ವಿದ್ಯಾರ್ಥಿನಿಗೆ ನಿತ್ಯವೂ ಲೈಂಗಿಕ ಕಿರುಕುಳ : ಪ್ರೌಢಶಾಲೆ ಶಿಕ್ಷಕ ಅರೆಸ್ಟ್

Kannadaprabha News   | Asianet News
Published : Feb 01, 2021, 07:28 AM IST
ವಿದ್ಯಾರ್ಥಿನಿಗೆ ನಿತ್ಯವೂ ಲೈಂಗಿಕ ಕಿರುಕುಳ  :  ಪ್ರೌಢಶಾಲೆ ಶಿಕ್ಷಕ ಅರೆಸ್ಟ್

ಸಾರಾಂಶ

ವಿದ್ಯಾರ್ಥಿನಿಗೆ ನಿತ್ಯವೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಅರೆಸ್ಟ್ ಆಗಿದ್ದಾನೆ.   ಆತನ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿನಿ ಶಾಲೆಯನ್ನೇ ತರೆಯುವ ನಿರ್ಧಾರಕ್ಕೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು ಇದಾದ ಬಳಿಕ ಆತ ಪೊಲೀಸರ ವಶವಾಗಿದ್ದಾನೆ. 

ಮಂಡ್ಯ (ಫೆ.01):  ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರೌಢಶಾಲೆ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿರುವ ಪ್ರಕರಣ ಕೆ.ಆರ್‌.ಪೇಟೆ ತಾಲೂಕಿನಿಂದ ವರದಿಯಾಗಿದೆ.

 ತಾಲೂಕಿನ ಹರಿಹರಪುರ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಬಿ.ಟಿ.ಕೃಷ್ಣೇಗೌಡ ಬಂಧಿತರು. ಮುಖ್ಯಶಿಕ್ಷಕನ ಅಸಭ್ಯ ವರ್ತನೆಯಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದು, ಈ ವಿಚಾರವನ್ನು ಪೋಷಕರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. 

1 ವರ್ಷದ ಪ್ರೀತಿಸಿದವ ಫೋನ್ ಮಾಡಿ ನಿನ್ನ ಮದ್ವೆ ಆಗಲ್ಲ ಎಂದ : ಇತ್ತ ಆಕೆ ಪ್ರಾಣವನ್ನೇ ಬಿಟ್ಟಳು ..

ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಜ.27ರಂದು ಶಾಲಾಭಿವೃದ್ಧಿ ಸದಸ್ಯರ ಸಭೆ ಕರೆದು ಚರ್ಚಿಸಿ ವಿದ್ಯಾರ್ಥಿನಿಯರೊಂದಿಗೆ ಮಹಿಳಾ ಶಿಕ್ಷಕಿಯರ ಮೂಲಕ ಪ್ರತ್ಯೇಕವಾಗಿ ವಿಷಯ ಸಂಗ್ರಹಿಸಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದಾರೆ.

 ಮೇಲಧಿಕಾರಿಗಳ ಸೂಚನೆ ಮೇರೆಗೆ ಬಿಇಒ ಜ.30ರಂದು ಕೆ.ಆರ್‌.ಪೇಟೆ ಗ್ರಾಮಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ಶಿಕ್ಷಕನನ್ನು ಬಂಧಿಸಿದ್ದಾರೆ.

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು