ಚಾಮರಾಜನಗರ ಹೆಲಿ ಟೂರಿಸಂ ಆರಂಭ, ದಸರಾ ಸಂಭ್ರಮಕ್ಕೆ ಮೆರಗು ಕೊಟ್ಟ ವಿಶೇಷ ಯೋಜನೆ

Published : Oct 16, 2026, 06:26 PM IST
Chamarajanagar Heli Tourism

ಸಾರಾಂಶ

ಚಾಮರಾಜನಗರ ಜಿಲ್ಲಾಡಳಿತವು ದಸರಾ ಹಬ್ಬದ ಪ್ರಯುಕ್ತ ಇದೇ ಮೊದಲ ಬಾರಿಗೆ 'ಹೆಲಿ ಟೂರಿಸಂ' ಪರಿಚಯಿಸಿದೆ. ಕೇವಲ 2800 ರೂ. ಪಾವತಿಸಿ 10 ನಿಮಿಷಗಳ ಕಾಲ ಹೆಲಿಕಾಪ್ಟರ್ ಮೂಲಕ ನಗರ, ಅರಣ್ಯ ಹಾಗೂ ಸುವರ್ಣಾವತಿ ಡ್ಯಾಂ ವೀಕ್ಷಿಸಬಹುದು.

ಚಾಮರಾಜನಗರ: ನಾಡ ಹಬ್ಬ ದಸರಾ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ದಸರಾ ಸಡಗರದಲ್ಲಿರುವ ಚಾಮರಾಜನಗರ ಜಿಲ್ಲೆಯ ಜನರಿಗೆ ಜಿಲ್ಲಾಡಳಿತ ಒಂದೊಳ್ಳೆ ನ್ಯೂಸ್ ನೀಡಿದೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ 'ಹೆಲಿ ಟೂರಿಸಂ' ವ್ಯವಸ್ಥೆ ಮಾಡಿದೆ. ಹೆಲಿಕಾಪ್ಟರ್ ಹತ್ತಿ ಅದರ ಮೂಲಕ ಸುತ್ತಾಡುವ ಮೂಲಕ ವಿಶೇಷ ಅನುಭವವನ್ನು ದಸರಾ ಸಂಭ್ರಮದಲ್ಲಿ ನೀವು ಪಡೆಯಬಹುದಾಗಿದೆ.

ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವ್ಯವಸ್ಥೆ

ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 'ಹೆಲಿ ಟೂರಿಸಂ'ಗೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ಗಣೇಶ್ ಪ್ರಸಾದ್, ಮಂಜುನಾಥ್, ಕೃಷ್ಣಮೂರ್ತಿ ಹಾಗೂ ಡಿಸಿ, ಎಸ್ಪಿಯಿಂದ ಹೆಲಿ ರೈಡ್ ನಡೆಸುವ ಮೂಲಕ ಚಾಲನೆ ನೀಡಿದ್ದಾರೆ.

ಸುಮಾರು 10 ನಿಮಿಷಗಳ ಕಾಲ ಚಾಮರಾಜನಗರ ದರ್ಶನವನ್ನು ಮಾಡಿಸಲಾಗುತ್ತದೆ. ನಗರ, ಅರಣ್ಯ ಪ್ರದೇಶ ಹಾಗೂ ಸುವರ್ಣಾವತಿ ಡ್ಯಾಂ ವೀಕ್ಷಣೆ ಮಾಡಬಹುದಾಗಿದೆ. ನೀವು ಆಕಾಶದಿಂದ ಇದೆಲ್ಲವನ್ನೂ ವೀಕ್ಷಿಸಬಹುದು. ಹೆಲಿಕಾಪ್ಟರ್ ಮೂಲಕ ವೀಕ್ಷಣೆಯ ಅವಕಾಶ ನಿಮ್ಮದಾಗಲಿದ್ದು, ಹೊಸ ಅನುಭವ ನೀಡಲಿದೆ.

ಬೆಲೆ ಎಷ್ಟು ಎಷ್ಟು?

ಹೆಲಿಕಾಪ್ಟರ್ ಮೂಲಕ ಚಾಮರಾಜನ ನಗರವನ್ನು ಕಣ್ತುಂಬಿಕೊಳ್ಳುವ ಅವಕಾಶ ನಿಮ್ಮದಾಗಲಿದೆ. ಅದರೆ ಅದಕ್ಕೆ ನೀವು 2800 ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. 2800 ರೂಪಾಯಿ ನೀಡಿದರೆ ಪೈಲೆಟ್ ನಿಮ್ಮನ್ನ ಆಕಾಶದ ತುತ್ತ ತುದಿಗ ಕರೆದುಕೊಂಡು ಹೋಗಿ ಜಿಲ್ಲೆಯ ವೈಭವವನ್ನು ಅಲ್ಲಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಯಾರಿಗೆಲ್ಲ ಹೆಲಿಕಾಪ್ಟರ್ ಮೂಲಕ ದಸರಾ ಎಂಜಾಯ್ ಮಾಡಬೇಕು ಅಂದುಕೊಂಡಿದ್ದಿರೋ ಅವರೆಲ್ಲ ಈಗಲೇ ಬುಕ್ಕಿಂಗ್ ಮಾಡಬಹುದು. ಜೊತೆಗೆ ವಿಮಾನ, ಹೆಲಿಕಾಪ್ಟರ ಹತ್ತಿ ಅನುಭವ ಪಡೆಯದವರಿಗೂ ಇದು ಒಳ್ಳೆಯ ಅವಕಾಶವಾಗಿದೆ.

ಬುಕ್ಕಿಂಗ್ ಪ್ರಕ್ರಿಯೆ ಆರಂಭ

ಜಿಲ್ಲಾಡಳಿತ ಹೆಲಿ ಟೂರಿಸಂ ಆರಂಭ ಹಿನ್ನೆಲೆಯಲ್ಲಿ ಬುಕ್ಕಿಂಗ್ ವ್ಯವಸ್ಥೆಯನ್ನೂ ಮಾಡಿದೆ. ನೀವು ಅಲ್ಲಿಗೆ ಹೋಗಿ ಅಂದರೆ ಅಂಬೇಡ್ಕರ್ ಕ್ರೀಡಾಂಗಣಕ್ಕೆ ನೇರವಾಗಿ ಹೋಗಿ ಬುಕಿಂಗ್ ಮಾಡಿಕೊಳ್ಳಬಹುದು. ಇಲ್ಲ, ಆನ್‌ಲೈನಲ್ಲೂ ಬುಕಿಂಗ್ ಸೇವೆ ಲಭ್ಯವಿದೆ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಮಂದಿ ಬುಕ್ಕಿಂಗ್ ಮಾಡಿದ್ದಾರೆ. ನೀವು ಎಂಜಾಯ್ ಮಾಡಬಹುದು.

ಎಷ್ಟು ದಿನ ಇರುತ್ತದೆ?

ಹೆಲಿಕಾಪ್ಟರ್ ಮೂಲಕ ಆಗಸಕ್ಕೆ ಹಾರಿ, ಭೂಮಿಯನ್ನ ಕಣ್ತುಂಬಿಕೊಳ್ಳುವ ಮಜಾನೇ ಬೇರೆ. ಒಂದೊಳ್ಳೆ ಅನುಭವವನ್ನು ಹೆಲಿ ಟೂರಿಸಂ ನೀಡಲಿದೆ. ದಸರಾ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಈ ಯೋಜನೆ ಕೇವಲ ಐದು ದಿನಗಳು ಮಾತ್ರ ನಡೆಯಲಿದೆ. ಐದು ದಿನಗಳ ನಂತರ ನಿಮಗೆ ಇಂಥ ಅವಕಾಶ ಮತ್ತೆ ಸಿಗೋದಿಲ್ಲ. ಅದಕ್ಕಾಗಿ ಮುಂದಿನ ದಸರಾ ತನಕ ನೀವು ಕಾಯಬೇಕಾಗುತ್ತದೆ.

PREV
Read more Articles on
click me!

Recommended Stories

HDK: ಕರ್ನಾಟಕದ ಹಣ ಲೂಟಿ ಮಾಡಿ 'ಕಾಕ್ರೋಚ್'ಗೆ ಫಂಡಿಂಗ್; ಎಚ್.ಡಿ.ಕುಮಾರಸ್ವಾಮಿ ಸ್ಫೋಟಕ ಆರೋಪ!
Upsc ಪ್ರಿಲಿಮ್ಸ್ ಕ್ಲಿಯರ್ ಮಾಡಿದ್ದ ಐಎಎಸ್ ಆಕಾಂಕ್ಷಿ ಈಗ ಕರ್ನಾಟಕದ ಶಾಸಕ!