಯ ಭರವಸೆ ನೀಡಿದ್ದಾರೆ. ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮತ್ತು ಕೃಷಿ ವಿಭಾಗದ ಮುಖ್ಯಸ್ಥ ಬಿ.ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ದೋಂಟಿಯ ವಿಶೇಷತೆಗಳು: