ಒಂದೇ ದಿನ ಮಾರುಕಟ್ಟೆಗೆ 10 ಸಾವಿರ ಕ್ವಿಂಟಾಲ್‌ಗೂ ಅಧಿಕ ಪ್ರಮಾಣದಲ್ಲಿ ಒಣ ಮೆಣಸು ಬಂದಿದ್ದು, ಚೀಲ ಇಳಿಸಲು ಸ್ಥಳವಿಲ್ಲದೇ ರೈತರು ಪರದಾಡಿದ ಘಟನೆ ನಡೆದಿದೆ.
ಗದಗ [ಜ.05]: ಒಣಮೆಣಸು ಗದಗ ಎಪಿಎಂಸಿ ಮಾರುಕಟ್ಟೆಗೆ ಶನಿವಾರ 10 ಸಾವಿರ ಕ್ವಿಂಟಾಲ್‌ಗೂ ಅಧಿಕ ಪ್ರಮಾಣದಲ್ಲಿ ಬಂದಿದ್ದು, ಚೀಲ ಇಳಿಸಲು ಸ್ಥಳವಿಲ್ಲದೇ ರೈತರು ಪರದಾಡಿದ ಘಟನೆ ನಡೆದಿದೆ. ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಗದಗ ಎಪಿಎಂಸಿಗೆ ಒಣಮೆಣಸು ಬಂದಿರುವುದು ಇತಿಹಾಸದಲ್ಲಿಯೇ ಗರಿಷ್ಠವಾಗಿದೆ. ಇದಕ್ಕೂ ಮುನ್ನ ಒಂದೇ ದಿನದಲ್ಲಿ ಮಾರುಕಟ್ಟೆಗೆ 6 ಸಾವಿರ ಕ್ವಿಂಟಲ್ ಬಂದಿರುವುದೇ ಅಧಿಕವಾಗಿತ್ತು.
ಒಣಮೆಣಸಿನಕಾಯಿ ಗದಗ ಮಾರುಕಟ್ಟೆಯಲ್ಲಿ ಮಾರಾಟ ವಹಿವಾಟು ನಡೆಸುವುದು ಶನಿವಾರ ಮಾತ್ರ. ಹಾಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಒಣಮೆಣಸಿನಕಾಯಿ ಮಾರಾಟಕ್ಕೆ ಬರುವ ನಿರೀಕ್ಷೆ ಇತ್ತಾದರೂ ಇಷ್ಟೊಂದು ಪ್ರಮಾಣದಲ್ಲಿ ರೈತರು ಮಾರಾಟಕ್ಕೆ ತರುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ.
undefined
ಬೆಳಗಾವಿ ಗಡಿ ವಿವಾದ: ಉದ್ಧವ್ ಠಾಕ್ರೆ ಸಿಎಂ ಆದ ಮೇಲೆ ಗಡಿ ಕ್ಯಾತೆ ಶುರು...
ಶುಕ್ರವಾರ ತಡರಾತ್ರಿಯಿಂದಲೇ ವಾಹನಗಳು ಸಾಕಷ್ಟುಸಂಖ್ಯೆಯಲ್ಲಿ ಬಂದ ಹಿನ್ನೆಲೆಯಲ್ಲಿ ಶನಿವಾರ ಬೆಳಗಿನಜಾವ ಎಪಿಎಂಸಿ ಮೆಣಸಿನಕಾಯಿ ಮಾರುಕಟ್ಟೆಪ್ರವೇಶ ಮಾಡಲು ಸಾಧ್ಯವಾಗದೇ ವಾಹನಗಳು ಸಾಲುಗಟ್ಟಿಗಂಟೆಗಟ್ಟಲೇ ನಿಲ್ಲುವಂತಾಯಿತು. ನಂತರ ಪೊಲೀಸ್ ಮತ್ತು ಎಪಿಎಂಸಿ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ರೈತರು ವಾಹನಗಳಿಂದ ಕೆಳಗೆ ಇಳಿಸಿದರು. ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಒಣಮೆಣಸಿನಕಾಯಿ ಪ್ರತಿ ಕ್ವಿಂಟಾಲ್‌ಗೆ .22 ಸಾವಿರದವರೆಗೂ ಮಾರಾಟವಾಗಿದೆ.