ಕೆಆರ್‌ಎಸ್ ಜಲಾಶಯದ ಬಳಿಯ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ.
ಮಂಡ್ಯ (ಫೆ.24): ಮಂಡ್ಯ ಜಿಲ್ಲೆಯ ಜೀವನಾಡಿ ಆಗಿರುವ ಕೆಆರ್‌ಎಸ್ ಆಣೆಕಟ್ಟೆಯ ಸುತ್ತಲಿನ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಆದರೆ, ಗಣಿಗಾರಿಕೆ ಮಾಡುವವರು ನ್ಯಾಯಾಲಯದ ಮೊರೆ ಹೋಗಿದ್ದು, ಕೆಲವು ತಿಂಗಳಿಂದ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ಹೈಕೋರ್ಟ್‌ನಿಂದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡಲಾಗಿದ್ದು, ಇದರಿಂದ ಪಾಂಡವಪುರ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ತುಸು ದೂರದಲ್ಲಿ ಮೈಸೂರಿನ ಒಡೆಯರ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಂಬಾಡಿ ಕಟ್ಟೆ (ಕೆಆರ್‌ಎಸ್ ಜಲಾಶಯ) ನಿರ್ಮಾಣ ಮಾಡಿದ್ದಾರೆ. ಆದರೆ, ಜಲಾಶಯದ ಸುತ್ತಲೂ ಇರುವ ಬೆಟ್ಟದಲ್ಲಿ ದೊಡ್ಡ ದೊಡ್ಡ ಬ್ಲಾಸ್ಟ್ ಮಾಡುವ ಮೂಲಕ ಜಲಾಶಯಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ ಎಂದು ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿತ್ತು. ಆದರೆ, ಈ ಪ್ರಕರಣ ಏಳೆಂದು ವರ್ಷಗಳಿಂದ ಗಂಭೀರ ಸ್ವರೂಪಕ್ಕೆ ತಿರುಗಿದೆ. ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಿಂದ ಸಂಸದೆಯಾದ ಸುಮಲತಾ ಅಂಬರೀಶ್ ಅವರು ಕೆ.ಆರ್.ಎಸ್. ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವಲ್ಲಿ ಯಶಸ್ವಿ ಆಗಿದ್ದಾರೆ.
undefined
ಡಿಸಿಎಂ ಡಿ.ಕೆ. ಶಿವಕುಮಾರ್ ಬಂಗಾರಪ್ಪನವರ ಶಿಷ್ಯ, ಬೇಳೂರು ಗೋಪಾಲಕೃಷ್ಣ ಮಾನಸ ಪುತ್ರ: ಮಧು ಬಂಗಾರಪ್ಪ
ಆದರೆ, ಗಣಿಗಾರಿಕೆಗೆ ಪರವಾನಗಿ ಪಡೆದುಕೊಂಡವರು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡುವಂತೆ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್, ಕೆಆರ್‌ಎಸ್ ಜಲಾಶಯದಿಂದ ತುಸು ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಪರೀಕ್ಷೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಅನುಮತಿಯನ್ನು ನೀಡಿದೆ. ಒಂದು ವೇಳೆ ಟ್ರಯಲ್ ಬ್ಲಾಸ್ಟ್ ಯಶಸ್ವಿಯಾಗಿ ಮುಂದಿನ ದಿನಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ದೊಡ್ಡ ಸಮಸ್ಯೆ ಆಗಲಿದೆ. ಆದ್ದರಿಂದ ರೈತರಲ್ಲಿ ಬೇಬಿ ಬೆಟ್ಟದ ಗಣಿಗಾರಿಕೆ ಕುರಿತ ತೀರ್ಪಿನ ಬಗ್ಗೆ ಆತಂಕ ಮನೆ ಮಾಡಿದೆ.
ಈ ಕುರಿತು ಪಾಂಡವಪುರ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ನನ್ನ ಉದ್ದೇಶ 8 ಗ್ರಾಮ ಪಂಚಾಯತಿ ಜನರು ಇದರ ಮೇಲೆ ಜೀವನ ಕಟ್ಟಿಕೊಂಡಿದ್ದಾರೆ. ಇಲ್ಲಿ ಕೈಗುಳಿ ಮಾಡಲು ಮಾತ್ರ ಅವಕಾಶ ಮಾಡಿಕೊಡಿ. ಈ ಬಗ್ಗೆ ನಮ್ಮ ತಂದೆಯಾದಿಯಾಗಿ ರೈತಸಂಘವೂ ಹೋರಾಟ ಮಾಡಿದೆ. ಆದರೆ, ದೊಡ್ಡ ದೊಡ್ಡ ಬ್ಲಾಸ್ಟ್ ಗೆ ನಾನು ವಿರೋಧ ಇದ್ದೇನೆ. ನಮಗೆ, ಕಾರ್ಮಿಕರು ಹಾಗೂ 8 ಗ್ರಾಮ ಪಂಚಾಯಿತಿಗಳ ಜನರಿಗಿಂತ ಕೆಆರ್‌ಎಸ್ ಅಣೆಕಟ್ಟು ಸಂರಕ್ಷಣೆ ಮುಖ್ಯವಾಗಿದೆ ಎಂದರು.
ಕೋಟಿ ಕೋಟಿ ಕೊಟ್ರೂ ಬಾರ್ ಲೈಸೆನ್ಸ್ ಸಿಗೊಲ್ಲ, ಅಂಥದ್ರಲ್ಲಿ ದಿನಸಿ ಅಂಗಡೀಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೇಳ್ತಾನೆ!
ಇನ್ನು ಕೆಆರ್‌ಎಸ್ ಜಲಾಶಯದ ಸುತ್ತಲೂ ಇರುವ ಕ್ರಷರ್‌ಗಳನ್ನು ಮುಚ್ಚಿಸಬೇಕು. ಇಲ್ಲವಾದರೇ ಬ್ಲಾಸ್ಟ್ ಮಾಡುತ್ತಾರೆ. ಕೈಗುಳಿ ಕೆಲಸ ಮಾಡುವವರಿಗೆ ಮಾತ್ರ ಅವಕಾಶ ಮಾಡಿಕೊಡಬೇಕು. ಅವರಿಗೂ ಸಹ ಬ್ಲಾಸ್ಟಿಂಗ್ ಮಾಡದಂತೆ ಸೂಚನೆ ಕೊಡಬೇಕು. ಯಾರಾದರೂ ಬ್ಲಾಸ್ಟ್ ಮಾಡಲು ಬಂದರೇ, ನಾನೇ ಅದನ್ನು ತಡೆಯಲು ಮುಂದೆ ನಿಲ್ಲುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ. ಕೆಆರ್ ಎಸ್ ನಮಗೆ ಮುಖ್ಯ, ಗಣಿಗಾರಿಕೆ ಅಲ್ಲ. ಗಣಿಗಾರಿಕೆ ಮಾಡುವವರಿಗೂ ಕೂಡ ಕೆಆರ್‌ಎಸ್ ಜಲಾಶಯ ನಮ್ಮದು ಎಂಬ ಮನೋಭಾವನೆ ಬರಬೇಕು. ಆದರೆ, ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎಂಬುದರ ಬಗ್ಗೆ ಆತಂಕವಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣ ಹೇಳಿದರು.